ಪಕ್ಷಕ್ಕೆ ಚೂರಿ ಹಾಕಿದವರ ಪಾಪದ ಕೊಡ ತುಂಬಿದೆ : ಸಿದ್ದುಗೆ ಹೆಚ್ ಡಿಕೆ ಗುದ್ದು siddaramaiah
ರಾಮನಗರ : ನಮ್ಮ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರಲ್ಲಾ ಅವರ ಪಾಪದ ಕೊಡ ತುಂಬಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಕಾಂಗ್ರೆಸ್ ನಲ್ಲಿ ಶುರುವಾಗಿರುವ ಸಿಎಂ ಅಭ್ಯರ್ಥಿ ಗಲಾಟೆ ವಿಚಾರವಾಗಿ ಚನ್ನಪಟ್ಟಣದಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲಿ ವಲಸೆ ಹಾಗೂ ಮೂಲ ಎಂಬ ಜಗಳ ಇಲ್ಲಿಗೆ ನಿಲ್ಲೊದಿಲ್ಲಾ.
ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಾರಂಭವಾಗಿದೆ. ಜೆಡಿಎಸ್ ಪಕ್ಷವನ್ನ ಮುಗಿಸಲೆಬೇಕೆಂದು ಹೊರಟ ನಾಯಕರ ಪಾಪದಕೊಡ ತುಂಬಿದೆ.
ನಮ್ಮ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದರಲ್ಲಾ ಅವರ ಪಾಪದ ಕೊಡ ತುಂಬಿದೆ ಎಂದು ಹೆಸರೇಳದೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇನ್ನು ರಾಜ್ಯದ ಜನತೆ ಇವರಿಗೆಲ್ಲಾ ಪಾಠ ಕಲಿಸುವ ಸಮಯ ದೂರ ಇಲ್ಲ. ಮುಂದಿನ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.