Honda Activa 125 2023 : ಹೊಸ ಹೋಂಡಾ ಆಕ್ಟಿವಾ 2023 ಮಾಡೆಲ್ ಬಿಡುಗಡೆ….
ಹೋಂಡಾ ಮೋಟಾರ್ ಸೈಕಲ್ 2023 ನೇ ಸಾಲಿನಲ್ಲಿ ಆಕ್ಟಿವಾ 125 2023 ಅನ್ನ ಬಿಡುಗಡೆ ಮಾಡಿದೆ. ಹೋಂಡಾ ಆಕ್ಟಿವಾ 2023 ಎಕ್ಸ್ ಶೋ ರೂಂ ಬೆಲೆ ರೂ 78,920 ರಿಂದ ಆರಂಭವಾಗಿ ರೂ 88,093 ವರಗೆ ಒರಲಿದೆ.
ಆಕ್ಟಿವಾ 2023 enhanced smart power (eSP) ಜೊತೆಗೆ 125cc PGM-FI ಎಂಜಿನ್ ಹೊಂದಿದೆ. ಹೋಂಡಾ ACG ಸ್ಟಾರ್ಟರ್ ಮತ್ತು ಸ್ಟಾರ್ಟ್ ಸೊಲೆನಾಯ್ಡ್ ಸಹ ಒಳಗೊಂಡಿದೆ.
ಕಂಪನಿಯು ಇದೀಗ ಆಕ್ಟಿವಾ 125 2023 ಜೊತೆಗೆ ಹೋಂಡಾ ಸ್ಮಾರ್ಟ್ ಕೀಯನ್ನು ನೀಡುತ್ತಿದೆ, ಸ್ಮಾರ್ಟ್ ಫೈಂಡ್, ಸ್ಮಾರ್ಟ್ ಅನ್ಲಾಕ್, ಮತ್ತು ಸ್ಮಾರ್ಟ್ ಸೇಫ್ನಂತಹ ಫೀಚರ್ಸ್ಗಳನ್ನ ನೀಡುತ್ತದೆ.
ಸ್ಕೂಟರ್ ಈಕ್ವಲೈಜರ್, ಟೆಲಿಸ್ಕೋಪಿಕ್ ಫ್ರಂಟ್, ಬ್ಯಾಕ್ ಸಸ್ಪೆನ್ಶನ್ ಕಾಂಬಿ-ಬ್ರೇಕ್ ಸಿಸ್ಟಮ್ (CBS) ಅಲಾಯ್ ಟ್ಯೂಬ್ಲೆಸ್ ಟೈರ್ಗಳನ್ನು ಹೊಂದಿದೆ. ಹೊಂಡಾ ಆಕ್ಟೀವ 125 2023 ರ ಪ್ರಮುಖ ಆಕರ್ಷಣೆಯೆಂದರೇ ಫುಲ್ ಎಲ್ಇಡಿ ಹೆಡ್ಲ್ಯಾಂಪ್ ಸಿಗ್ನೇಚರ್ ಎಲ್ಇಡಿ ಪೊಸಿಷನ್ ಲ್ಯಾಂಪ್ಗಳು, ಡಿಜಿಟಲ್-ಅನಾಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್-ಸ್ಟ್ಯಾಂಡ್ ವಿತ್ ಎಂಜಿನ್ ಇನ್ಹಿಬಿಟರ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಪಾಸಿಂಗ್ ಸ್ವಿಚ್, ಸೇರಿದಂತೆ ಹಲವು ವ್ಯವಸ್ಥೆಗಳನ್ನ ಹೊಂದಿದೆ.
Activa 125 H-Smart ಮಾಡೆಲ್ ನಲ್ಲಿ ಕೀ ಅಗ್ಯತ್ಯವಿಲ್ಲದೆ ಹ್ಯಾಂಡಲ್ ಲಾಕ್ ಇಗ್ನಿಷನ್ ಆಫ್, ಫ್ಯುಯೆಲ್ ಲಿಡ್ ಓಪನ್, ಸೀಟ್ ಓಪನ್ ಮತ್ತು ಇಗ್ನಿಷನ್ ಆನ್ ಕಾರ್ಯವನ್ನ ಸುಗಮಗೊಳಿಸುತ್ತದೆ.
ಹೋಂಡಾ ಆಕ್ಟಿವಾ 125 2023 ವಿವಿಧ ಮಾಡೆಲ್ ಗಳ ಬೆಲೆಗಳನ್ನ ಈ ಕೆಳಗೆ ನೀಡಲಾಗಿದೆ. (ಎಕ್ಸ್ ಶೋ ರೂಂ, ನವದೆಹಲಿ).
ಹೋಂಡಾ ಆಕ್ಟಿವಾ 125 2023 ಡ್ರಮ್ – ರೂ 78,920
ಹೋಂಡಾ ಆಕ್ಟಿವಾ 125 2023 ಡ್ರಮ್ ಅಲಾಯ್ – ರೂ 82,588
ಹೋಂಡಾ ಆಕ್ಟಿವಾ 125 2023 ಡಿಸ್ಕ್ – ರೂ 86,093
Honda Activa 125 2023 H-Smart – ರೂ 88,093
Honda Activa 125 2023 : New Honda Activa 2023 Model Launched….