3ನೇ ಅಲೆ ಶುರುವಾಗಿದೆ.. ಎಚ್ಚರದಿಂದ ಇರಬೇಕು : ಡಾ.ಕೆ.ಸುಧಾಕರ್ Health Minister Dr K Sudhakar Speaks On Covid-19 saaksha tv
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಮೂರನೇ ಅಲೆ ಈಗಾಗಲೇ ಶುರುವಾಗಿದೆ. ಇನ್ನೂ ಆರು ವಾರಗಳ ಬಳಿಕ ಇದು ನಿಯಂತ್ರಣಕ್ಕೆ ಬರಲಿದೆ. ಅಲ್ಲಿಯವರೆಗೂ ಎಚ್ಚರದಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಈಗಾಗಲೇ ಮೂರನೇ ಅಲೆ ಈಗಾಗಲೇ ಶುರುವಾಗಿದೆ. ಇನ್ನೂ ಆರು ವಾರಗಳ ಬಳಿಕ ಇದು ನಿಯಂತ್ರಣಕ್ಕೆ ಬರಲಿದೆ. ಈಗಾಗಲೇ ತಜ್ಞರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಎಲ್ಲರು ಮುಂಜಾಗ್ರತೆ ಪಾಲಿಸಬೇಕು. ಜನರು ಸರ್ಕಾರದ ಜೊತೆ ಕೈ ಜೋಡಿಸಬೇಕಿದೆ. ಭವಿಷ್ಯ ಇದೇ ಕೊನೆ ಅಲೆಯಾಗಲಿದೆ ಎಂದು ಭಾವಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಲಸಿಕೆ ಪಡೆದಿದ್ದೇವೆ ಎಂದು ಮೈಮರೆಯೋದು ಬೇಡ ಎಂದು ಮನವಿ ಮಾಡಿದ ಸುಧಾಕರ್, ಮೊದಲೆರಡು ಅಲೆಗಳಿಗೆ ಹೋಲಿಕೆ ಮಾಡಿದ್ರೆ ಒಮಿಕ್ರಾನ್ ವೇಗವಾಗಿ ಹರಡುತ್ತಿದೆ. ಹೀಗಾಗಿ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ, ವಿಕೇಂಡ್ ಲಾಕ್ ಡೌನ್ ಮೂಲಕ ಬಡವರ ಕೊಲೆ ಮಾಡಲು ಸರ್ಕಾರ ಹೊರಟಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಡಿ ಕೆ ಶಿವಕುಮಾರ್ ಹೇಳಿಕೆ ದುರದೃಷ್ಟಕರ. ಅಂತಹ ನಾಯಕರು ಇಂತಹ ಮಾತಗಳನ್ನಾಡಬಾರದು. ಕೋವಿಡ್ ಬಗ್ಗೆ ಡಿಕೆ ಶಿವಕುಮಾರ್ ವಿಷಯ ತಿಳಿದುಕೊಂಡಿಲ್ಲ ಅಂತ ಅನ್ಕೊಂಡಿದ್ದೇನೆ ಎಂದಿದ್ದಾರೆ.









