ರೀ ಎಂಟ್ರಿಗಾಗಿ ಹಾರ್ದಿಕ್ ಪಾಂಡ್ಯ ಕಸರತ್ತು Hardik Pandya saakshatv
ಬ್ಯಾಡ್ ಪಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಹಾರ್ದಿಕ್ ಮತ್ತೆ ಫಿಟ್ ನೆಸ್ ಸಾಧಿಸಲು ಮೈದಾನದಲ್ಲಿ ಕಷ್ಟಪಡುತ್ತಿದ್ದಾರೆ.
ಪಾಂಡ್ಯ ಪ್ರಸ್ತುತ ಮುಂಬೈನಲ್ಲಿರುವ ರಿಹಾಬಿಲಿಟೇಷನ್ ಸೆಂಟರ್ ನಲ್ಲಿ ಬೆವರು ಹರಿಸುತ್ತಿದ್ದಾರೆ.
ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ, ಮೊದಲಿನಂತೆ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಲು ವಿಫಲಾಗುತ್ತಿದ್ದಾರೆ.
ಯುಎಇ ಯಲ್ಲಿ ನಡೆದ ಐಪಿಎಲ್ ನಲ್ಲಿ ಮಕಾಡೆ ಮಲಗಿದ್ದ ಹಾರ್ದಿಕ್, ಬಳಿಕ ಟಿ 20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಮಂಕಾಗಿದ್ದರು.
ಇದರಿಂದಾಗಿ ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಗೆ ಆಯ್ಕೆ ಆಗಲಿಲ್ಲ.
ಇನ್ನ 2021ರಲ್ಲಿ ಆರು ಏಕದಿನ ಪಂದ್ಯಗಳಲ್ಲಾಡಿರುವ ಹಾರ್ದಿಕ್ ಪಾಂಡ್ಯ, ಕೇವಲ 165 ರನ್ ಗಳನ್ನ ಮಾತ್ರ ಗಳಿಸಿದ್ದಾರೆ.
11 ಟಿ 20 ಪಂದ್ಯಗಳಲ್ಲಿ 165 ರನ್ ಗಳಷ್ಟೆ ಗಳಿಸಿದ್ದಾರೆ.