ಹಿಮನದಿಯಲ್ಲಿ ಹೆಲಿಕಾಪ್ಟರ್ ಪತನ…5 ಮಂದಿ ಸಾವು
ಅಮೆರಿಕ : ಅಲಾಸ್ಕಾದ ಅಂಕಾರೇಜ್ ಬಳಿ ಹಿಮನದಿಯಲ್ಲಿ ಹೆಲಿಕಾಫ್ಟರ್ ಪತನವಾಗಿ 5 ಜನ ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ. ಅಲಾಸ್ಕಾದ ಹೊರವಲಯದ ಹಿಮ ಪರ್ವತಗಳಿಂದ ಕೂಡಿರುವ ಸ್ಕೀಯಿಂಗ್ ಪ್ರವಾಸಿ ತಾಣಕ್ಕೆ ಪ್ರವಾಸಿಗರನ್ನು ಮತ್ತು ಮಾರ್ಗದರ್ಶಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ, ಪೈಲಟ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಅಲಾಸ್ಕಾದ ಅಂಕಾರೇಜ್ ಬಳಿಯ ಉತ್ತರ ಚುಗಾಚ್ ಪರ್ವತಗಳಲ್ಲಿನ ದೃಶ್ಯಗಳನ್ನು ವೀಕ್ಷಿಸಲು ಬೇಸಿಗೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪಾದಯಾತ್ರೆ ಮತ್ತು ಬೋಟಿಂಗ್ ಪ್ರವಾಸಗಳಿಗೆ ಇಂದು ಹೆಸರಾದ ತಾಣವಾಗಿದೆ. ಆಂಕಾರೇಜ್ ನ ಈಶಾನ್ಯದ ನಿಕ್ ಗ್ಲೇಸಿಯರ್ಸ್ ಪ್ರದೇಶದ ನಿಕ್ ಹಿಮನದಿಯ ಮೇಲೆ ಹಾರಾಟದಲ್ಲಿದ್ದ ವೇಳೆಯಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಈ ವೇಳೆ ಐವರು ಮೃತಪಟ್ಟಿದ್ಧಾರೆ
ಹೆಲಿಕಾಪ್ಟರ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಆಂಕರೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಟ್ವಿಟ್ಟರ್ ಬಳಕೆದಾರರಿಗೆ ಗುಡ್ ನ್ಯೂಸ್ – ಮತ್ತೊಂದು ಕೂಲ್ ಫೀಚರ್ ನಿಮಗಾಗಿ…!
ತಾಯಿ – ಮಗಳ ಮೇಲೆ ಅತ್ಯಾಚಾರ, ನಾಲ್ವರ ಕೊಲೆ ಪ್ರಕರಣ : ಅಪರಾಧಿಗೆ ಗಲ್ಲು ಶಿಕ್ಷೆ..!