10 ದಿನಗಳಲ್ಲಿ 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನ ಮಾರಾಟ ಮಾಡಿದ ಅಂಚೆ ಇಲಾಖೆ..
ಭಾರತೀಯ ಅಂಚೆ ಇಲಾಖೆ ಒಂದು ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನ ಅಂಚೆ ಕಛೇರಿಗಳ ಮೂಲಕ ಮತ್ತು ಆನ್‌ಲೈನ್ ಮೂಲಕ ನಾಗರಿಕರಿಗೆ ಹತ್ತು ದಿನಗಳ ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿದೆ. ಅಂಚೆ ಇಲಾಖೆಯು “ಹರ್ ಘರ್ ತಿರಂಗಾ” ಕಾರ್ಯಕ್ರಮವನ್ನ ದೇಶದ ಪ್ರತಿಯೊಬ್ಬ ನಾಗರಿಕರಿಗೆ ತನ್ನ 1.5 ಲಕ್ಷ ಅಂಚೆ ಕಛೇರಿಗಳ ಜಾಲವನ್ನು ಹೊಂದಿದೆ.
ಈ ಧ್ವಜಗಳನ್ನು ಇಲಾಖೆಯು 25 ರೂಪಾಯಿಗಳ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಆನ್‌ಲೈನ್ ಮಾರಾಟಕ್ಕಾಗಿ, ಇಲಾಖೆಯು ದೇಶಾದ್ಯಂತ ಯಾವುದೇ ವಿಳಾಸಕ್ಕೆ ಮನೆ ಬಾಗಿಲಿಗೆ ತಲುಪಿಸುತ್ತದೆ. ಇ ಪೋಸ್ಟ್ ಆಫೀಸ್ ಸೌಲಭ್ಯದ ಮೂಲಕ ನಾಗರಿಕರು 1.75 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಾರೆ.
ಅಂಚೆ ಕಚೇರಿಗಳ ಮೂಲಕ ರಾಷ್ಟ್ರಧ್ವಜದ ಮಾರಾಟವು ಆಗಸ್ಟ್ 15 ರವರೆಗೆ ತೆರೆದಿರುತ್ತದೆ. ನಾಗರಿಕರು ಹತ್ತಿರದ ಅಂಚೆ ಕಚೇರಿಗಳು ಅಥವಾ ಇ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಬಹುದು ಮತ್ತು ತಮ್ಮ ರಾಷ್ಟ್ರಧ್ವಜವನ್ನು ಪಡೆದುಕೊಳ್ಳಬಹುದು ಮತ್ತು “ಹರ್ ಘರ್ ತಿರಂಗ” ಅಭಿಯಾನದ ಭಾಗವಾಗಬಹುದು.
ನಾಗರಿಕರು ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು www.hargartiranga.com ನಲ್ಲಿ ಭಾಗವಹಿಸುವ ಮೂಲಕ ಅಪ್ಲೋಡ್ ಮಾಡಬಹುದು.
Har Ghar Tiranga campaign: Post offices sold more than one cr national flags within ten days