Hijab controvercy : ಕೈಮುಗಿದು ಮನವಿ ಮಾಡಿಕೊಂಡ ಶಾಸಕ ಶಿವರಾಜ್ ಪಾಟೀಲ್
ರಾಯಚೂರು : ರಾಜ್ಯದಲ್ಲಿ ನಡೆದಿರುವ ಹಿಜಾಬ್ ಘಟನೆ ಸಂಬಂಧ ಹಿಂದೂ-ಮುಸ್ಲಿಂ ಪಾಲಕರಲ್ಲಿ ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ..
ಮಕ್ಕಳಿಗೆ ಹಿಜಾಬ್ ಕುರಿತು ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿ ಅವರಿಗೆ ಬುದ್ದಿವಾದ ಹೇಳಿ ಓದಿನತ್ತ ಗಮನಹರಿಸುವಂತೆ ಪೋಷಕರಿಗೆ ಬುದ್ದಿವಾದ ಹೇಳಲಯ ಶಾಸಕ ಶಿವರಾಜ್ ಪಾಟೀಲ್ ವಿನಂತಿಸಿಕೊಂಡಿದ್ದಾರೆ…

ಅಲ್ಲದೇ ನಾವು ನಮ್ಮ ಮಕ್ಕಳನ್ನು ನಿಯಂತ್ರಣದಲ್ಲಿ ಇರಿಸಿದರೆ ಇದು ಯಾವುದೇ ದೊಡ್ಡ ವಿಷಯವಲ್ಲ… ನಾವು ಶಾಲೆಗೆ ಹೋಗೋದು ಕಲಿಯಲಿಕ್ಕೆ ಅದು ಯಾವುದೇ ಸಮಾಜ ಇರಲಿ ಮಕ್ಕಳಿಗೆ ಮನಸ್ಸಲ್ಲಿ ವಿಷಬೀಜ ಬಿತ್ತಿರುವುದು ಸರಿಯಲ್ಲ…
ಇವತ್ತು ಒಂದು ಶಾಲೆಯಲ್ಲಿ ಇರುವುದನ್ನು ಇಡೀ ಕರ್ನಾಟಕಕ್ಕೆ ಕಿಡಿ ಹಚ್ಚುವಂತ ಕೆಲಸ ಆಗಿದೆ… ವಿದ್ಯಾರ್ಥಿಗಳು ಕಲಿಕೆ ಮಾತ್ರ ಸೀಮಿತ ಆಗಬೇಕು ಸಮಸ್ಯೆಗಳಿಗಾಗಿ ಸರ್ಕಾರವಿದೆ ಎಂದು ಕೈಮುಗಿದು ವಿನಂತಿ ಮಾಡಿಕೊಂಡಿದ್ದಾರೆ..








