ಹಲ್ದ್ವಾನಿಯಲ್ಲಿ ನಡೆದ ಕೋಮು ಹಿಂಸಾಚಾರ ಪೂರ್ವ ನಿಯೋಜಿತ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಹೇಳಿದ್ದಾರೆ.
ಅಕ್ರಮವಾಗಿ ನಿರ್ಮಿಸಿದ್ದ ಮದರಸಾವನ್ನು ನೆಲಸಮಗೊಳಿಸಿದ ನಂತರ ಬಂಭೋಲ್ಪುರದಲ್ಲಿ ಈ ಸಮಸ್ಯೆ ಆರಂಭವಾಗಿದೆ. ದಾಳಿಗೂ ಮುನ್ನ ಆರೋಪಿಗಳು ಛಾವಣಿಯ ಮೇಲೆ ಕಲ್ಲುಗಳನ್ನು ಸಂಗ್ರಹಿಸಿದ್ದರು.
ದಾಳಿಕೋರರು ಪೆಟ್ರೋಲ್ ಬಾಂಬ್ಗಳನ್ನು ಬಳಸಿದ್ದರು. ಅಲ್ಲದೇ, ಪೊಲೀಸ್ ಠಾಣೆಗೆ ಗುಂಡು ಹಾರಿಸಿ, ಬೆಂಕಿ ಹಚ್ಚಿದ್ದಾರೆ. ದಾಳಿಕೋರರು ಸರ್ಕಾರಿ ಆಸ್ತಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಹಿಂದೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದರಲ್ಲಿ ಗೊಂದಲವಿದ್ದು, ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹಿಂಸಾಚಾರದಡಿ ಮೂರು ಎಫ್ ಐಆರ್ ಗಳು ದಾಖಲಾಗಿವೆ. ಸುಮಾರು 20ಕ್ಕೂ ಅಧಿಕ ಜನರನ್ನು ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.