ಅಕ್ಕಿ ಕೊಡ್ತೀನಿ ಅನ್ನೋದೆ ನಿಮ್ಮ ಆಡಳಿತನಾ..?, ಇದನ್ನ ಆಡಳಿತ ಅಂತಾರಾ : ಹೆಚ್ ವಿಶ್ವನಾಥ್ ಕಿಡಿ
ಅಧಿಕಾರಕ್ಕೆ ಬಂದ್ರೆ ಹತ್ತು ಕೆ.ಜಿ. ಅಕ್ಕಿ ಕೊಡ್ತೀನಿ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಹೆಚ್ ವಿಶ್ವನಾಥ್ ಮೈಸೂರಿನಲ್ಲಿ ಟಾಂಗ್ ಕೊಟ್ಟಿದ್ದಾರೆ. ಅಕ್ಕಿ ಕೊಡ್ತೀನಿ ಅನ್ನೋದೆ ನಿಮ್ಮ ಆಡಳಿತನಾ..?, ಇದನ್ನ ಆಡಳಿತ ಅಂತಾರಾ. ಸರ್ಕಾರಿ ಹಣದ ವೆಚ್ಚಕ್ಕೆ ಎಲ್ಲೂ ಕಡಿವಾಣ ಇಲ್ಲ. 6.5 ಕೋಟಿ ಜನರಲ್ಲಿ4.35 ಲಕ್ಷ ಜನ ಬಿಪಿಎಲ್ ನಲ್ಲಿ ಕವರ್ ಆಗಿದ್ದಾರೆ. 1.27 ಲಕ್ಷ ಬಿಪಿಎಲ್ ಕಾರ್ಡ್ ಇದೆ. 85% ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅಂದ್ರೆ ಕರ್ನಾಟಕ ರಾಜ್ಯ ಯಾವ ಅಭಿವೃದ್ಧಿ ಪಥದಲ್ಲಿ ಇದೆ ಎಂದು ಸಿದ್ದರಾಮಯ್ಯ ಅವರನ್ನ ಪ್ರಶ್ನೆ ಮಾಡಿದ್ದಾರೆ. ಇನ್ನೂ ಇದನ್ನು ಯಾರು ಕೇಳುವವರಿಲ್ಲವಾ. ಅದೆಷ್ಟೋ ಜನ ಕಾಳ ಸಂತೆ ಕೋರರು ಕ್ಯೊಟ್ಯಾಧಿಪತಿ ಆಗಿದ್ದಾರೆ. ಎಲ್ಲಿಯೂ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ನೀವು ಸುಮ್ಮನೆ ಅಕ್ಕಿ ಕೊಡ್ತೀನಿ ಅಂದ್ರೆ ಇದೇನು ಆಡಳಿತ ಅಂತಾರ ಎಂದು ಕಿಡಿಕಾರಿದ್ದಾರೆ. ಅಲ್ದೇ ನಿಮ್ಮ ದರ್ಪ, ದಕ್ಷತೆ ದುರಹಂಕಾರ ದುರಾಡಳಿತ ಆಗುತ್ತದೆ. ದರ್ಪ ದುರಹಂಕಾರದಿಂದಲೇ ಸಿದ್ದರಾಮಯ್ಯ 130 ರಿಂದ 70 ರಷ್ಟು ಸೀಟ್ ಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯರನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ : ಹೆಚ್ ವಿಶ್ವನಾಥ್
ಅಲ್ಲದೇ ಅನ್ನಭಾಗ್ಯ ಅಕ್ಕಿಯಿಂದ ಸಾಕಷ್ಟು ಮಂದಿ ಕೋಟ್ಯಾಧಿಪತಿ ಆಗಿದ್ದಾರೆ. ರಾಜ್ಯದ ಅಕ್ಕಿ, ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಅಕ್ರಮ ಸಾಗಣೆ ಆಗಿದೆ. ಇದೆಲ್ಲ ಜನರ ತೆರಿಗೆ ಹಣ, ಅದು ಪೋಲಾಗುತ್ತಿದೆ. ಇದನ್ನು ಯಾರೂ ಕೇಳಿದ್ದಾರೆ. ರಾಜ್ಯದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಇಗಳನ್ನು ಹೆಚ್ಚು ಮಾಡಿಲ್ಲ. ಕೇವಲ ದರ್ಪ, ದುರಂಹಕಾರದಿಂದ ಸರ್ಕಾರ ನಡೆಸಲು ಸಾಧ್ಯವಿಲ್ಲ. ಎಲ್ಲಾ ಸರ್ಕಾರಗಳು ಹೀಗೇ ನಡೆದುಕೊಳ್ಳುತ್ತಿವೆ. ಇದರಿಂದಲೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಸಿದ್ದರಾಮಯ್ಯ 10 ಕೆಜಿ ಅಕ್ಕಿ ಬೇಕಾದರೆ ಕೊಡಲಿ. ಆದರೆ ಅನ್ನಭಾಗ್ಯ ಅಕ್ಕಿ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲಿ ಎಂದಿದ್ದಾರೆ.