Karnataka | ರಾಜ್ಯದ ಮೇಲೆ ರಾಜ್ಯ ಗೆಲ್ಲುತ್ತಿರುವ ಬಿಜೆಪಿ ಗೆಲುವಿನ ಗುಟ್ಟು ಈಗ ರಟ್ಟು

1 min read
bjp-leader-muniraju-reveals-fake-vote-in-1998-by-poll saaksha tv

bjp-leader-muniraju-reveals-fake-vote-in-1998-by-poll saaksha tv

Karnataka | ರಾಜ್ಯದ ಮೇಲೆ ರಾಜ್ಯ ಗೆಲ್ಲುತ್ತಿರುವ ಬಿಜೆಪಿ ಗೆಲುವಿನ ಗುಟ್ಟು ಈಗ ರಟ್ಟು

ಬೆಂಗಳೂರು : ರಾಜ್ಯದ ಮೇಲೆ ರಾಜ್ಯ ಗೆಲ್ಲುತ್ತಿರುವ ಬಿಜೆಪಿ ಗೆಲುವಿನ ಗುಟ್ಟು ಈಗ ರಟ್ಟು. ಅಡ್ಡದಾರಿಯ ಕೊಚ್ಚೆಯಲ್ಲಿ ಅರಳುವ ಕಮಲವನ್ನು ಮುಡಿದುಕೊಂಡು ಬೀಗುವವರ ʼಕಳ್ಳವೋಟಿನ ಕಥೆʼ ನಿಮ್ಮ ಮಾಜಿ ಶಾಸಕರೇ  ಬಯಲು ಮಾಡಿದ್ದರೂ ಇನ್ನೂ ಕುರ್ಚಿಯಲ್ಲಿರಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ಸಾಮ್ರಾಟರೇ? ಅಶೋಕನ ಹೆಸರಿಗಾದರೂ ಮರ್ಯಾದೆ ಬೇಡವೇ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, 2006ರಲ್ಲಿ ಜೆಡಿಎಸ್ ದೆಸೆಯಿಂದ ಅಧಿಕಾರದ ರುಚಿ ಕಂಡ ಬಿಜೆಪಿಗೆ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವುದು ಚಾಳಿ ಆಗಿಬಿಟ್ಟಿದೆ. ಆ ನಂತರ ʼಆಪರೇಷನ್ ಕಮಲʼ ಎಂಬ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಬಿಜೆಪಿ ಅಭದ್ರಗೊಳಿಸಿದೆ.

ಬಿಜೆಪಿಯ ನಯವಂಚಕ & ಅನೈತಿಕ ರಾಜಕಾರಣದ ಮುಖವನ್ನು ಬೆಂಗಳೂರು ನಗರದ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಮುನಿರಾಜು ಎಂಬ ಮಹಾಶಯರೇ  ಬಹಿರಂಗಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಅಡ್ಡದಾರಿಯಲ್ಲೇ ಎನ್ನುವುದು ಈಗ ರುಜುವಾತಾಗಿದೆ

1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ್ ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು!!

ಅಂಥ ಕೃತ್ಯಗಳಿಂದಲೇ ಇಂದು ಬಿಜೆಪಿ 119 ಕ್ಷೇತ್ರ ಗೆದ್ದು ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಎಂದು ಮಾನ್ಯ  ಮುನಿರಾಜು ತಮ್ಮ ಪಂಚೇಂದ್ರಿಯಗಳ ಸಾಕ್ಷಿಯಾಗಿ ತುಂಬಿದ ಕಾರ್ಯಕರ್ತರ ಸಭೆಯಲ್ಲೇ ಹೇಳಿದ್ದಾರೆ. ಅಶೋಕ್ ಅವರು ಸಾಮ್ರಾಟರಾಗಿ ಬೆಳೆಯಲು ಕಾರಣವಾದ ʼಬೆತ್ತಲೆ ಸತ್ಯʼದ ಹುತ್ತ ಬಿಚ್ಚಿಕೊಂಡಿದ್ದು, ಇದಕ್ಕೇನು ಹೇಳುತ್ತೀರಿ ಸಾಮ್ರಾಟರೇ ಎಂದು ಹೆಚ್ ಡಿ ಕೆ ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ಜನ್ಮಕೊಟ್ಟು ಅದನ್ನು ನಿರ್ಲಜ್ಜವಾಗಿ ʼರಾಷ್ಟ್ರೀಕರಣʼ ಮಾಡಿದ ಬಿಜೆಪಿ, ಭಾರತಕ್ಕೆ ಅಂಟಿದ ಕಳಂಕ. ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ. ಸಂಸತ್ತಿನಲ್ಲಿ ಸಂವಿಧಾನಕ್ಕೆ ಶಿರಸಾಷ್ಟಾಂಗ ನಮಸ್ಕಾರ. ಕರ್ನಾಟಕದಲ್ಲಿ ಅದೇ ಸಂವಿಧಾನದ ಶಿರಚ್ಛೇಧ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.hd-kumaraswamy-lashes-at-bjp-leaders

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd