ನಂದಿಗಿರಿಧಾಮದ ಬುಡದಲ್ಲಿ ಪ್ರವಾಸಿಗರ ಪರದಾಟ | ಜಿಲ್ಲಾಢಳಿತ ವಿರುದ್ಧ ಆಕ್ರೋಶ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಮೇಲೆ ಪಾರ್ಕಿಂಗ್ ಹೌಸ್ ಫುಲ್ ಆದ ಹಿನ್ನೆಲೆ, ನಂದಿಗಿರಿಧಾಮದ ಬುಡದಲ್ಲಿ ಪ್ರವಾಸಿಗರು ಪರದಾಡುವಂತಾಗಿದೆ.
ಬೆಳಿಗ್ಗೆ 4 ಗಂಟೆಯಿಂದ ನಂದಿಗಿರಿಧಾಮಕ್ಕೆ ಪ್ರವಾಸಿಗರು ಆಗಮಿಸಿದ್ದರು. ಆದರೆ ಪಾರ್ಕಿಂಗ್ ಹೌಸ್ ಫುಲ್ ಹಿನ್ನೆಲೆಯಲ್ಲಿ ಗಿರಿಧಾಮದ ಬುಡದಲ್ಲೇ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಹೀಗಾಗಿ ಕಿಲೋಮೀಟರ್ ಗಟ್ಟಲೇ ರಸ್ತೆಯಲ್ಲೇ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿದ್ದರು. ಇದರಿಂದ ವೃದ್ಧರು ಮಕ್ಕಳ ಸಮೇತ ವಾಹನಗಳಲ್ಲೇ ಪ್ರವಾಸಿಗರು ಪರದಾಡುತ್ತಿದ್ದಾರೆ. ಹಾಗೇ ಪ್ರವಾಸಿಗರನ್ನು ಸಮಾಧಾನ ಮಾಡಲು ನಂದಿಗಿರಿಧಾಮ ಠಾಣೆ ಪೊಲೀಸರು ಹರಸಾಹಸ ಪಡುತ್ತಿದ್ದರು.
ಇನ್ನೂ ಗಿರಿಧಾಮದಲ್ಲಿ ಕೇವಲ 300 ಕಾರು 1000 ಬೈಕ್ ಗಳನ್ನು ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮೇಲೆ ಹೋಗಿರುವ ವಾಹನಗಳು ವಾಪಸ್ ಬರುವವರೆಗೂ ಪೊಲೀಸರು ಕಾಯುತ್ತಿದ್ದರು. ಇನ್ನೂ ಪ್ರವಾಸಿಗರ ಪರಿಸ್ಥಿತಿ ಅತ್ತ ಧರಿ ಇತ್ತ ಪುಲಿಯಂತಾಗಿದೆ.
ಅಲ್ಲದೇ ಗಿರಿಧಾಮದಲ್ಲಿ ಸಂಚಾರ ದಟ್ಟಣೆ ತಡೆಯಲು, ಪ್ರವಾಸಿಗರಿಗೆ ಕಡಿವಾಣ ಹಾಕಲು ಜಿಲ್ಲಾಢಳಿತ ಆನ್ ಲೈನ್ ಪಾಸ್ ವ್ಯವಸ್ಥೆ ಕಲ್ಪಿಲಸು ನಿರ್ಧರಿಸಿತ್ತು. ಆದರೆ ಹೇಳಿದಂತೆ ಹೇಳಿದಂತೆ ಆನ್ ಲೈನ್ ಪಾಸ್ ವ್ಯವಸ್ಥೆ ಕಲ್ಪಿಸದ ಹಿನ್ನಲೆ ಪ್ರವಾಸಿಗರು ಜಿಲ್ಲಾಢಳಿತ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ.









