ಹಿಜಾಬ್ – ಕೇಸರಿ ಶಾಲು ವಿವಾದ | ಪರಿಸ್ಥಿತಿ ತಿಳಿಗೊಳಿಸಲು ಲಘು ಲಾಠಿ ಜಾರ್ಜ್, ಅಶ್ರುವಾಯು ಪ್ರಯೋಗ Saaksha Tv
ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದು, ಪೋಲಿಸರು ಲಘು ಲಾಠಿ ಜಾರ್ಜ್ ಮಾಡಿ, ಅಶ್ರುವಾಯು ಕೂಡ ಸಿಡಿಸಿದ್ದಾರೆ.
ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿನ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದರು. ಈ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಹೊರಗಡೆಯಿಂದ ಕೆಲ ಯುವಕರು ಭಾಗಿಯಾಗಿದ್ದರು. ಆಗ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ವಾಗ್ವಾದ ತಾರಕಕ್ಕೆ ಏರಬಾರದೆಂದು ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ.
ಪರಿಸ್ಥಿತಿ ತಿಳಿಗೊಳಿಸಲು ಮಧ್ಯ ಪ್ರವೇಶಿಸಿದ ಪೊಲೀಸರನ್ನು ಒಂದು ಕೋಮಿನವರು ಪೊಲೀಸರನ್ನು ತಳ್ಳಿದ್ದಾರೆ. ಇದರಿಂದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಸಿಡಿಸಿದ್ದಾರೆ.
ಘಟನೆ ಬಳಿಕ ಹರಿಹರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಯಿತು. ಘಟನೆಯಲ್ಲಿ ಇಬ್ಬರು ಪೋಲಿಸರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಎಸ್ಪಿಸಿಬಿ ರಿಷ್ಯಂತ್ ಸ್ಥಳದಲ್ಲೇ ವ್ಯಾಸ್ತವ್ಯ ಹೂಡಿದ್ದಾರೆ. ಇದಲ್ಲದೆ ಘಟನೆಯಲ್ಲಿ ಒಂದು ಕಾರು ಜಖಂ ಆಗಿದೆ.