ರಾಯಚೂರು: ಹಟ್ಟಿ ಚಿನ್ನದ ಗಣಿ ಸುತ್ತಮುತ್ತ ಪ್ರಭಲ ಭೂಕಂಪ ಸಂಭವಿಸಿರುವ ಕುರಿತು ವರದಿಯಾಗಿದೆ.
ಜಿಲ್ಲೆಯ ಲಿಂಗಸುಗೂರು (Lingasugur) ತಾಲೂಕಿನ ಹಟ್ಟಿ ಚಿನ್ನದ ಗಣಿ (Hutti Gold Mines) ಸುತ್ತಮುತ್ತ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಕಂಪನ ದಾಖಲಾಗಿದೆ.
ಸೋಮವಾರ ಬೆಳಿಗ್ಗೆ 2:51 ರ ವೇಳೆಗೆ ಭೂಮಿ ಕಂಪಿಸಿದ್ದೆ ಎಂದು ರಾಜ್ಯ ವಿಪತ್ತು ಮೇಲ್ವಿಚಾರಣಾ ಕೇಂದ್ರ ದೃಢಪಡಿಸಿದೆ. ಹಟ್ಟಿ, ನಿಲೋಗಲ್, ವೀರಾಪುರ, ಗೆಜ್ಜಲಗಟ್ಟಾ ಗ್ರಾಮ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದೆ. ಈ ಲಘು ಭೂಕಂಪನದಿಂದ ಸದ್ಯ ಯಾವುದೇ ಅಪಾಯವಾಗಿಲ್ಲ. ಗ್ರಾಮಸ್ಥರ ಅನುಭವಕ್ಕೂ ಇದು ಬಂದಿಲ್ಲ ಎಂದು ಕೆಎಸ್ಎನ್ಡಿಎಂಸಿ ತಿಳಿಸಿದೆ.
ಭೂಕಂಪದ ಕಾರಣ ಕುರಿತು ತನಿಖೆ ನಡೆದಿದೆ. ಕಲ್ಲುಗಳ ಸ್ಫೋಟದಿಂದಲೂ ಭೂಕಂಪನ ಸಾಧ್ಯತೆಯಿರುತ್ತದೆ. ತನಿಖೆ ಬಳಿಕ ಭೂಕಂಪಿಸಿರುವ ಕುರಿತು ನಿಖರ ಕಾರಣ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹೇಳಿದ್ದಾರೆ.