Honeytrap – ಸುಂದರಿ ಬೀಸಿದ ಬಲೆಗೆ ಬಿದ್ದು 5 ಲಕ್ಷ ಕಳೆದಕೊಂಡ ವ್ಯಕ್ತಿ..
ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಪರಿಚಯವಾದವರೆ ಜೊತೆ ಬಿಂದಾಸ್ ಆಗಿ ವ್ಯವಹರಿಸುವ ಮುನ್ನ ಸ್ಟೋರಿ ಓದಿ… ಸಿಲಿಕಾನ್ ಸಿಟಿಯಲ್ಲಿ ಹನಿ ಹಿಂದೆ ಬಿದ್ದು ಟ್ರ್ಯಾಪ್ ಆಗಿದ್ದವನ ಕತೆ ಇದು.
ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ಸುಂದರಿ ನಿಧಾನವಾಗಿ ವೀಡಿಯೋ ಚಾಟಿಂಗ್ ಶುರು ಹಚ್ಚಿಕೊಂಡಿದ್ದಾಳೆ. ಅದು ಅಶ್ಲೀಲ ವಿಡಿಯೋ ಕಾಲ್ ವರೆಗೂ ಬಂದು ನಿಂತಿದೆ. ಇದೇ ಸಮಯಕ್ಕೆ ಕಾದು ನಿಂತಿದ್ದ ಸುಂದರಿ ಅಶ್ಲೀಲ ಚಾಟಿಂಗ್ ಅನ್ನ ರೆಕಾರ್ಡ್ ಮಾಡಿದ್ದಾಳೆ.. ಈ ಮೂಲಕ ವ್ಯಕ್ತಿಯೊಬ್ಬನನ್ನ ಹನಿಟ್ರಾಪ್ ಬೀಳಿಸಲಾಗಿದೆ. .
ನಂತರ ವಿಡಿಯೋ ಲೀಕ್ ಮಾಡೋದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಒಂದು ಹಂತದಲ್ಲಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಬೇರೆ ದಾರಿ ಹಿಡಿದ ಸೈಬರ್ ಚೋರರು. ವಿಡಿಯೋ ಕಾಲ್ ಮಾಡಿದ್ದ ಸುಂದರಿ ಸಾವನ್ನಪ್ಪಿದ್ದಾಳೆ ಅನ್ನೋ ಕಥೆ ಕಟ್ಟಿದ್ದಾರೆ. ಅವಳ ಸಾವಿಗೆ ನೀನೆ ಕಾರಣ ಅಂತ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ. ಈ ಪ್ರಕರಣ ಸಿಬಿಐನಲ್ಲಿ ದಾಖಲಾಗಿದೆ ಅಂತ ಕಥೆ ಕಟ್ಟಿ, ಗೂಗಲ್ನಲ್ಲಿ ಸಿಗುವ ಸಿಬಿಐನಲ್ಲಿ ದಾಖಲಾಗಿರುವ ಪ್ರಕರಣಗಳ ಲಿಸ್ಟ್ ತೆಗೆದು ಅದರಲ್ಲಿ ದೂರುದಾರನ ಹೆಸರು ಹಾಕಿದರು.
ಅಷ್ಟೆ ಅಲ್ಲದೇ ಆ ಲೆಟರ್ ತೋರಿಸಿ ವಿಚಾರಣೆಗೆ ಬರುವಂತೆ ಹೇಳಿ ಹಂತ ಹಂತವಾಗಿ 5 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ. ಕಡೆಗೆ ಸ್ನೇಹಿತರೊಬ್ಬರಿಗೆ ನಡೆದ ವಿಷಯ ತಿಳಿಸಿ, ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದರು. ಇದೀಗ ಆನ್ಲೈನ್ನಲ್ಲಿ ಲಕ್ಷ ಲಕ್ಷ ಪೀಕಿರುವ ಸುಂದರಿ ಹಾಗೂ ಆಕೆಯ ಗ್ಯಾಂಗ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. Honeytrap -online honeytrap from young woman in bengaluru