Hardik Pandya : ಹಾರ್ದಿಕ್ ಪಾಂಡ್ಯ ರೀ ಎಂಟ್ರಿ ಹಿಂದೆ ರೋಚಕ ಕಹಾನಿ
ನನ್ನ ರೀ ಎಂಟ್ರಿಗೂ ಮುನ್ನಾ ಯಾರು ಏನೇನು ಮಾತನಾಡಿದ್ದಾರೋ ನನಗೆ ಗೊತ್ತು. ಆದ್ರೆ ವಿಮರ್ಶೆಗಳಿಗೆ ಉತ್ತರ ನೀಡೋದು ನನ್ನ ಕೆಲಸವಲ್ಲ. ಕೇವಲ ನನ್ನ ಆಟ, ಫಿಟ್ ನೆಟ್ ಮೇಲೆ ದೃಷ್ಠಿ ಕೇಂದ್ರಿಕರಿಸುತ್ತೇನೆ.
ಆರು ತಿಂಗಳ ಸಮಯದಲ್ಲಿ ನಾನು ಎಷ್ಟು ಕಷ್ಟಪಟ್ಟೆ ಅನ್ನೋದು ಯಾರಿಗೂ ತಿಳಿದಿಲ್ಲ ಎಂದು ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭಾವುಕರಾಗಿದ್ದಾರೆ.
ಕಳೆದ ಐಪಿಎಲ್ ಸೀಸನ್ ನಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಿದ್ದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಫಿಟ್ನೆಸ್ ಕೊರತೆಯಿಂದ ಟೀ ಮಿಂಡಿಯಾದಿಂದ ಕೂಡ ಔಟ್ ಆಗಿದ್ದರು.
ಇನ್ನೇನು ಹಾರ್ದಿಕ್ ಕೆರಿಯರ್ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ಗುಜರಾತ್ ಟೈಟಾನ್ಸ್ ಮೂಲಕ ಹಾರ್ದಿಕ್ ಪಾಂಡ್ಯಗೆ ಅದೃಷ್ಠದ ಬಾಗಿಲು ತೆರೆಯಿತು.
ಗುಜರಾತ್ ತಂಡವನ್ನು ಉತ್ತಮವಾಗಿ ಮುಂದುವರೆಸಿದ ಹಾರ್ದಿಕ್ ಪಾಂಡ್ಯ ಚಾಂಪಿಯನ್ ಮಾಡಿದ್ದು ಇದೀಗ ಇತಿಹಾಸ.

ಕೇವಲ ಒಬ್ಬ ನಾಯಕನಾಗಿ ಮಾತ್ರವಲ್ಲದೆ ಹಾರ್ದಿಕ್ ವ್ಯಕ್ತಿಗತವಾಗಿಯೂ ಐಪಿಎಲ್ ನಲ್ಲಿ ಮಿಂಚು ಹರಿಸಿದರು. ಒಬ್ಬ ವೇಗದ ಬೌಲಿಂಗ್ ಆಲ್ ರೌಂಡರ್ಆಗಿ ಹಾರ್ದಿಕ್ ಅದ್ಭುತ ಪ್ರದರ್ಶನ ನೀಡಿದರು.
ಈ ಬಾರಿಯ ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯ 15 ಪಂದ್ಯಗಳನ್ನಾಡಿದ್ದು, 44.27 ಸರಾಸರಿಯಲ್ಲಿ 487 ರನ್ ಗಳಿಸಿದ್ದಾರೆ.
ಅವರ ಸ್ಟ್ರೈಕ್ ರೇಟ್ 131.27 ಇದೆ. ಅವರು ಈ ಸೀಸನ್ ನಲ್ಲಿ 4 ಅರ್ಧಶತಕಗಳನ್ನು ಸಿಡಿಸಿದ್ದು, 49 ಬೌಂಡರಿ, 12 ಸಿಕ್ಸರ್ ಗಳನ್ನ ಬಾರಿಸಿದ್ದಾರೆ. ಅಲ್ಲದೇ ಬೌಲಿಂಗ್ ನಲ್ಲಿ 8 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಈ ಪ್ರದರ್ಶನದ ಹಿನ್ನಲೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತೆ ಟೀಂ ಇಂಡಿಯಾಗೆ ಆಯ್ಕೆ ಆಗಿದ್ದಾರೆ.
ಈ ಬಗ್ಗೆ ಬಿಸಿಸಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಾನು ಪ್ರತಿ ದಿನ ಐದು ಗಂಟೆಗೆ ಎದ್ದೇಳುತ್ತಿದೆ. ಟ್ರೈನಿಂಗ್ ಸೆಷನ್ ನಲ್ಲಿ ಇದ್ದರೂ ಸಿಕ್ಕ ಅವಕಾಶದಲ್ಲಿ ವಿಶ್ರಾಂತಿ ಪಡೆಯುತ್ತಿದೆ.
ಆ ನಾಲ್ಕು ತಿಂಗಳುಗಳಲ್ಲಿ ನಾನು 9 ಗಂಟೆಗೆ ನಿದ್ದೆ ಮಾಡುತ್ತಿದ್ದೆ. ಸಾಕಷ್ಟು ತ್ಯಾಗಗಳನ್ನು ಮಾಡಿದ್ದೇನೆ. ಐಪಿಎಲ್ ಆರಂಭಕ್ಕೂ ಮುನ್ನಾ ನನ್ನ ಜೊತೆ ನಾನೇ ದೊಡ್ಡ ಯುದ್ಧವನ್ನೇ ಮಾಡಿದ್ದೇನೆ.
ಆದ್ರೆ ಅದಕ್ಕೆ ತಕ್ಕೆ ರಿಸಲ್ಟ್ ಬಂದಿದ್ದು, ತೃಪ್ತಿ ತಂದಿದೆ. ಇದಕ್ಕಾಗಿ ನಾನು ಎಷ್ಟು ಶ್ರಮ ಪಟ್ಟಿದ್ದೇನೆ ಎಂಬೋದು ನನಗೆ ಮಾತ್ರ ಗೊತ್ತು.
ನನಗೆ ಕಷ್ಟ ಅನ್ನೋದು ಮೊದಲಿನಿಂದಲೂ ಸಾಮಾನ್ಯವಾಗಿದೆ. ರಿಸಲ್ಟ್ ಬಗ್ಗೆ ನಾನು ಹೆಚ್ಚು ಯೋಚನೆ ಮಾಡುವುದಿಲ್ಲ. ನಿಯತ್ತಾಗಿ ನನ್ನ ಕೆಲಸ ನಾನು ಮಾಡುತ್ತಾ ಹೋಗುತ್ತಿದ್ದೆ ಎಂದಿದ್ದಾರೆ.
hardik-pandya-says-no-one-knows-sacrifices-i-made-comeback