ಗೆಟ್ ರೆಡಿ… ಫ್ರೆಂಡ್ ಶಿಫ್ ಚಿತ್ರದಲ್ಲಿ ಹರ್ಭಜನ್ ಸಿಂಗ್ ಭಲ್ಲೇ.. ಭಲ್ಲೇ.. !

1 min read
Harbhajan Singh Friendship movie Losliya heroine saakshatv

ಗೆಟ್ ರೆಡಿ… ಫ್ರೆಂಡ್ ಶಿಫ್ ಚಿತ್ರದಲ್ಲಿ ಹರ್ಭಜನ್ ಸಿಂಗ್ ಭಲ್ಲೇ.. ಭಲ್ಲೇ.. !

Harbhajan Singh Friendship movie Losliya heroine saakshatv arjun sarja ಹರ್ಭಜನ್ ಸಿಂಗ್… ವಿಶ್ವ ಕ್ರಿಕೆಟ್ ನ ಎವರ್ ಗ್ರೀನ್ ಕ್ರಿಕೆಟಿರ್ ಎಂಬುದರಲ್ಲಿ ಎರಡು ಮಾತಿಲ್ಲ. ಅದ್ಭುತ ಸ್ಪಿನ್ ಬೌಲಿಂಗ್ ಜೊತೆಗೆ ತನ್ನ ಆಕ್ರಮಣಕಾರಿ ಪ್ರವೃತ್ತಿಯ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಟಗಾರ.
ಹಾಗೇ, ನೋಡಿದ್ರೆ, ಹರ್ಭಜನ್ ಸಿಂಗ್ ಎಷ್ಟು ಆಕ್ರಮಣಕಾರಿ ಪ್ರವೃತ್ತಿಯಾಗಿದ್ದರೋ ಅಷ್ಟೇ ಹಾಸ್ಯ ಪ್ರವೃತ್ತಿಯ ವ್ಯಕ್ತಿತ್ವ ಕೂಡ. ಕೆಲವೊಂದು ಬಾರಿ ಮಿತಿ ಮೀರಿದ ವರ್ತನೆಯಿಂದಲೂ ಸುದ್ದಿಯಾಗುತ್ತಿದ್ದರು.
40ರ ಹರೆಯದ ಹರ್ಭಜನ್ ಸಿಂಗ್ ಕಳೆದ ಐದಾರು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಆಡುತ್ತಿಲ್ಲ. 2015ರ ನಂತರ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದಿಂದ ದೂರವೇ ಉಳಿದುಕೊಂಡಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಕಳೆದ ಐಪಿಎಲ್ ನಲ್ಲಿ ವೈಯಕ್ತಿಕ ಕಾರಣಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರಲಿಲ್ಲ. 2021ರ ಐಪಿಎಲ್ ನಲ್ಲಿ ಹರ್ಭಜನ್ ಸಿಂಗ್ ಕೆಕೆಆರ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಅದೇನೇ ಇರಲಿ, ಕ್ರಿಕೆಟ್ ಜಗತ್ತಿನಲ್ಲಿ ಹರ್ಭಜನ್ ಸಿಂಗ್ ಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಇದೀಗ ಹರ್ಭಜನ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದ್ರೆ ಈ ಬಾರಿ ಸುದ್ದಿಯಾಗಿರೋದು ಅವರ ಆಟದಿಂದಲ್ಲ. ಬದಲಾಗಿ ಬೆಳ್ಳಿ ಪರದೆಯ ಮೇಲೆ.
ಹೌದು, ಹರ್ಭಜನ್ ಸಿಂಗ್ ಸಿನಿ ಜಗತ್ತಿಗೆ ಎಂಟ್ರಿಕೊಟ್ಟಿದ್ದಾರೆ. ಫ್ರೆಂಡ್ ಶಿಪ್ ಅನ್ನೋ ತಮಿಳು ಸಿನಿಮಾದಲ್ಲಿ ನಾಯಕ ನಟನಾಗಿ ಹರ್ಭಜನ್ ಸಿಂಗ್ ಅಭಿನಯಿಸುತ್ತಿದ್ದಾರೆ.
ಹಾಗಂತ ಇದ್ರಲ್ಲಿ ಅಚ್ಚರಿ ಪಡುವಂತಹುದ್ದು ಏನಿಲ್ಲ. ಯಾಕೆಂದ್ರೆ ಈ ಹಿಂದೆ ಅನೇಕ ಕ್ರಿಕೆಟಿಗರು ಸಿನಿಮದಲ್ಲಿ ನಟಿಸಿದ್ದಾರೆ. ವಿಶೇಷತೆ ಏನು ಅಂದ್ರೆ ಬೆಳ್ಳಿ ಪರದೆಯ ಮೇಲೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿರುವ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಹರ್ಭಜನ್ ಸಿಂಗ್ ಪಾತ್ರರಾಗಿದ್ದಾರೆ.
Harbhajan Singh Friendship movie Losliya heroine saakshatvಅಷ್ಟೇ ಅಲ್ಲ, ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದಾಗಲೇ ಹರ್ಭಜನ್ ನಟನೆಯಲ್ಲೂ ಭಲ್ಲೇ ಭಲ್ಲೇ ಅಂತ ಕಾಖುತ್ತಿದೆ. ಫೈಟಿಂಗ್, ಡಾನ್ಸ್ ನಲ್ಲೂ ಹರ್ಭಜನ್ ಸಕತ್ತಾಗಿ ಶೈನ್ ಆಗುತ್ತಿದ್ದಾರೆ. ಚಿತ್ರದ ಟೈಟಲ್ ನಂತೆ ಇದು ಸ್ನೇಹಿತರ ನಡುವಿನ ಕಥೆಯನ್ನೊಳಗೊಂಡ ಚಿತ್ರವಾಗಿದೆ. ಚಿತ್ರದಲ್ಲಿ ಕ್ರಿಕೆಟ್ ಪಂದ್ಯ ಕೂಡ ಇದೆ. ಹಾಗೇ ರೊಮ್ಯಾಂಟಿಕ್, ಕಾಮಿಡಿ, ಕ್ರೀಡೆ ಹಾಗೂ ಫ್ರೆಂಡ್ ಶಿಪ್ ನಡುವಿನ ಚಿತ್ರವಾಗಿದೆ.
ಇನ್ನು ಹರ್ಭಜನ್ ಸಿಂಗ್ ನಟಿಸುತ್ತಿರುವ ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಸತೀಶ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಲೂಸ್ಲಿಯಾ ನಟಿಸುತ್ತಿದ್ದಾರೆ. ಲೂಸ್ಲಿಯಾ ಶ್ರೀಲಂಕಾದ ನಿರೂಪಕಿಯಾಗಿದ್ದಾರೆ.
ಜಾನ್ ಪಾಲ್ ರಾಜ್ ಮತ್ತು ಶ್ಯಾಮ್ ಸುರಿಯಾ ನಿರ್ದೇಶನದ ಈ ಚಿತ್ರ ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲೂ ತೆರೆಗೆ ಬರಲಿದೆ.
ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಆದ್ರೆ ಚಿತ್ರದ ಬಿಡುಗಡೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕಳೆದ ವರ್ಷದ ಆಗಸ್ಟ್ ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದ್ರೆ ಕೋವಿಡ್ ಅಡ್ಡಿಯನ್ನುಂಟು ಮಾಡಿತ್ತು.
ಇದೀಗ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ತಮಿಳುನಾಡಿನಲ್ಲಿ ಹರ್ಭಜನ್ ಸಿಂಗ್ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿಎಸ್‍ಕೆ ತಂಡದ ಪರ ಆಡುತ್ತಿದ್ದ ಭಜ್ಜಿಗೆ ತಮಿಳು ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಈ ನಡುವೆ ಟೀಮ್ ಇಂಡಿಯಾದ ಇನ್ನೊಬ್ಬ ಆಲ್ ರೌಂಡರ್ ಇರ್ಫಾನ್ ಪಠಾಣ್ ಕೂಡ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಒಟ್ಟಿನಲ್ಲಿ ಹರ್ಭಜನ್ ಸಿಂಗ್ ಇದೀಗ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ. ಗೆಟ್ ರೆಡಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd