ಇಂಫಾಲ: ಮಣಿಪುರದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 13 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲೀತು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭದ್ರತಾ ಪಡೆಗಳು ಇಲ್ಲಿಯವರೆಗೆ 13 ಶವ ವಶಪಡಿಸಿಕೊಂಡಿವೆ. ಕೆಲವರ ಗುರುತು ಇನ್ನೂ ಪತ್ತೆಯಾಗಿಲ್ಲ. ಅವರೆಲ್ಲ ಸ್ಥಳೀಯರಲ್ಲ ಎಂದು ತಿಳಿದು ಬಂದಿದೆ.
ತೆಂಗನೌಪಾಲ್ ಜಿಲ್ಲೆಯ ಸೈಬೋಲ್ ಹತ್ತಿರ ಲೀಥು ಗ್ರಾಮದಲ್ಲಿ ಎರಡು ಗುಂಪುಗಳ ಉಗ್ರಗಾಮಿಗಳ ನಡುವೆ ಈ ಘಟನೆ ನಡೆದಿದೆ.
ಸಾವನ್ನಪ್ಪಿದವರು ಲೀಥು ಪ್ರದೇಶದವಲ್ಲ ಎನ್ನಲಾಗಿದೆ. ಗುಂಡಿನ ಚಕಮಕಿಯಿಂದಾಗಿ ಮೃತ ದೇಹದ ಮೇಲೆ ಹಲವು ಗುಂಡಿನ ಗಾಯಗಳಿವೆ.