ಕೆಂಪು ಶುಂಠಿಯ ಆರೋಗ್ಯಕಾರಿ ಪ್ರಯೋಜನಗಳು

1 min read
red ginger

ಕೆಂಪು ಶುಂಠಿಯ ಆರೋಗ್ಯಕಾರಿ ಪ್ರಯೋಜನಗಳು:

ಗಮನಿಸಿ: ಇದನ್ನು ಬೆಳೆಯುವಾಗ ಅಥವಾ ಕೃಷಿ ಮಾಡುವಾಗ ಕೆಂಪು ಬಣ್ಣದಲ್ಲಿರುವ ಈ ಶುಂಠಿ ಗೆಡ್ಡೆ , ಗಾಳಿ ಸೋಕಿದಾಗ ಕಂದು ಬಣ್ಣಕ್ಕೆ ತಿರುಗುತ್ತದೆ. ಇದರ ರುಚಿ ಅತ್ಯಂತ ಖಾರದ ಮೆಣಸಿನಕಾಯಿಯಂತೆ.

ಸಾಬೀತುಗೊಂಡಿರುವ ಕೆಂಪು ಶುಂಠಿಯ 11 ಆರೋಗ್ಯಕಾರಿ ಪ್ರಯೋಜನಗಳು: ಒ ಲೂಯಾಂಗ್ ಟಪೋಲ್

ಭೂಗ್ರಹದ ಮೇಲಿರುವ ಅತ್ಯಂತ ರುಚಿಕರ ಮತ್ತು ಅತ್ಯುತ್ತಮ ಆರೋಗ್ಯ ಸ್ನೇಹಿ ಮಸಾಲಾ ಪದಾರ್ಥಗಳಲ್ಲಿ ಒಂದು ಈ ಕೆಂಪು ಶುಂಠಿ.

ಇದು ನಮ್ಮ ದೇಹ ಮತ್ತು ಮೆದುಳಿಗೆ ಅತಿ ಹೆಚ್ಚು ಸತ್ವಯುತ ಶಕ್ತಿಯುತ ಪೋಷಕಾಂಶಗಳನ್ನು ಮತ್ತು ಜೈವಿಕ ಸಂಯುಕ್ತಗಳನ್ನು ಪೂರೈಸುತ್ತದೆ. ವೈಜ್ಞಾನಿಕ ಸಂಶೋಧನೆ ಮತ್ತು ಅಧ್ಯಯನಗಳ ಆಧಾರಿತ, ಪ್ರಮುಖ 11 ಉತ್ತಮ ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳು ಕೆಂಪು ಶುಂಠಿ ಅಥವಾ ರೆಡ್ ಜಿಂಜರ್ ನಲ್ಲಿವೆ.

1) ಈ ಹೂಬಿಡುವ ಕೆಂಪು ಶುಂಠಿ ಸಸ್ಯವು ಮೂಲತಃ ಚೀನಾ ದೇಶದ್ದು. ಇದು ಜಿಂಜರಾಲ್ ಎಂಬ ಔಷದೀಯ ಗುಣಲಕ್ಷಣ ಹೊಂದಿದೆ.

red ginger

ಇದು ಜಿಂಜಿಬೊರೇಷಿಯ ಕುಟುಂಬಕ್ಕೆ ಸೇರಿರುವ ಸಸ್ಯವಾಗಿದ್ದು, ಸಾಧಾರಣ ಅರಿಷಿಣ, ಸಾಮಾನ್ಯ ಶುಂಠಿ ಮತ್ತು ಗಾಲಂಗಾಲ್ ಜೊತೆಗೆ ಹತ್ತಿರದ ಸಂಬಂಧ ಹೊಂದಿದೆ.

ರೆಡ್ ಶುಂಠಿ ಸಸ್ಯದ ರೈಜಮ್ (ಭೂಮಿಯೊಳಗೆ ಹುದುಗಿರುವ ಕಾಂಡ) ವನ್ನು ಮಸಾಲೆ ಪದಾರ್ಥವನ್ನಾಗಿ ಬಳಸಲಾಗುತ್ತದೆ. ಇದನ್ನೇ ಶುಂಠಿಯ ಮೂಲ ಅಥವಾ ಶುಂಠಿ ಎನ್ನುತ್ತೇವೆ.

ವಿವಿಧ ಸಾಂಪ್ರದಾಯಿಕ ಮತ್ತು ಪರ್ಯಾಯ ಔಷದ ಸ್ವರೂಪದಲ್ಲಿ ಬಹು ದೀರ್ಘ ಕಾಲದಿಂದಲೂ ಶುಂಠಿ ಬಳಕೆಯಲ್ಲಿದೆ. ಇದು ಜೀರ್ಣಕ್ರಿಯೆ ಅತ್ಯುತ್ತಮ ಆಹಾರವೂ ಹೌದು ಹಾಗೂ ವಾಕರಿಕೆ, ನೆಗಡಿ ಮತ್ತು ಜ್ವರದಂತಹ ಸಮಸ್ಯೆಗಳಿಗೆ ಅದ್ಭುತ ಔಷದಿಯೂ ಹೌದು.

ಕೆಂಪು ಶುಂಠಿಯನ್ನು ತಾಜಾ ರೂಪದಲ್ಲಿ, ಒಣಗಿಸಿ, ಪುಡಿಮಾಡಿ ಬಳಸಬಹುದು. ಅಥವಾ ಎಣ್ಣೆ ತೆಗೆದು ರಸ ಹಿಂಡಿ ಉಪಯೋಗಿಸಬಹುದು. ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಸೌಂದರ್ಯವರ್ಧಕಗಳಲ್ಲಿಯೂ ಕೆಂಪು ಶುಂಠಿ ಬಳಕೆಯಾಗುತ್ತದೆ. ಭಾರತೀಯ ಪಾಕಶಾಸ್ತ್ರದಲ್ಲಂತು ಕೆಂಪು ಶುಂಠಿಗೆ ವಿಶೇಷ ಸ್ಥಾನವಿದೆ.

ಕೆಂಪು ಶುಂಠಿಯ ವಿಶೇಷ ಸುಗಂಧ ಮತ್ತು ಸ್ವಾದದ ಮೂಲವೇ ಇದರ ಸ್ವಾಭಾವಿಕ ತೈಲದಂಶ. ಅವುಗಳಲ್ಲಿ ಮುಖ್ಯವಾದುದ್ದು ಜಿಂಜರಾಲ್.

ಕೆಂಪು ಶುಂಠಿಯಲ್ಲಿರುವ ಜಿಂಜರಾಲ್ ಅಂಶವು ಪ್ರಮುಖ ಜೈವಿಕ ಸಕ್ರಿಯ ಸಂಯುಕ್ತವಾಗಿದ್ದು, ಅತ್ಯಂತ ಮಹತ್ವದ ಔಷದೀಯ ಗುಣಲಕ್ಷಣಗಳನ್ನು ಹೊಂದಿದೆ. ಹಾಗೆಯೇ ಇದು ಅತ್ಯಂತ ಶಕ್ತಿಯುತ ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಹೊಂದಿದೆ.

2) ಅನೇಕ ತರಹದ ಮುಂಜಾನೆಯ ಕಾಯಿಲೆಗಳಿಗೆ
ವಾಕರಿಕೆಯಂತಹ ಸಮಸ್ಯೆಗಳಿಗೆ ಇದು ಅತ್ಯಂತ ಪ್ರಬಲ ಮನೆಮದ್ದು.

3) ಕೆಂಪು ಶುಂಠಿಯು ಸ್ನಾಯು ನೋವು ಮತ್ತು ಇತರೆ ದೇಹದ ನೋವುಗಳನ್ನು ಕಡಿಮೆ ಮಾಡುತ್ತದೆ.

4) ಕೆಂಪು ಶುಂಠಿಯ ನಿರಂತರ ಬಳಕೆಯಿಂದ ಉರಿಯೂತ ಮತ್ತು ಅಸ್ಥಿ ಸಂಧಿವಾತ ನಿವಾರಣೆಯಾಗುತ್ತದೆ.

5) ಕೆಂಪು ಶುಂಠಿಯಲ್ಲಿರುವ ಔಷದೀಯ ಅಂಶಗಳು ಬ್ಲಡ್ ಶುಗರ್ ಪರಿಣಾಮಗಳನ್ನು ತಗ್ಗಿಸುತ್ತದೆ ಮತ್ತು ಹೃದಯಸಂಬಂಧಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡುತ್ತದೆ.

6) ದೀರ್ಘ ಕಾಲದ ಅಜೀರ್ಣದ ಸಮಸ್ಯೆಗಳಿಗೆ ಕೆಂಪು ಶುಂಠಿ ರಾಮಬಾಣ

7) ಕೆಂಪು ಶುಂಠಿಯ ಪುಡಿಯ ಬಳಕೆಯಿಂದಾಗಿ ಮುಟ್ಟಿನ ಸಮಯದ ನೋವುಗಳು ಹತೋಟಿಗೆ ಬರುತ್ತವೆ.

8) ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕೆಂಪು ಶುಂಠಿ ನೆರವಾಗುತ್ತದೆ.

9) ಕೆಂಪು ಶುಂಠಿಯಲ್ಲಿರುವ ಮಹತ್ವದ ಅಂಶಗಳು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೂ ಪರಿಹಾರ ಕಲ್ಪಿಸುತ್ತದೆ.

10) ಕೆಂಪು ಶುಂಠಿಯು ಮೆದುಳಿನ ಕಾರ್ಯಾಚರಣೆಗಳಿಗೆ ಬಹು ಉಪಯೋಗಿ. ಅಲ್ ಜೈಮರ್ ನಂತಹ ಮೆದುಳಿನ ಸಂಬಂಧಿ ರೋಗಗಳಿಗೂ ಇದು ಔಷದ.

11) ಶುಂಠಿಯಲ್ಲಿರುವ ಸಕ್ರಿಯ ಜೈವಿಕ ಸಂಯುಕ್ತಗಳು ಹಲವು ತರಹದ ಸೋಂಕುಗಳ ವಿರುದ್ಧ ಹೋರಾಡುತ್ತದೆ.

-ದಿವ್ಯಾ, ಮೈಸೂರು
ಪ್ರಗತಿಪರ ಕೃಷಿಕರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd