ಗೆಲ್ಲಲು 5 ರನ್ ಬೇಕಿದ್ದಾಗ ನೋ ಬಾಲ್.. ಅದರಲ್ಲೂ ಫೈನಲ್ ಮ್ಯಾಚ್.. ಮುಂದೆ..
ಬರ್ಮಿಂಗ್ ಹ್ಯಾಮ್ ವೇದಿಕೆಯಾಗಿ ಶನಿವಾರ ನಡೆದ ಟಿ 20 ಬ್ಲಾಸ್ಟ್ 2022ರ ಫೈನಲ್ ಪಂದ್ಯದಲ್ಲಿ ಹೈಡ್ರಾಮಾ ನಡೆದಿದೆ.
ಲಂಕಾಶೈರ್, ಹ್ಯಾಂಪ್ಶೈರ್ ನಡುವಿನ ಪಂದ್ಯದಲ್ಲಿ ಹ್ಯಾಂಪ್ ಶೈರ್ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಯ್ತು.
ಕೊನೆಯ ಎಸೆತಕ್ಕೆ ಐದು ರನ್ ಗಳ ಅವಶ್ಯಕತೆ ಇದ್ದಾಗ ಲಂಕಾಶೈರ್ ಆಟಗಾರ ರಿಚರ್ಡ್ ಗ್ಲಿಸನ್ ಅವರನ್ನ ನಾಥನ್ ಎಲ್ಲಿಸ್ ಅದ್ಭುತ ಯಾರ್ಕರ್ ನೊಂದಿಗೆ ಕ್ಲಿನ್ ಬೋಲ್ಡ್ ಮಾಡಿದರು.
ಇದರೊಂದಿಗೆ ಹ್ಯಾಂಪ್ ಶೈರ್ ಗೆಲುವು ಖಚಿತವಾಯ್ತು, ಇದರೊಂದಿಗೆ ಹ್ಯಾಂಪ್ ಶೈರ್ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿಕೊಂಡರು.
ಆದ್ರೆ ಅಂಪೈರ್ ನೋ ಬಾಲ್ ಎಂದು ಘೋಷಣೆ ಮಾಡಿದರು.
![hampshire-win-nail-biting-t20-blast-final saaksha tv](http://saakshatv.com/wp-content/uploads/2022/07/hu-300x265.jpg)
ಇದರೊಂದಿಗೆ ಮೈದಾನದಲ್ಲಿ ಒಂದು ಬಾರಿ ನಿಶಬ್ಧ ವಾತಾವರಣ ನಿರ್ಮಾಣವಾಯ್ತು.
ಅಂತಿಮ ಎಸೆತ ನೋ ಬಾಲ್ ( ಫ್ರಿ ಹಿಟ್ ಜೊತೆಗೆ ಒಂದು ರನ್ ಕೂಡ ದೊರೆಯಿತು ) ಇದರಿಂದ ಸಮೀಕರಣಗಳು ಬದಲಾದವು.
ಲಾಂಕಾಶೈರ್ ಕೊನೆಯ ಎಸೆತಕ್ಕೆ ಮೂರು ರನ್ ಗಳ ಅವಶ್ಯಕತೆ ಇತ್ತು.
ಈ ಸಂದರ್ಭದಲ್ಲಿ ಚೆಂಡನ್ನು ತೆಗೆದುಕೊಂಡ ಎಲ್ಲಿಸ್ ಸ್ಲೋ ಬಾಲ್ ಎಸೆದರು. ಇದನ್ನ ಮಿಸ್ ಮಾಡಿದ ಬ್ಯಾಟರ್ ಗಳು ಕೇವಲ ಒಂದು ರನ್ ಮಾತ್ರ ಬೈಸ್ ಮೂಲಕ ಪಡೆದುಕೊಂಡರು.
ಇದರೊಂದಿಗೆ ಹ್ಯಾಂಪ್ ಶೇರ್ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದ್ರು.
ಕೊನೆಯ ಎಸೆತದಲ್ಲಿ ನಿರ್ಮಾಣವಾಗಿದ್ದ ಹೈಡ್ರಾಮಾಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚುಟುಕು ಕ್ರಿಕೆಟ್ ನಲ್ಲಿ ಇಂತಹ ಮ್ಯಾಚ್ ಎಂದೂ ನೋಡಿಲ್ಲವೆಂದು ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.