ಜಿಮ್ ಗಳ ಬಂದ್ ಆದೇಶ ಹಿಂಪಡೆದು 50 % ಸಾಮರ್ಥ್ಯದ ನಿರ್ಬಂಧ ವಿಧಿಸಿದ ಸರ್ಕಾರ..!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಜೋರಾಗಿದ್ದು, ಸರ್ಕಾರ ಜಿಮ್ ಹಾಗೂ ಚಿತ್ರಮಂದಿರಗಳ ಮೇಲೆ ಕೆಲ ನಿರ್ಬಂಧನೆಗಳನ್ನ ವಿಧಿಸಿತ್ತು. ಬಳಿಕ ಒತ್ತಾಯಗಳು, ಪ್ರತಿಭಟಟನೆಗಳು ಹಾಗೂ ಮನವಿಗಳಿಗೆ ಮಣಿದ ಸರ್ಕಾರ ಸಿನಿಮಾ ಮಂದಿರಗಳಲ್ಲಿ ಏಪ್ರಿಲ್ ರ ವರೆಗೂ ಹೌಸ್ ಫುಲ್ ಇರಲು ಅವಕಾಶ ನೀಡಿದೆ. ಇತ್ತ ಜಿಮ್ ಗಳನ್ನ ಬಂದ್ ಮಾಡುವ ಆದೇಶ ನೀಡಿದ್ದ ಸರ್ಕಾರ ಇದನ್ನ ಕೂಡ ಹಿಂಪಡೆದಿದ್ದು, ಶೇ 50 ರಷ್ಟು ಸಾಮಾರ್ಥ್ಯದೊಂದಿಗೆ ಜಿಮ್ ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಧ್ಯಕ್ಷರೂ ಆದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಜಿಮ್ ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಸಾಮರ್ಥ್ಯವಿಲ್ಲದಂತೆ ನೋಡಿಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸುವ ಜತೆಗೆ ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶಿಸಲಾಗಿದೆ. ವ್ಯಾಯಾಮ ಶಾಲೆಯ ಪರಿಕರಗಳನ್ನು ಬಳಸಿದ ನಂತರ ಪ್ರತಿ ಬಾರಿ ಸ್ಯಾನಿಟೈಸ್ ಮಾಡಬೇಕು. ಸರ್ಕಾರದ ನಿಯಮ ಉಲ್ಲಂಘಿಸಿದರೆ ಜಿಮ್ ಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಾಯ್ ಫ್ರೆಂಡ್ ನಂಬಿ ಹೋದ ಅಪ್ರಾಪ್ತೆ ಮೇಲೆ ಎರಗಿಬಿದ್ದ ರಾಕ್ಷಸರು – ಪ್ರಿಯಕರ ಸೇರಿ 8 ಮಂದಿಯಿಂದ ಗ್ಯಾಂಗ್ ರೇಪ್..!
ಬೆಲೆ ಏರಿಕೆ ತಡೆಯಲು ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕು : ಸತೀಶ್ ಜಾರಕಿಹೊಳಿ