ಕೊಡಗಿನಲ್ಲಿ ಧಾರಾಕಾರ ಮಳೆ.. ತ್ರಿವೇಣಿ ಸಂಗಮ ಜಲಾವೃತ
ಕೊಡಗು : ಕೊಡಗು ಜಿಲ್ಲೆಯಲ್ಲಿ ರಾತ್ರಿ ಇಡೀ ಧಾರಾಕಾರ ಮಳೆ ಸುರಿದಿದೆ.
ಪಶ್ಚಿಮಘಟ್ಟ ಪ್ರದೇಶ ಬ್ರಹ್ಮಗಿರಿ ತಪ್ಪಲಲ್ಲಿ ವರುಣಾರ್ಭಟ ಜೋರಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ.
ಪರಿಣಾಮ 3ನೇ ಬಾರಿ ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ.

ನಾಪೋಕ್ಲು ಭಾಗಮಂಡಲ ರಸ್ತೆ ಮೇಲೆ ನಾಲ್ಕು ಅಡಿ ನೀರು ಹರಿಯುತ್ತಿದೆ.
ಇದರಿಂದಾಗಿ ಮತ್ತೊಂದೆಡೆ ಭಾಗಮಂಡಲ ತಲಕಾವೇರಿಯ ರಸ್ತೆ ಬಂದ್ ಆಗಿದೆ.
ಭಾರಿ ಮಳೆಯಿಂದಾಗಿ ಭಾರೀ ಗಾತ್ರದ ಮರಗಳು ಉರುಳಿ ರಸ್ತೆ ಸಂಪರ್ಕ ಕಡಿತವಾಗಿದೆ.
ಇನ್ನು ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಭಾರಿ ಪ್ರಮಾಣದ ಬೆಳೆ ಹಾನಿಗೊಳಲಾಗಿದೆ.