ADVERTISEMENT
Saturday, February 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭವಿಷ್ಯ ಸುಂದರಗೊಳಿಸುವ ಆಶಾಜ್ಯೋತಿಯೊಂದಿಗೆ ಬಂದಿದೆ ಮತ್ತೊಮ್ಮೆ ದೀಪಾವಳಿ…

Shwetha by Shwetha
November 14, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv deepavali 2020
Share on FacebookShare on TwitterShare on WhatsappShare on Telegram

ಭವಿಷ್ಯ ಸುಂದರಗೊಳಿಸುವ ಆಶಾಜ್ಯೋತಿಯೊಂದಿಗೆ ಬಂದಿದೆ  ಮತ್ತೊಮ್ಮೆ ದೀಪಾವಳಿ… Saakshatv deepavali 2020

ಮಂಗಳೂರು, ನವೆಂಬರ್ 14: ದೀಪದಿಂದ ದೀಪವ ಹಚ್ಚಬೇಕು ಮಾನವ…
ಪ್ರೀತಿಯಿಂದ ಪ್ರೀತಿ ಹಂಚಿರೋ….
ಮಣ್ಣಿನಿಂದ ಹಣತೆಯಾದರೇ…
ಬೀಜದಿಂದ ಎಣ್ಣೆಯಾಯಿತು….
ಅರಳೆಯಿಂದ ಬತ್ತಿಯಾದರೇ….
ಸುಡುವ ಬೆಂಕಿ ಜ್ಯೋತಿಯಾಯಿತು… Saakshatv deepavali 2020

Related posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

February 14, 2026
india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026

ದೀಪಗಳ ಹಬ್ಬ ದೀಪಾವಳಿ ಮತ್ತೊಮ್ಮೆ ಬಂದಿದೆ… ದೈನಂದಿನ ಜೀವನದ ಒತ್ತಡ ಜಂಜಾಟಗಳಿಂದ ಬಸವಳಿದಿದ್ದ ನೀರಸ ಬದುಕನ್ನು ಸುಂದರಗೊಳಿಸಲು ಮನೆ ಮನಗಳಲ್ಲಿ ಬೆಳಕಿನ ಸಂಭ್ರಮವನ್ನು ಹೊತ್ತು ತಂದಿದೆ.

Saakshatv deepavali

ದೀಪಾವಳಿ ಎಂದರೆ ಅದು ಕೇವಲ ಹಬ್ಬವಷ್ಟೇ ಅಲ್ಲ.. ಅದು ನೆನಪಿನ ಮೆರವಣಿಗೆ…
ನಮ್ಮ ಸಂಸ್ಕೃತಿ ಸಂಪ್ರದಾಯದ ಪ್ರತೀಕವಾಗಿರುವ ದೀಪಾವಳಿ ಎಂದರೆ ನೆನಪಾಗುವುದು ಬ್ರಾಹ್ಮಿಮುಹೂರ್ತದಲ್ಲಿನ ಎಣ್ಣೆ ಸ್ನಾನದ ಸಂಭ್ರಮ.. ನೆಲಕ್ಕೂ ಮೈಯಿಗೂ ಎಣ್ಣೆಯ ಅಭಿಷೇಕ… ಹೊಸ ಬಟ್ಟೆ ತೊಟ್ಟು ಸಾಲು ಸಾಲು ಹಣತೆಗಳನ್ನು ಬೆಳಗುವ, ಪಟಾಕಿ ಹಚ್ಚುವ ಸಂಭ್ರಮ ಸಡಗರ…

ದೀಪಾವಳಿಯ ದೀಪ ಎಂದರೆ ಅದು ಬರೀ ಬೆಳಕಲ್ಲ.. ಹೊಸತನದ ದ್ಯೋತಕ…
ಬದುಕಲ್ಲಿನ ಕತ್ತಲು ಕರಗಿ ಬೆಳಕು ಮೂಡಬಹುದೆಂಬ ಭರವಸೆ.. ಏಕತಾನತೆಯಿಂದ ಮಡುಗಟ್ಟಿದ ಬದುಕಿಗೆ ಚೈತನ್ಯವನ್ನು ನೀಡುವ ಬೆಳಕು…

ತುಳುನಾಡಿನಲ್ಲಿ ದೀಪಾವಳಿ ಹಬ್ಬ ಪ್ರಾರಂಭವಾಗುವುದು ನೀರು ತುಂಬುವ ಹಬ್ಬದಿಂದ.. ಹಿಂದಿನ ದಿನ ನೀರು ಕಾಯಿಸುವ ಹಂಡೆಯನ್ನು ಶುಚಿಗೊಳಿಸಿ, ಹೂವಿನಿಂದ ಅಲಂಕಾರ ಮಾಡಿ ನೀರು ತುಂಬಿಸಿಟ್ಟು ಪೂಜಿಸಿ, ಮರುದಿನ ಇನ್ನೂ ಸೂರ್ಯ ಮೂಡುವ ಮೊದಲೇ ಮಾಡುವ ಎಣ್ಣೆ ಸ್ನಾನದಿಂದ…
ದೀಪಾವಳಿ ಹಬ್ಬದ ಜೊತೆಗೆ ಬಾಲ್ಯದ ನೆನಪಿನ ಬುತ್ತಿಯೂ ಬಿಚ್ಚಿಕೊಳ್ಳುತ್ತದೆ… ಹಬ್ಬಕ್ಕಾಗಿ ದೂರದೂರಿನಲ್ಲಿರುವ ಕುಟುಂಬ ಸದಸ್ಯರ ಆಗಮನ.. ಮನೆ ತುಂಬಾ ಜನ.. ಬೆಳಗಿನ ಜಾವ 4 ಗಂಟೆಗೆ ಇನ್ನೂ ನಿದ್ದೆಯ ಮಡಿಲಿನಲ್ಲಿ ಬೆಚ್ಚಗೆ ಮಲಗಿರುತ್ತಿದ್ದ ನಮ್ಮನೆಲ್ಲಾ ಎಣ್ಣೆ ಸ್ನಾನಕ್ಕೆ ಎಬ್ಬಿಸುತ್ತಿದ್ದ ಅಜ್ಜನ ನೆನಪು ಸದಾ ಹಸಿರು…

ಎಣ್ಣೆ ಸ್ನಾನದ ಬಳಿಕ ಹೊಸ ಬಟ್ಟೆ ತೊಟ್ಟು ಹಿರಿಯರ ಆಶೀರ್ವಾದ ಪಡೆದು ಸಿಹಿ ಅವಲಕ್ಕಿ ಪ್ರಸಾದ ಜೊತೆಗೆ ಬಿಸಿ ಬಿಸಿ ಉದ್ದಿನ ದೋಸೆಯ ಉಪಹಾರ.. ಸಂಜೆಯಾಗುತ್ತಿದ್ದಂತೆ ಗೂಡು ದೀಪ ಏರಿಸಿ ಸಾಲು ಸಾಲು ಹಣತೆಗಳನ್ನು ಬೆಳಗುವ ಸಂಭ್ರಮ. ಬಳಿಕ ಸುರು ಸುರು ಕಡ್ಡಿ, ಮಾಲೆ ಪಟಾಕಿ, ಮಳೆ ದುರ್ಸುಗಳ ಅಬ್ಬರ..

Saakshatv deepavali 2020

ಎರಡನೇ ದಿನ ಅಮಾವಾಸ್ಯೆ. ಧನ ದೇವತೆ ಲಕ್ಷ್ಮೀಯನ್ನು ಇದೇ ಸಮಯದಲ್ಲಿ ಪೂಜಿಸಲಾಗುತ್ತದೆ. ಅಂಗಡಿ, ಉದ್ಯಮ, ವರ್ತಕರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡಿ, ಅಂಗಡಿ ಪೂಜೆ ನೆರವೇರಿಸುತ್ತಾರೆ. ‌
ತುಳುನಾಡಿನಲ್ಲಿ ಹಿರಿಯರಿಗೆ ದೇವರ ಸ್ಥಾನ ನೀಡಿ ಪೂಜಿಸಲಾಗುತ್ತದೆ. ಕುಟುಂಬದಲ್ಲಿ ದೈವಾಧೀನರಾದ ಹಿರಿಯರನ್ನು ನೆನಪಿಸಿಕೊಂಡು ಈ ದಿನ ಹಿರಿಯರ ನೆನಪಿನಲ್ಲಿ ಕೆಲವು ವಿಧಿಗಳನ್ನು (ಪರ್ಬಗು ಬಳಸುನ) ಆಚರಿಸಲಾಗುತ್ತದೆ.
ಮರುದಿನ ಬಲಿಪಾಡ್ಯಮಿ.

ಅಂದು ವಿಶೇಷವಾಗಿ ಬಲೀಯೇಂದ್ರನನ್ನು ಕರೆಯಲಾಗುತ್ತದೆ ಹಾಗೂ ಜಾನುವಾರುಗಳನ್ನು ಪೂಜಿಸಲಾಗುತ್ತದೆ. ಬೆಳಗ್ಗೆ ಮನೆಯ ಜಾನುವಾರುಗಳಿಗೆ ಸ್ನಾನ ಮಾಡಿಸಿ, ಕೃಷಿ ಉಪಕರಣಗಳನ್ನು ಶುಚಿಗೊಳಿಸಿ ಜೋಡಿಸಲಾಗುತ್ತದೆ. ಬಳಿಕ ಅಂಗಳ ಅಥವಾ ಗದ್ದೆ ಬದಿಯಲ್ಲಿ ಪಾಲೆ (ಹಾಲೆ) ಮರದ ಕಂಬವನ್ನು ನೆಟ್ಟು, ಕಂಬದ ತುದಿಯ ಕವಲಿಗೆ ಕೋಲು ಕಟ್ಟಿ ಅಲಂಕರಿಸಲಾಗುತ್ತದೆ. ಬಳಿಕ ಮೇಲೊಂದು ಹಣತೆ ಹಚ್ಚಿ, ಬಲೀಂದ್ರ (ಬಲೀಂದ್ರ ಮರ)ವನ್ನು ಪ್ರತಿಷ್ಠಾಪಿಸಲಾಗುತ್ತದೆ.

Saakshatv deepavali balipadyami

ಕತ್ತಲೆಯಾಗುತ್ತಿದ್ದಂತೆಯೇ ಮನೆಯ ಅಂಗಳದ ಸುತ್ತಲೂ ದೀಪವನ್ನು ಬೆಳಗಿಸಲಾಗುತ್ತದೆ. ಗೋವಿಗೆ, ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡಲಾಗುತ್ತದೆ. ಜಾನುವಾರುಗಳಿಗೆ ದೀಪ ಬೆಳಗಿ ಹಬ್ಬದ ಬೆಳಕು ನೋಡು ಎಂದು ಪ್ರಾರ್ಥಿಸಿ, ಬಗೆ ಬಗೆಯ ಖಾದ್ಯಗಳನ್ನು ತಿನ್ನಿಸಲಾಗುತ್ತದೆ.
ನಂತರ ಎಲ್ಲರೂ ಬಲೀಂದ್ರ ಮರದ ಬಳಿ ಸೇರಿ ಆರತಿ ಬೆಳಗಿ, ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ‘ಬಲೀಂದ್ರ ಬಲೀಂದ್ರ ಕೂ…ಕೂ…’ ಎಂದು ಎಲ್ಲರೂ ಸೇರಿ ಮೂರು ಬಾರಿ ಕೂಗುತ್ತಾರೆ. ಇದು ಬಲೀಂದ್ರನನ್ನು ಭೂಮಿಗೆ ಸ್ವಾಗತಿಸುವ ಕ್ರಮ ಎಂದು ಇಲ್ಲಿನ ‌ಹಿರಿಯರ ನಂಬಿಕೆ.
ಹಿಂದೆ ತುಳುನಾಡನ್ನು ಆಳಿದ ಬಲೀಂದ್ರ ಎಂಬ ಸತ್ಯಸಂಧನೂ ಧರ್ಮದುರಂಧರನೂ ಆಗಿದ್ದ ಅಸುರ ಚಕ್ರವರ್ತಿ ನಾಡಿನ ಜನರ ಯೋಗಕ್ಷೇಮ, ಮಳೆ ಬೆಳೆ, ಜಾನುವಾರುಗಳನ್ನು ನೋಡಿಕೊಂಡು ಹೋಗಲು ಪಾತಾಳದಿಂದ ಬರುತ್ತಾನೆ ಎಂಬುವುದು ಇಲ್ಲಿನ ಜನರ ನಂಬಿಕೆ. ವರ್ಷಕ್ಕೊಮ್ಮೆ ದೀಪಾವಳಿಯಂದು ತನ್ನ ನಾಡನ್ನು ನೋಡಲು ಬರುವ ಬಲಿ ಚಕ್ರವರ್ತಿಗೆ ದೀಪವನ್ನು ಬೆಳಗಿ ಈ ರೀತಿಯಲ್ಲಿ ತುಳುನಾಡಿನ ಜನತೆ ಸ್ವಾಗತ ಕೋರುತ್ತಾರೆ.

ಒಟ್ಟಿನಲ್ಲಿ ದೀಪಾವಳಿಯೆಂದರೆ, ತುಳುವರ ಬದುಕಿನ ಹೊಸ ಪುಟವನ್ನು ತಿರುವಿ ಹಾಕುವ, ಪ್ರೀತಿ ಸ್ನೇಹ ಸಹಬಾಳ್ವೆ ಮಮಕಾರ ಹಿರಿಯರ ಮೇಲಿನ ಗೌರವ ಮಿಳಿತವಾಗಿರುವ, ಎಲ್ಲರೂ ಒಟ್ಟಾಗಿ ಖುಷಿಯಿಂದ ಅರ್ಥಪೂರ್ಣವಾಗಿ ಸಂಭ್ರಮಿಸುವ ಆಚರಣೆ.

ಪುರಾಣದಲ್ಲಿ ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಹದಿನಾಲ್ಕು ವರ್ಷ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದ ಶ್ರೀ ರಾಮನನ್ನು ಪ್ರಜೆಗಳು ಬಂಗಾರದ ಕಲಶವನ್ನು ಮಣಿರತ್ನಗಳಿಂದ ಅಲಂಕರಿಸಿ ದೀಪವನ್ನು ಹಚ್ಚಿ ಸ್ವಾಗತಿಸಿದರು. ಆ ಸಂಭ್ರಮವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ ಎಂದು ಒಂದು ಪುರಾಣದ ಕಥೆ ಹೇಳುತ್ತದೆ. ‌

Saakshatv deepavali

ಶ್ರೀಕೃಷ್ಣ, ನರಕಾಸುರನನ್ನು ವಧಿಸಿ, ಆತನ ಸೆರೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಿಡುಗಡೆ ಮಾಡುತ್ತಾನೆ.
ಆ ದಿನವನ್ನು ನರಕ ಚತುರ್ದಶಿ ಎಂದು ಆಚರಣೆ ಮಾಡಲಾಗುತ್ತದೆ ಎಂದು ಪುರಾಣದ ಮತ್ತೊಂದು ಕಥೆ ಹೇಳಿದರೆ, ಅಮವಾಸ್ಯೆಯ ದಿನ ಧನ ಹಾಗೂ ಭಾಗ್ಯದೇವತೆಯಾದ ಲಕ್ಷ್ಮಿ ದೇವಿಯು ಭೂಮಿಗೆ ಆಗಮಿಸುತ್ತಾಳೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಹಾಗಾಗಿ ಹಣತೆ ದೀಪ, ಗೂಡುದೀಪಗಳಿಂದ ಮನೆ ಬೆಳಗಿಸಲಾಗುತ್ತದೆ ಎಂದು ಮಗದೊಂದು ಕಥೆ ತಿಳಿಸುತ್ತದೆ.
ವಿಷ್ಣುಪುರಾಣದ ಪ್ರಕಾರ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಬಲಿಪಾಡ್ಯದಂದು ಎತ್ತಿದ್ದು, ಹಾಗಾಗಿ ಅಂದು ಗೋಪೂಜೆ ಹಾಗೂ ಗೋವರ್ಧನನ ಪೂಜೆ ಮಾಡಲಾಗುತ್ತದೆ.

Saakshatv deepavali 2020

ದೀಪಾವಳಿ ಹಬ್ಬ ಮನೆ ಮನೆಗಳನ್ನು ಬೆಳಗಲಿ. ಕತ್ತಲಿನಿಂದ ಬೆಳಕಿನೆಡೆಗೆ.. ಅಜ್ಞಾನದಿಂದ ಸುಜ್ಞಾನದೆಡೆಗೆ ದೀಪಾವಳಿಯ ಬೆಳಕು ಪಸರಿಸಲಿ…ಕೊರೋನಾ ಮುಕ್ತ ವಿಶ್ವವಾಗಲಿ ಎಂಬ ಆಶಯದೊಂದಿಗೆ ಸಂಭ್ರಮದ ದೀಪಾವಳಿ ಹಬ್ಬವನ್ನು ಆಚರಿಸೋಣ..
ಓದುಗರಿಗೆಲ್ಲಾ ಸಾಕ್ಷಾಟಿವಿ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು…

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1325123272652910606?s=19

Tags: Deepavalideepavali festivalSaakshatv deepavali 2020
ShareTweetSendShare
Join us on:

Related Posts

Those who say they have no peace of mind in life, read this story and you will know where to find peace.

ಜೀವನದಲ್ಲಿ ಮನಸ್ಸಿಗೆ ಶಾಂತಿ ಇಲ್ಲ ಎಂದು ಹೇಳುವವರು ಈ ಕಥೆಯನ್ನು ಓದಿ, ಶಾಂತಿ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿಯುತ್ತದೆ.

by admin
February 14, 2026
0

ಮನಸ್ಸಿನ ಶಾಂತಿಗೆ ದಾರಿ ಜೀವನದಲ್ಲಿ ಮನಸ್ಸಿನ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಮನಸ್ಸಿನ ಶಾಂತಿ ಎಲ್ಲಿದೆ? ಒಬ್ಬ ಋಷಿ ತನ್ನ ಶಿಷ್ಯನಿಗೆ...

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by admin
February 14, 2026
0

ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ "ದಾಯಾದಿಗಳ...

KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

by admin
February 14, 2026
0

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ...

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

by Shwetha
February 14, 2026
0

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹3.6 ಲಕ್ಷ ಕೋಟಿ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ...

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ  ಹೈಕೋರ್ಟ್

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ ಹೈಕೋರ್ಟ್

by Shwetha
February 14, 2026
0

ಲಕ್ನೋ: ಜಾತಿ ಎನ್ನುವುದು ವ್ಯಕ್ತಿಯೊಬ್ಬನ ಹುಟ್ಟಿನಿಂದ ನಿರ್ಧಾರವಾಗುತ್ತದೆಯೇ ವಿನಃ ಆತ ಮಾಡಿಕೊಳ್ಳುವ ವಿವಾಹ ಅಥವಾ ಬದಲಾಯಿಸುವ ಧರ್ಮದಿಂದಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram