ಮಣಿಪುರದಲ್ಲಿ ಮತ್ತೆ ಗುಂಡಿನ ಸದ್ದು ಮಾಡಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಈ ಘಟನೆ ಅಲ್ಲಿನ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನಡೆದಿದೆ. ಎರಡು ಸಮುದಾಯಗಳ ಮಧ್ಯೆ ಘರ್ಷಣೆ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸಗೋಲ್ಸೆಮ್ ಲೋಯಾ ಸಾವನ್ನಪ್ಪಿದ ವ್ಯಕ್ತಿ. ಜಿಲ್ಲೆಯ ಗಡಿ ಪ್ರದೇಶಗಳಾದ ಟ್ವಿಚಿನ್, ಫಾಮೋಲ್, ಸಿಮೋಲ್ ಗ್ರಾಮ (ಕುಕಿ ಗ್ರಾಮ) ಮತ್ತು ಥಮ್ನಾಪೊಕ್ಪಿ ಪ್ರದೇಶದಲ್ಲಿ ಬೆಳಿಗ್ಗೆ ಈ ದಾಳಿ ನಡೆದ ಕುರಿತು ವರದಿಯಾಗಿದೆ.
ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಸಿಮೋಲ್ ಗ್ರಾಮದಲ್ಲಿ ನಿಯೋಜಿಸಲಾದ 20 ಜಾಟ್ ರೆಜಿಮೆಂಟ್ ಮಾರ್ಟರ್ ಶೆಲ್ಗಳನ್ನು ಹಾರಿಸುತ್ತಿದ್ದಂತೆ ದಾಳಿ ನಿಂತಿದೆ. ದಾಳಿಯಲ್ಲಿ ರೆಜಿಮೆಂಟ್ ಅಧಿಕಾರಿಯೊಬ್ಬರು ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ.