ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು
ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣೆಳಲ ತಂಪಿನಲಿ ತಂಗಿರುವೆನು..
ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು
ಇಲ್ಲೆಂಬ ಗಾದೆ ನುಡಿ ಕೇಳಿರುವೆನು…
ಗೆಳೆತನದ ಶುಚಿ ರುಚಿಯು ಇದಕೂ ಮಿಗಿಲಾಗಿಹುದು
ಕಂಡ ಕಂಡವರೇನು ಬಲ್ಲರಿದನು…
ಉಂಡವನು ಕಂಡಿಹನು ಇದರ ಹದನು..
ಚಿಕ್ಕದಿರುವಾಗ ಕೇಳಿದ ಈ ಕವಿವಾಣಿಯನ್ನು ಇಂದು ಓದಿದರೆ ಅದರ ಅರ್ಥ ವೇದ್ಯವಾಗುತ್ತದೆ. ಗೆಳೆತನವೆಂಬ ಸುವಿಶಾಲ ವೃಕ್ಷ ತನ್ನಡಿಯಲ್ಲಿ ದಣಿದು ಬಂದ ಮನಕ್ಕೆ ಅದರ ಪ್ರೀತಿಯ ತಂಪಾದ ನೆರಳು ಮುದ ನೀಡುವ ಅನುಭವ ಬಣ್ಣಿಸಲು ಅಸಾಧ್ಯ.
ಸ್ನೇಹ ಎಂಬುವುದು ಮಧುರ ಅನುಭೂತಿಯ ಅನುಬಂಧವಾಗಿದ್ದು ಎಲ್ಲಾ ಕಟ್ಟುಪಾಡುಗಳನ್ನು ಮೀರಿದ ಪವಿತ್ರವಾದ ಸಂಬಂಧವಾಗಿದೆ. ಬಲ್ಲವನೇ ಬಲ್ಲ ಬೆಲ್ಲದ ಸವಿಯನ್ನು ಎಂಬಂತೆ ಸ್ನೇಹದ ಸವಿ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯ. ಇಂದಿಗೂ ಎಷ್ಟೋ ಮಂದಿ ಬಾಲ್ಯದ ಸ್ನೇಹಿತರು ಆತ್ಮೀಯರಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಅವರಲ್ಲಿನ ನಿಷ್ಕಲ್ಮಶವಾದ ಪ್ರೀತಿ..
ಇಂದು ಸ್ನೇಹಿತರ ದಿನ. ಸ್ನೇಹಿತರ ದಿನದ ಆಚರಣೆ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಡುಗೆಯಾದರೂ ಇಡೀ ವಿಶ್ವವೇ ನನ್ನ ಕುಟುಂಬ ಎಂದು ಸಂದೇಶ ಸಾರಿದ ಭಾರತೀಯ ಸಂಸ್ಕೃತಿ ನಮ್ಮದು. ಅಷ್ಟೇ ಅಲ್ಲ ನಮ್ಮ ಪುರಾಣದಲ್ಲಿ ಕೂಡ ಸ್ನೇಹ ಎನ್ನುವುದು ಹೇಗಿರಬೇಕು ಎಂದು ಹೇಳುವ ಅನೇಕ ಕತೆಗಳಿವೆ. ಗೆಳೆತನ ಎನ್ನುವುದು ಆಸ್ತಿ ಅಂತಸ್ತನ್ನು ಮೀರಿದ್ದು ಎನ್ನುವುದನ್ನು ಕೃಷ್ಣ ಕುಚೇಲರ ಕತೆ ನಮಗೆ ತಿಳಿಸಿದರೆ, ಸ್ನೇಹಿತನ ಮೇಲಿನ ನಂಬಿಕೆಯನ್ನು ದುರ್ಯೋಧನ- ಕರ್ಣನ ಕತೆ ಸಾರುತ್ತದೆ. ಅಷ್ಟೇ ಅಲ್ಲ ಆಪ್ತವೆನ್ನುವ ಗೆಳೆತನ ಹಗೆತನ, ರೋಷಗಳಿಗೆ ಕಾರಣವಾಗಿರುವುದನ್ನು ಸಹ ನಮ್ಮ ಪುರಾಣದ ಕತೆಗಳಲ್ಲಿ ಕಾಣಬಹುದು. ಬಾಲ್ಯದಲ್ಲಿ ಉತ್ತಮ ಗೆಳೆಯರಾಗಿದ್ದ ದ್ರುಪದ ದ್ರೋಣರ ವೈರತ್ವದ ಪರಿಣಾಮ ಏನೇನಾಯಿತು ಎಂದು ಮಹಾಭಾರತ ತಿಳಿಸುತ್ತದೆ. ಆತ್ಮೀಯವಾಗಿದ್ದ ಸಂಬಂಧ ಸಡಿಲಗೊಂಡಾಗ ಆಗುವ ನೋವು, ಜಿಗುಪ್ಸೆಗಳನ್ನು ಅರ್ಥಮಾಡಿಕೊಳ್ಳುವುದು, ವಿವರಿಸುವುದು ಸುಲಭದ ವಿಷಯವಲ್ಲ. ನಿಜವಾದ ಸ್ನೇಹದಲ್ಲಿ ಎಂತಹ ಸಂದರ್ಭ ಎದುರಾದರೂ ಅವರ ನಡುವಿನ ಬಾಂಧವ್ಯ ಕೊನೆಯಾಗುವುದಿಲ್ಲವಾದರೂ ಇಂದು ನೈಜ ಗೆಳೆತನ ಕಡಿಮೆಯಾಗಿ ಉದ್ದೇಶಿತ ಗೆಳೆತನ ಹೆಚ್ಚಾಗುತ್ತಿದೆ.
ಬಿಗುಮಾನದ ಶುಷ್ಕವಿಲ್ಲದ, ಕೇವಲವಾಗುವ ಆತಂಕವಿಲ್ಲದ, ಕಷ್ಟ ಸುಖ ಎಲ್ಲದರಲ್ಲೂ ಜೊತೆಯಾಗುವ ಭಾವನೆಗಳ ಜೊತೆಗಿನ ಪಯಣದ ಈ ಸ್ನೇಹವನ್ನು ಜೀವನದುದ್ದಕ್ಕೂ ನಿಭಾಯಿಸಬೇಕಾದದ್ದು ನಮ್ಮ ಜವಾಬ್ದಾರಿ. ಹಾಗಾಗಿ ಈ ಸುಂದರವಾದ ಸಂಬಂಧವನ್ನು ಗೌರವಿಸುವುದಕ್ಕಾಗಿಯೇ ಏಷ್ಯಾದಾದ್ಯಂತ ಹೆಚ್ಚಿನ ದೇಶಗಳಲ್ಲಿ ಪ್ರತಿವರ್ಷ ಅಗಸ್ಟ್ ಮೊದಲನೇ ವಾರದ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.
ಗೆದ್ದಾಗ ನಮ್ಮೊಡನೆ ಸಂತೋಷ ಹಂಚಿಕೊಂಡು, ಬಿದ್ದಾಗ ನಿನ್ನೊಡನೆ ನಾನಿದ್ದೇನೆ ಎಂದು ಧೈರ್ಯ ತುಂಬಿ ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಸ್ನೇಹಿತರಿಗಾಗಿ ಇಂದು ಒಂದಿಷ್ಟು ಸಮಯ ಮೀಸಲಿಡೋಣ.
ಸಾಕ್ಷಟಿವಿ.ಕಾಮ್ ವತಿಯಿಂದ ಎಲ್ಲ ಓದುಗರಿಗೂ ಗೆಳೆಯರ ದಿನದ ಶುಭಾಶಯಗಳು..
– ಶ್ವೇತ
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಫೆನ್ನೆಲ್/ಸೋಂಪು ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು#Saakshatv #healthtips #fennelwater https://t.co/Iv8FK1THqJ
— Saaksha TV (@SaakshaTv) July 29, 2021
ನುಚ್ಚಿನ ಉಂಡೆ#Saakshatv #cookingrecipe #nuchhinaunde https://t.co/C8VvRVlBdE
— Saaksha TV (@SaakshaTv) July 27, 2021
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಲು ನೀವು ಬಯಸಿದ್ದರೆ ಈ ಮಾಹಿತಿ ನಿಮಗಾಗಿ
aadhar card for children https://t.co/3ThVZZh0du— Saaksha TV (@SaakshaTv) July 28, 2021
ಸಬ್ಬಕ್ಕಿ ನಿಪ್ಪಟ್ಟು#Saakshatv #cookingrecipe #sabbakki #nippattu https://t.co/0WaJcDwarF
— Saaksha TV (@SaakshaTv) July 28, 2021
#HappyFriendshipday