ಮದುವೆ ಊಟ ಮಾಡಿ 1200 ಜನ ಅಸ್ವಸ್ಥ
ಕಾಂಗ್ರೆಸ್ ಮುಖಂಡರ ಪುತ್ರನ ಮದುವೆ ಸಮಾರಂಭದಲ್ಲಿ ಘಟನೆ
ಗುಜರಾತ್‍ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದ ಘಟನೆ
ಮದುವೆಯಲ್ಲಿ ಆಹಾರ ಸೇವಿಸಿದ ನಂತರ 1,200 ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಗುಜರಾತ್ : ಕಾಂಗ್ರೆಸ್ ನಾಯಕರೊಬ್ಬರ ಮಗನ ಮದುವೆಯಲ್ಲಿ ಭಾಗಿಯಾಗಿದ್ದ ಅತಿಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ.. ಸುಮಾರು 1,200 ಮಂದಿ ಅಸ್ವಸ್ಥರಾಗಿದ್ದು , ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಗುಜರಾತ್‍ನ ಮೆಹ್ಸಾನಾ ಜಿಲ್ಲೆಯ ವಿಸ್ನಗರ ತಾಲೂಕಿನ ಸವಲ ಗ್ರಾಮದಲ್ಲಿ ತಡಡರಾತ್ರಿ ಈ ಘಟನೆ ನಡೆದಿದೆ.
ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥರಾಜ್‍ಸಿನ್ಹ್ ಗೋಹಿಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು , ಊಟದ ಬಳಿಕ ಜನರು ವಾಂತಿ ಮಾಡಲು ಪ್ರಾರಂಭಿಸಿದ್ದಾರೆ. ನಂತರ ಅವರನ್ನು ವಿಸ್ನಗರ, ಮೆಹ್ಸಾನಾ ಮತ್ತು ವಡ್ನಗರದ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಇದೀಗ ಮದುವೆಯಲ್ಲಿ ನೀಡಲಾದ ಆಹಾರದ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಆಹಾರ ಮತ್ತು ಔಷಧ ಇಲಾಖೆಯಿಂದ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಸಾವಳ ಗ್ರಾಮದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಮಗನ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ.. ಊಟದ ಮೆನ್ಯುವಿನಲ್ಲಿ ಮಾಂಸಾಹಾರವೂ ಇತ್ತು ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..