Hijab Controvercy : 2021 ನವೆಂಬರ್ ನಲ್ಲಿ ವ್ಯೂಹ ರಚನೆ ಮಾಡಲಾಗಿದೆ : ರಘುಪತಿ ಭಟ್
ಉಡುಪಿ : ಹಿಜಾಬ್ ಕೇಸರಿ ವಿವಾದ ಪ್ರಕರಣ ಸಂಬಂಧ ಉಡುಪಿಯಲ್ಲಿ ಮಾತನಾಡಿರುವ ಶಾಸಕ ರಘುಪತಿ ಭಟ್ ಅವರು 2021 ನವೆಂಬರ್ ನಲ್ಲಿ ವ್ಯೂಹ ರಚನೆ ಮಾಡಲಾಗಿದೆ. ಎಲ್ಲ ಪ್ಲಾನಿಂಗ್ ಮಾಡಿ ಹೋರಾಟ ಗಲಭೆ ಎಬ್ಬಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ. ಎನ್ ಐ ಎ ತನಿಖೆ ಗೆ ಒತ್ತಾಯ ಮಾಡುತ್ತೇನೆ.
ಇಷ್ಟು ದಿನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಂಬಲ ನೀಡಿತ್ತು. ಪ್ರಕರಣಕ್ಕೆ ಸಿದ್ದರಾಮಯ್ಯ ಎಂಟ್ರಿಯಾಗುವ ಮೂಲಕ ಕಾಂಗ್ರೆಸ್ ಎಂಟ್ರಿಯಾಗಿದೆ. ಈಗ ಬಿ ವಿ ಶ್ರೀನಿವಾಸ್ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ರಾಜ್ಯದ ಜನಕ್ಕೆ ಕಾಂಗ್ರೆಸ್ನ ನಿಲುವು ಏನು ಎಂಬುದು ಗೊತ್ತಾಗಿದೆ. ನಾವು ಹಿಜಬ್ ಸಂಪೂರ್ಣ ಬ್ಯಾನ್ ಮಾಡಲು ಮುಂದಾಗಿಲ್ಲ. ತರಗತಿಗೆ ಹಿಜಬ್ ಬೇಡ ಎಂಬುದು ಮಾತ್ರ ನಮ್ಮ ನಿಲುವು ಎಂದಿದ್ದಾರೆ..