Heavy Rain | ಕೊಡಗಿನಲ್ಲಿ ನಿರಂತರವಾಗಿ ಮಳೆ : ಪ್ರವಾಹದ ಭೀತಿ
ಕೊಡಗಿನಲ್ಲಿ ನಿರಂತರವಾಗಿ ಮಳೆ ಆಗುತ್ತಿದ್ದು ನಿನ್ನೆ ಸಂಜೆ ಬಳಿಕ ಜಿಲ್ಲೆಯಲ್ಲಿ ಮಳೆ ತೀವ್ರಗೊಂಡಿದೆ.
ಹೀಗಾಗಿ ಪ್ರವಾಹದ ಭೀತಿ ಕೊಡಗಿನ ಜನತೆ ಎದುರಿಸುತ್ತಿದ್ದಾರೆ.
ಮಡಿಕೇರಿ ಸೋಮವಾಪೇಟೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಆಗಿದೆ.
ಇದರಿಂದಾಗಿ ಗ್ರಾಮೀಣ ಜನರ ಬದುಕು ಸಂಪೂರ್ಣ ಅಸ್ತ ವ್ಯಸ್ತ ಆಗಿದೆ.
ವಿದ್ಯುತ್ ಕಂಬಗಳು ಬೃಹತ್ ಗಾತ್ರದ ಮರ ಗಳು ಧರೆಗುಳಿದಿದೆ.

ಕಾಫಿ ತೋಟಕ್ಕೆ ನುಗ್ಗಿದ ನೀರು ಕಾಫಿ ಕೊಳೆತು ಹೋಗಿದೆ.
ಕಿತ್ತಳೆ ಹಣ್ಣು ಬಹುತೇಕ ಬಿದ್ದು ಹೋಗಿವೆ. ಗದ್ದೆಗಳು ಜಲಾವೃತ ಆಗಿದೆ.
ಭಾಗಮಂಡಲ ತ್ರಿವೇಣಿ ಸಂಗಮ, ಹಾರಂಗಿ ಜಲಾಶಯ ಭರ್ತಿಯಾಗಿದೆ.
ಮಡಿಕೇರಿ ತಾಲೂಕಿನ ಅಬ್ಬೀ ಫಾಲ್ಸ್… ಸೋಮವಾರಪೇಟೆಯ ಮಲ್ಲಳ್ಳಿ ಫಾಲ್ಸ್…..ವಿರಾಜಪೇಟೆಯ ಇರ್ಫು ಫಾಲ್ಸ್ ತುಂಬಿ ಹರಿಯುತ್ತಿದ್ದು ಪ್ರವಾಸಿಗರಿಗೆ ಮನಮೋಹಕ ದೃಶ್ಯವಾಗಿದೆ.
ಆದರೆ ಕೊಡಗಿನ ಜನತೆಗೆ ಮಾತ್ರ ಪ್ರವಾಹದ ಭೀತಿ ಆತಂಕ ಎದುರಾಗಿದೆ.