holloween blue moon
ಭೂಮಿಯ ನೈಸರ್ಗಿಕ ಉಪಗ್ರವಾಗಿರುವ ಚಂದ್ರ ಖಗೋಳ ಕೌತುಕದ ಕಣಜ… ಆಕಾಶಕಾಯದಲ್ಲಿ ಚಂದಿರ ಆಗಾಗ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗುತ್ತಿರುವತ್ತಾನೆ. ಇತ್ತೀಚೆಗಷ್ಟೇ ಖಗೋಳ ವ ಪಿಂಕ್ ಮೂನ್ ಅನ್ನ ಜನರು ಕಣ್ತುಂಬಿಕೊಂಡಿದ್ದರು. ಏಪ್ರಿಲ್ ತಿಂಗಳಿನಲ್ಲಿ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ್ದ ಸೂಪರ್ ಪಿಂಕ್ ಮೂನ್ ಅನ್ನ ನೋಡಿ ಖಗೋಳ ಕೌತುಕಕ್ಕೆ ಸಾಕ್ಷಿಯಾಗಿದ್ದರು. ಹೀಗೆ ಆಗಾಗ ಚಂದ್ರನ ಕೌತುಕ ಜಾರಿಯಲ್ಲಿರುತ್ತೆ. ಇದೀಗ ನೀಲಿ ಚಂದ್ರನ ಕಣ್ತುಂಬಿಕೊಳ್ಳುವ ಭಾಗ್ಯ ಜನರಿಗೆ ಸಿಗುತ್ತಿದೆ.
ಹೌದು.. ನೀಲಿ ಚಂದ್ರ.. ಏನಿದು ನೀಲಿ ಚಂದ್ರ. ಇದರ ರಹಸ್ಯವೇನು. ಕಗ್ಗತ್ತಲ್ಲಲ್ಲಿ ಹಾಲಿನಂತೆ ಹೊಳೆಯುವ ಚಂದ್ರ ಅತ್ಯಂತ ಆಕರ್ಷಣೀಯ. ಇಂತಹ ಚಂದ್ರ ಆಗಾಗ ಒಂದೊಂದು ಬಣ್ಣದಲ್ಲಿ ಅಪರೂಪದಲ್ಲೇ ಅಪರೂಪಕ್ಕೆ ಕಾಣಿಸಿಕೊಳ್ತಾನೆ. ಏಪ್ರಿಲ್ ನಲ್ಲಿ ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದ ಚಂದ್ರ. ಇದೀಗ ನೀಲಿ ಚಂದ್ರನ ದರ್ಶನವಾಗಲಿದೆ. ಅಕ್ಟೋಬರ್ 31ರ ರಾತ್ರಿ ಸರಿಯಾಗಿ ಹಾಲೋವಿನ್ ಬ್ಲೂ ಮೂನ್ ದರ್ಶನವಾಗಲಿದೆ. ರಾತ್ರಿಯಲ್ಲಿ ಕಗ್ಗತ್ತಲ ಬಾನಂಗಳದಲ್ಲಿ ನೀಲಿ ಚಂದ್ರ ಕಂಗೊಳಿಸಲಿದ್ದಾನೆ. ಈ ಖಗೋಳ ವಿಸ್ಮಯಕ್ಕೆ ಇಡೀ ನಭೋ ಮಂಡಳ ಹಾಗೂ ಮನುಕುಲ ಸಾಕ್ಷಿಯಾಗಲಿದೆ.
ಅಕ್ಟೋಬರ್ ತಿಂಗಳ ಆರಂಭದಲ್ಲೇ ಹುಣ್ಣಿಯಂದು ಬೆಳದಿಂಗಳ ಬೆಳಕು ಚೆಲ್ಲಿದ್ದ ಚಂದ್ರ ಇದೀಗ ನೀಲಿ ಚಂದ್ರನಾಗಿ ದರ್ಶನ ನೀಡಲಿದ್ದಾನೆ. ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ಹುಣ್ಣಿಮೆ ಬಂದಿದೆ. ಇದೇ ಹುಣ್ಣಿಮೆಯನ್ನೇ ಬ್ಲೂ ಮೂನ್ ಎನ್ನುತ್ತಾರೆ. ಒಂದೇ ತಿಂಗಳಲ್ಲಿ 2 ಹುಟ್ಟಿಮೆ ಬಂದಿರೋದು ಅಪರೂಪವೂ ಹೌದು ವಿಶೇಷವೂ ಹೌದು. ಇನ್ನೂ ಒಂದೇ ತಿಂಗಳಲ್ಲಿ ಬರುವ ಎರೆಡೆರೆಡು ಹುಣ್ಣಿಮೆಯ ಪ್ರಾಕೃತಿಕ ವಿದ್ಯಮಾನವನ್ನೇ ವೈಗ್ಞಾನಿಕವಾಗಿ ಹಾಲೋವಿನ್ ಬ್ಲೂ ಮೂನ್ ಅಥವಾ ನೀಲಿ ಚಂದ್ರ ಎಂದು ಕರೆಯಲಾಗುತ್ತೆ. ಈ ರೀತಿ ಒಂದೇ ತಿಂಗಳಲ್ಲಿ 2 ಹುಣ್ಣಿಮೆ ಬರೋದು ತೀರ ಅಪರೂಪದಲ್ಲೇ ಅಪರೂಪ.
ಇನ್ನೂ ತಜ್ಞರು, ಜ್ಯೋತಿಶಿಗಳ ಪ್ರಕಾರ ಈ ಬ್ಲೂ ಮೂನ್ ಮತ್ತೆ ಜಗತ್ತಿಗೆ ಕಂಟವಾಗಬದು ಎಂದು ಹೆಳಲಾಗುತ್ತಿದೆ. ಹಂಟರ್ ಮೂನ್ ಎಂದು ಸಹ ಕರೆಸಿಕೊಳ್ಳುವ ಈ ಬ್ಲೂ ಮೂನ್ ಭಯಾನಕ ಜಲಪ್ರಳಯಕ್ಕೂ ಕಾರಣವಾಗಬಹುದು ಎಂದು ವರ್ಣಿಸಲಾಗುತ್ತಿದೆ. ಹಂಟರ್ ಮೂನ್ ಅಂದ ತಕ್ಷಣ ಇದೇನೋ ಭಯಾನಕ ಕ್ರಿಯೆಗೆ ಈ ಹೆಸರು ಇಡಲಾಟಗಿದೆ ಅಂದ್ಕೊಂಡ್ರಾ. ಇಲ್ಲ. ಬದಲಾಗಿ ಹಂಟರ್ ಮೂನ್ ಅಂದ್ರೆ ಹಿಂದೆಲ್ಲಾ ಶಿಖಾರಿಗಳು ಬೇಟೆಯಾಡಲು ಹೋದ್ರೆ ಚಂದ್ರ ಪೂರ್ಣ ಬೆಳದಿಂಗಳ ಬೆಳಕು ಚೆಲ್ಲುತ್ತಿದ್ದದ್ದು , ಬೇಟೆಗಾರರಿಗೆ ತುಂಬಾ ಸಹಾಯವಾಗುತ್ತಿತ್ತು. ಹೀಗಾಗಿಯೇ ನೋಡಿ ಇದನ್ನ ಹಂಟರ್ ಮೂನ್ ಎಂದು ಕರೆಯೋದು.
ಇನ್ನೂ NASA ಮಾಹಿತಿ ಪ್ರಕಾರ ಮುಂದಿನ ಬ್ಲೂ ಮೂನ್ ದರ್ಶನವಾಗೋದು 2039ರಲ್ಲಿ. ಹೀಗಾಗಿಯೇ ಈ ಬ್ಲೂ ಮೂನ್ ತೀರ ಅಪರೂಪವೆಂದು ಬಿಂಬಿಸಲಾಗಿದೆ. ಇನ್ನೂ ಕಳೆದ ಬ್ಲೂ ಮೂನ್ ದರ್ಶನವಾಗಿದ್ದು 1994ರಲ್ಲಿ. ಇನ್ನೂ ಬ್ಲೂ ಮೂನ್ ಅಂತ ಕರೆಸಿಕೊಳ್ಳುವ ಈ ಬ್ಲೂ ಮೂನ್ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳೋದಿಲ್ಲ,. ಹಾಗೆಯೇ ಎಲ್ಲರಿಗೂ ಕಾಣಿಸಿಕೊಳ್ತಾನೆ ಅಂತಾನೂ ಇಲ್ಲ. ಅದೃಷ್ಟವಂತರಿಗೆ ಕಾಣಿಸಿಕೊಳ್ತಾನೆ ಬ್ಲೂ ಮೂನ್.
holloween blue moon
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ : ಪೋಟೋಗಳು ವೈರಲ್..!
‘ಕಾಸ್ಟಿಂಗ್ ಕೌಚ್’ ನ ಕರಾಳ ಅನುಭವ ಹಂಚಿಕೊಂಡ ‘ದಂಗಲ್’ನಟಿ!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel