Yadgir | ಭೀಮಾನದಿ ತೀರದಲ್ಲಿ ಪ್ರವಾಹದ ಭೀತಿ
ಯಾದಗಿರಿ : ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಭೀಮಾನದಿಗೆ ಹತ್ತು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಸಲಾಗಿದೆ.
ಹೀಗಾಗಿ ಭೀಮಾನದಿ ತೀರದ ಕಂಗಳೇಶ್ವರ ಹಾಗೂ ವೀರಾಂಜನೇಯ ದೇವಸ್ಥಾನದ ಸುತ್ತ ನೀರು ತುಂಬಿಕೊಂಡಿದೆ.

ವೀರಾಂಜನೇಯ ಹಾಗೂ ಕಂಗಳೇಶ್ವರ ದೇವಸ್ಥಾನದ ಮೂರ್ತಿಗಳು ಜಲಾವೃತಗೊಂಡಿವೆ.
ವೀರಾಂಜನೇಯ ಹಾಗೂ ಕಂಗಳೇಶ್ವರ ಮುಳುಗಡೆಗೆ ಇನ್ನೂ ಕೆಲವೇ ಅಡಿಗಳು ಮಾತ್ರ ಬಾಕಿ ಉಳಿದಿವೆ.
ಅಂದಹಾಗೆ ಗುರುಸುಣಗಿ ಬ್ಯಾರೇಜ್ ನ ನಾಲ್ಕು ಗೇಟ್ ಓಪನ್ ಆಗಿದೆ.
ಇದರಿಂದಾಗಿ ಭೀಮಾನದಿ ತೀರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.