‘ಹೊಂಬಾಳೆ’ 11ನೇ ಸಿನಿಮಾ – ‘ಕಿಚ್ಚು’ ಹೊತ್ತಿಸುವುದು ಇವರೇನಾ..?

1 min read

‘ಹೊಂಬಾಳೆ’ 11ನೇ ಸಿನಿಮಾ – ‘ಕಿಚ್ಚು’ ಹೊತ್ತಿಸುವುದು ಇವರೇನಾ..?

ಕೆಜಿಎಫ್ ನಂತಹ ಸೂಪರ್ ಹಿಟ್ ಸಿನಿಮಾ ನೀಡಿ ಇಡೀ ಭಾರತೀಯ ಸಿನಿಮಾರಂಗದ ಗಮನ ಸೆಳೆದಿರುವ ಹೊಂಬಾಳೆ ಫಿಲಮ್ಸ್ ಇದೀಗ ಮತ್ತೊಮ್ಮೆ ‘ಕಿಚ್ಚು’ ಹೊತ್ತಿಸಿದೆ. ಇತ್ತೀಚೆಗಷ್ಟೇ 9ನೇ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ದ್ವಿತ್ವ ಸಿನಿಮಾ ಅಪ್ ಡೇಟ್ಸ್ ನೀಡಿತ್ತು.. ಹೊಂಬಾಳೆ ಫಿಲಮ್ಸ್ ನ 10ನೇ ಸಿನಿಮಾದ ಟೈಟಲ್ ಹಾಗೂ ಹೀರೋ ಅನೌನ್ಸ್ ಮಾಡಿತ್ತು.. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿಯಾಗಿ ಬರುತ್ತಿರೋದಾಗಿ ಘೋಷಿಸಿದ್ದ ಹೊಂಬಾಳೆ ಬ್ಯಾಕ್ ಟು ಬ್ಯಾಕ್ ಸಿನಿಪ್ರಿಯರಿಗೆ ಸಿಹಿ ಸುದ್ದಿ ನೀಡ್ತಿದೆ..

ಇದೀಗ 11ನೇ ಸಿನಿಮಾದ ಅಪ್ ಡೇಟ್ಸ್ ನೀಡಿದ್ದು, ಆಗಸ್ಟ್ 6 ಅಂದ್ರೆ ನಾಳೆ ಬೆಳಿಗ್ಗೆ 11 ಗಂಟೆಗೆ ಸಿನಿಮಾದ ಟೈಟಲ್ , ಹೀರೋ ಪರಿಚಯ ಮಾಡಿಕೊಡೋದಾಗಿ ಹೇಳಿ , ಸಸ್ಪೆನ್ಸ್ ನೀಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.. ಮತ್ತೊಮ್ಮೆ ಸಿನಿಪ್ರಿಯರ ದೃಷ್ಟಿ ಸ್ಟಾರ್ ನಟರತ್ತ ನೆಟ್ಟಿದೆ.. ಯಾರಿರಬಹುದು ಹೀರೋ ಅನ್ನೋ ಹುಡುಕಾಟದ ನಡುವೆ ಜೋರಾಗಿ ಕೇಳಿಬರುತ್ತಿರೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹೆಸರು.. ಕಿಚ್ಚು ಅನ್ನೋ ಪದ ಕೇಳ್ತಿದ್ದಂತೆ ಕಿಚ್ಚ  ಇರಬಹುದಾ ಅನ್ನೋ  ಅನುಮಾನ ಸಹಜವಾಗಿಯೇ ಮೂಡುತ್ತೆ.kiccha

ಆದ್ರೆ ಯಾರು ನಾಯಕ ಅನ್ನೋದು ನಾಳೆಯೇ ಗೊತ್ತಾಗ್ಬೇಕಿದೆ.. ಆದ್ರೆ ಯಶ್ , ಸುದೀಪ್ , ರಿಷಬ್ ಶೆಟ್ಟಿ ಹೆಸರುಗಳು ಚರ್ಚೆಯಲ್ಲಿದೆ.. ಅಂದ್ಹಾಗೆ ಹೊಂಬಾಳೆ ಪ್ಯಾನ್ ಇಂಡಿಯಾ ಸಿನಿಮಾ , ಬಾಹುಬಲಿ ಪ್ರಭಾಸ್ , ಕಿಂಗ್ ಮೇಕರ್ ಪ್ರಶಾಂತ್ ನೀಲ್ ಕಾಂಬಿನೇಷನ್ ನ ‘ಸಲಾರ್’ ಗೂ ಬಂಡವಾಳ ಹೂಡ್ತಿದೆ.. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯ್ತಿದೆ.. ಆದ್ರೆ ಸಿನಿಮಾದ ಹೊಸ ರಿಲೀಸ್ ದಿನಾಂಕ ಇನ್ನೂ ಅನೌನ್ಸ್ ಆಗಬೇಕಿದೆ.. ಈ ನಡುವೆ ಹೊಂಬಾಳೆ ಬ್ಯಾಕ್ ಟು  ಬ್ಯಾಕ್  ಧಮಾಕಾ ನ್ಯೂಸ್ ಕೊಡ್ತಿದೆ..

Rap ಸಿಂಗರ್ ‘ಯೋ ಯೋ ಹನಿಸಿಂಗ್’ ವಿರುದ್ಧ ದೌರ್ಜನ್ಯ ಕೇಸ್ – 10 ಕೋಟಿ ರೂ. ಪರಿಹಾರ ಕೇಳಿದ ಪತ್ನಿ  

ಸಲಾರ್ ಗೆ ಬಾಲಿವುಡ್ ನ ‘ಕಮಲಿ’ ಎಂಟ್ರಿ..!

ಅಶ್ಲೀಲ ವಿಡಿಯೋ ಪ್ರಕರಣ  : ಬೆತ್ತಲಾಗಿ ಲೈವ್ ಗೆ ಬಂದು ಸವಾಲೆಸೆದ  ಗೆಹನಾ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd