ಜುಲೈ 11ಕ್ಕೆ ಹೊಸ ಸಿನಿಮಾ ಘೋಷಣೆ ಮಾಡಲಿದೆ ಹೊಂಬಾಳೆ ಫಿಲ್ಮ್ಸ್ : ಈ ಸಿನಿಮಾದ ನಾಯಕ ಯಾರು…? 

1 min read

ಜುಲೈ 11ಕ್ಕೆ ಹೊಸ ಸಿನಿಮಾ ಘೋಷಣೆ ಮಾಡಲಿದೆ ಹೊಂಬಾಳೆ ಫಿಲ್ಮ್ಸ್ : ಈ ಸಿನಿಮಾದ ನಾಯಕ ಯಾರು…?

ಕೆಜಿಎಫ್ ಸಿನಿಮಾದಂತಹ ಸೂಪರ್ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್ ಸದ್ಯ ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸಿನಿಮಾ ಮಾಡುತ್ತಿರೋದಾಗಿ ಘೋಷಣೆ ಮಾಡಿತ್ತು.. ಅಲ್ಲದೇ ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಜೋಡಿಯ ‘ದ್ವಿತ್ವ’ ಟೈಟಲ್ ಪೋಸ್ಟರ್ ಪ್ರಕಟಿಸಿದೆ. ಅಂದ್ಹಾಗೆ ‘ದ್ವಿತ್ವ’ ಹೊಂಬಾಳೆ ಪ್ರೊಡಕ್ಷನ್‌ನಲ್ಲಿ ಬರುತ್ತಿರುವ 9ನೇ ಸಿನಿಮಾವಾಗಿದೆ.

ಅಲ್ಲದೇ  ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನ ಅಡಿ ನಿರ್ಮಾಣವಾಗಿರುವ ಭಾರತದ ಬಹುನಿರೀಕ್ಷೆಯ KGF ಚಾಪ್ಟರ್ ಗಾಗಿ ಅಭಿಮಾನಿಗಳು ಕಾಯ್ತಾ ಇದ್ದಾರೆ.. ಈ ನಡುವೆ ಪ್ರಶಾಂತ್ ನೀಲ್ ಸಾರಥ್ಯದ ಬಾಹುಬಲಿ ಪ್ರಭಾಸ್ ನಟನೆಯ ಸಲಾರ್ ಸಿನಿಮಾವನ್ನೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡ್ತಿದೆ.. ಈ ನಡುವೆ  ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದೆ ಹೊಂಬಾಳೆ  ಫಿಲ್ಮ್ಸ್.. ಹೌದು.. 10ನೇ ಚಿತ್ರವನ್ನ ಹೊಂಬಾಲೆ ಪ್ರಕಟಿಸಿದೆ..  ಜುಲೈ 11 ರಂದು ಸಿನಿಮಾದ ಫಸ್ಟ್ ಲುಕ್ ಹಾಗೂ ಇನ್ನಿತರ ವಿವರ ನೀಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿದೆ.  ಆದ್ರೆ ಸಿನಿಮಾ ಯಾವುದು, ಕಥೆಯೇನು..? ಮುಖ್ಯವಾಗಿ ನಾಯಕ ಯಾರು ಈ ಗೊಂದಲಗಳಿಗೆ ಪ್ರಶ್ನೆಗಳಿಗೆ ಅಧಿಕೃತವಾಗಿ ಉತ್ತರ ಜುಲೈ 11ರಂದೇ ಸಿಗಲಿದೆ.. ಆದ್ರೆ ಮೂಲಗಳ ಪ್ರಕಾರ  ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿರುವುದು ಬಹುತೇಕ ಖಚಿತವಾಗಿದೆ ಎನ್ನಲಾಗ್ತಿದೆ..rakshit-shetty

ಇದಕ್ಕೆ ಕಾರಣವೂ ಇದೆ.. ರಕ್ಷಿತ್ ಶೆಟ್ಟಿ ಜೊತೆ ಹೊಂಬಾಳೆ  ಪ್ರೊಡಕ್ಷನ್  ಸಿನಿಮಾ  ಮಾಡಲಿದೆ ಎನ್ನುವ ವಿಚಾರ ಸಾಕಷ್ಟು ದಿನಗಳಿಂದ ಮುಂಚೂಣಿಯಲ್ಲಿದೆ.  ಜುಲೈ 11ರಂದು ಖಾಸಗಿ ಸುದ್ದಿ ವಾಹಿನಿ ಮಾಡಿದ್ದ  ಆರೋಪಕ್ಕೆ  ರಕ್ಷಿತ್ ಉತ್ತರ ನೀಡುವುದಾಗಿ ಹೇಳಿಕೊಂಡಿದ್ದಾರೆ.  ಆರೋಪಕ್ಕೆ ಜುಲೈ 11 ರಂದು ಉತ್ತರ ಕೊಡ್ತೇನೆ ಎಂದು ರಕ್ಷಿತ್ ಸವಾಲು ಹಾಕಿದ್ದರು. ಇದೀಗ ಹೊಂಬಾಳೆ ಫಿಲಮ್ಸ್ ಅದೇ ದಿನದಂದು ಸಿನಿಮಾ ಘೋಷಣೆ ಮಾಡಿರೋದಾಗಿ ಹೇಳಿಕೊಂಡಿರೋದ್ರಿಂದ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಅವರೇ ನಾಯಕನಾಗಿರಬಹುದಾ ಎಂಬ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.. ಹೀಗಾಗಿ ಹೊಂಬಾಳೆಯ ಮುಂದಿನ ಸಿನಿಮಾದ ನಾಯಕ ರಕ್ಷಿತ್ ಇರಬಹುದಾ ಎಂಬ ಅನುಮಾನವಿದೆ..

ಇನ್ನೂ  KGF ಚಾಪ್ಟರ್ 2 ನ ಯಶಸ್ಸಿನ ನಂತರವೂ ಯಶ್ ಮಾತ್ರ ಯಾವುದೇ ಸಿನಿಮಾಗಳನ್ನ ಒಪ್ಪಿಕೊಂಡಿರುವುದು ಅಧಿಕೃತವಾಗಿಲ್ಲ.. ಹೀಗಾಗಿ ರಾಖಿ ಭಾಯ್ ಆಗಿ ದೇಶಾದ್ಯಂತ ಕ್ರೇಜ್ ಹುಟ್ಟುಹಾಕಿರೋ ಯಶ್ ಜೊತೆಗೆ ಹೊಂಬಾಳೆ ಮತ್ತೊಂದು ಸಿನಿಮಾ ಮಾಡಲಿದ್ಯಾ ಅನ್ನುವ ಲೆಕ್ಕಾಚಾರಗಳು ಇವೆ..  ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಜುಲೈ11ರವರೆಗೂ ಕಾಯಲೇಬೇಕಾಗಿದೆ.

ಸೈಫ್ ಅಲಿ ಖಾನ್ ಹೊಸ ಸಿನಿಮಾದ ಪೋಸ್ಟರ್ ವಿರುದ್ಧ ಸಿಡಿದೆದ್ದ ಹಿಂದೂಗಳು

‘ವಿಕ್ರಾಂತ್ ರೋಣ’ದಲ್ಲಿ ಕಿಚ್ಚನ ಜೊತೆ ಹೆಜ್ಜೆ ಹಾಕಲು ‘ಲಂಕಾ’ ಸುಂದರಿ ಕೇಳಿದ ಸಂಭಾವನೆ ಎಷ್ಟು ಗೊತ್ತಾ..?

ಚಿತ್ರಮಂದಿರಗಳಿಗೆ ತೆರಗಿ ಪಾವತಿಯಿಂದ ಮುಕ್ತಿ ನೀಡಿದ ಸರ್ಕಾರ – ಈ ಆದೇಶ ಮಲ್ಟಿಪ್ಲೆಕ್ಸ್ ಗಳಿಗೆ ಅನ್ವಯಿಸಲ್ಲ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd