ಹಾವೇರಿ: ಹಿರೇಕೆರೂರು ಕ್ಷೇತ್ರದಲ್ಲಿ ಕೊರೊನಾ ಮಹಾಮಾರಿ ಲಗ್ಗೆಯಿಟ್ಟಿದ್ದು, ಹಿರೇಕೆರೂರನ್ನು ಸೀಲ್‍ಡೌನ್ ಮಾಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕೊರೊನಾ ಮಹಾಮಾರಿ ತಮ್ಮ ಮತಕ್ಷೇತ್ರಕ್ಕೂ ಲಗ್ಗೆಯಿಟ್ಟಿದ್ದು, ಸಮುದಾಯದಕ್ಕೆ ಪಸರಿಸುತ್ತಿದೆ.
ಕ್ಷೇತ್ರದ ಗ್ರಾಮೀಣ ಭಾಗಗಳಾದ ಗುಡ್ಡದ ಮಾದಾಪುರ, ಕೋಡ, ಸುತ್ಕೋಟೆ, ಎಮ್ಮಿಗನೂರು ಸೇರಿದಂತೆ ವಿವಿಧ ಭಾಗಗಳಿಗೂ ಕೊರೊನಾ ವ್ಯಾಪಿಸಿದೆ. ಪ್ರತಿಯೊಬ್ಬರ ಜೀವ ಅವರವರ ಕೈಯಲ್ಲಿ ಇದೆ. ಜನತೆ ಆದಷ್ಟು ಎಚ್ಚೆತ್ತುಕೊಂಡಿರಬೇಕು. ಯಾರಿಗಾದರೂ ಸೋಂಕು ತಗುಲಿದ ಶಂಕೆ ವ್ಯಕ್ತವಾದಲ್ಲಿ ಅಥವಾ ಶೀತ, ಜ್ವರ, ಕೆಮ್ಮಿನಂತಹ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆಗೊಳಪಡಬೇಕು.
ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ನಮ್ಮ ಜೀವಕ್ಕೆ ನಾವೇ ಹೊಣೆ. ಆದಷ್ಟು ಸುರಕ್ಷತಾ ಕ್ರಮ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಕೊರೊನಾದಿಂದ ಸುರಕ್ಷಿತವಾಗಿರಗಲು ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದರ ಜೊತೆಗೆ ಜನತೆ ಎಚ್ಚೆತ್ತುಕೊಳ್ಳುವಂತೆ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ 2025
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇದರ ವತಿಯಿಂದ ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಮಿನಿಸ್ಟ್ರಿಗಳಲ್ಲಿ ಖಾಲಿಯಾಗಿರುವ ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ...