Saturday, June 10, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂತರಂಗದ ಕಹಾನಿ – 3 : ಅಜ್ಜಿ ಬಿಚ್ಚಿಟ್ಟ ಭೂತದ ಕಥೆ.. ಸತ್ಯವಂತೆ..!!

ಅಂದು ಕಡು ಕತ್ತಲೆ‌ ಕಡು ಕತ್ತಲೆ‌ ಗೌಚು... ದೂರದಲ್ಲಿ‌ ಗಿಚಿಗಿಚಿ ಸದ್ದು.. ಮನೆಯಲ್ಲಿ ಕರೆಂಟ್ ಇಲ್ಲ ನಿದ್ದೆ ಬೇರೆ ಬರುತ್ತಿರಲಿಲ್ಲ..  ಗಂಟೆ‌ ೧೨ ಆಗಿತ್ತು ಚಿಕ್ಕವರು‌ ನಾವಿನ್ನೂ ಆಟದ ವಯಸ್ಸು ಬೇಸಿಗೆ ರಜೆ ಅಂತ ನಾನು ತನ್ನ ತಮ್ಮ ಚಿಕ್ಕಮ್ಮನ ಮಕ್ಕಳೆಲ್ಲಾ ಅರ್ಧ ಡಜನ್ ಇದ್ವಿ..

Namratha Rao by Namratha Rao
August 14, 2022
in Newsbeat, Saaksha Special, ಎಸ್ ಸ್ಪೆಷಲ್
horror
Share on FacebookShare on TwitterShare on WhatsappShare on Telegram

ಅಂದು ಕಡು ಕತ್ತಲೆ‌ ಕಡು ಕತ್ತಲೆ‌ ಗೌಚು… ದೂರದಲ್ಲಿ‌ ಗಿಚಿಗಿಚಿ ಸದ್ದು.. ಮನೆಯಲ್ಲಿ ಕರೆಂಟ್ ಇಲ್ಲ ನಿದ್ದೆ ಬೇರೆ ಬರುತ್ತಿರಲಿಲ್ಲ..  ಗಂಟೆ‌ ೧೨ ಆಗಿತ್ತು ಚಿಕ್ಕವರು‌ ನಾವಿನ್ನೂ ಆಟದ ವಯಸ್ಸು ಬೇಸಿಗೆ ರಜೆ ಅಂತ ನಾನು ತನ್ನ ತಮ್ಮ ಚಿಕ್ಕಮ್ಮನ ಮಕ್ಕಳೆಲ್ಲಾ ಅರ್ಧ ಡಜನ್ ಇದ್ವಿ..
ನಾವೆಲ್ಲಾ‌ ನಮ್ಮ ಅಜ್ಜಿ‌ ಮನೆ ಸೇರಿದ್ವು.. ಬೆಂಗಳೂರು ಸಿಟಿಯಲ್ಲೇ ಹೊಂದುಕೊಂಡಿದ್ದ ನಮಗೆ ಆ ಹಳ್ಳಿ ಇಷ್ಟವೂ ಹೌದು ಕಷ್ಟವೂ ಹೌದು.. ಭವವೂ … ಕುತೂಹಲವೂ..  ನಮಗೆ ೧೨ ಆದ್ರೂ ನಿದ್ದೆ ಬರುತ್ತಿಲ್ಲ..‌ಹಳ್ಳಿ ಇದ್ದಿದ್ದೆ ೧೨ ಮನೆಗಳು ಅದು ಅಲ್ಲೊಂದು ಇಲ್ಲೊಂದು.. ಸುತ್ತಲೂ ಬೇರೆ ಏನೇನೂ‌‌ ಇಲ್ಲ.. ನಮ್ಮ ಅಜ್ಜಿ‌ ಮನೆ ಸಮೀಪದಲ್ಲೆ ಸ್ಮಷಾಣ ಬೇರೆ..

ನಾವೆಲ್ಲಾ ಸುತ್ತ ಕೂತೋರೆ ” ಅಜ್ಜಿ‌‌ ಅಜ್ಜಿ ಕಥೆ ಹೇಳು ಅಜ್ಜಿ‌ ಪ್ಲೀಸ್ ” ಅಂದ್ವಿ.. ನಮ್ಮಜ್ಜಿಗೂ ಬೇರೆ ಕಥೆ ಸಿಗಲಿಲ್ಲ..  ಅವರ‌ ನಿಜವಾದ ಅನುಭವನ್ನೇ ಹೇಳಿಬಿಟ್ರು..

Related posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

June 8, 2023
ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023

ಕಥೆ ಮುಗಿದ ಮೇಲೆ‌ ನಮ್ಮ ಅವಸ್ಥೆ ಕೇಳೋರಿಲ್ಲ ಒಬ್ಬರ ಕೈ ಒಬ್ರು ಬಿಡೋಕು ಸಿಕ್ಕಾಪಟ್ಟೆ ಭಯವಾಗಿತ್ತು.. ಅದ್ರಲ್ಲು ಅಮಾವಾಸ್ಯೆ ಬೇರೆ.. ನಾಯಿಗಳೂ ಒಂದೇ‌ಸಮ ಕೂಗುತ್ತಲೇ ಇದ್ದವು‌ ಬೇರೆ..

ಅಜ್ಜಿ‌ ಹೇಳಿದ ಕಥೆ..

ಸುಮಾರು ೨೧ ವರ್ಷದವರಿದ್ದರಂತೆ ಅಜ್ಜಿ ಆಗ … ಅವರು ಆಗ ೬ ತಿಂಗಳ ಬಸರಿ ಮನೆಯಲ್ಲೇ ಕೆಲಸ‌ ಮಾಡಿಕೊಂಡು ಇದ್ದರು..

ತಾತ ಆಗ ಲಾರಿ ಡ್ರೈವರ್ ಕುಡುತದ ಚಟ ಬೇರೆ ಇತ್ತು.. ಹೀಗಾಗಿ ಯಾವಾಗ ಕುಡಿದು‌ ಎಲ್ಲಿ‌ ಬಿದ್ದಿರುತ್ತಿದ್ರೋ ಅವರಿಗೂ  ಗೊತ್ತಾಗ್ತಾ ಇರಲಿಲ್ಲ..

ಅಜ್ಜಿ ಮನೆಯಲ್ಲಿ ಅಂದು ಒಬ್ರೆ ಇದ್ದರು ಅವರ ಅತ್ತೆ ಮಾವ ಹೀಗೆ ಬೇರೆ ಯಾವುದೋ ಊರಿಗೆ ದೇವಸ್ಥಾನಕ್ಕೆ ಹೋಗಿ ಅಲ್ಲೇ ಸಂಬಂಧಿಕರ‌ ಮನೆಯಲ್ಲಿ‌ ಉಳಿದಿದ್ದರು..

ಅಂದು ಅಮಾವಾಸ್ಯೆ ಬೇರೆ.. ಅಜ್ಜಿ ಪಕ್ಕದ ಮನೆಯವರಿಂದ ಬಿಸಿ ಬಿಸಿ ಮುದ್ದೆ ಹಾಗೂ ಉಪ್ ಸಾರು ಈಸಿಕೊಂಡು ತಾವು ತಿಂದು ತಾತನಿಗೆ ಇಟ್ಟು  ಕಾಯ್ತಾಯಿದ್ದರೂ.. ಗಂಟೆ ೧೨ ಆದ್ರೂ ತಾತ ಪತ್ತೆ ಇಲ್ಲ.. ಅಜ್ಜಿಗೆ ಆತಂಕ ಹೆಚ್ಚಾಗ ತೊಡಗಿತು.. ಆದ್ರೆ ಒಬ್ರೇ ಅಷ್ಟ ರಾತ್ರಿ‌ಮಾಡೋದಾದ್ರೂ ಏನು.. ಹುಡುಕೋದದರೂ ಹೇಗೆ.. ಯಾರ ಸಹಾಯ ಪಡೆಯೋದು.. ಇದೇ‌ ಯೋಚನೆಯಲ್ಲೇ‌ ದೇವರ ಫೋಟೋ ಎದ್ರಿಗೆ ಕೂತು‌ ದೇವರನ್ನೇ ನೆನೆಸಿಕೊಂಡು ಕುಳಿತಿದ್ದರಂತೆ.. ತಕ್ಷಣ ಯಾರೋ ಬಂದು ಜೋರ್ ಜೋರಾಗಿ ಬಾಗಿಲು‌ ಬಡಿದ ಶಬ್ಧ “ದಬದಬದಬದಬ” ಅಂತ ಅಜ್ಜಿಗೆ ಸಖತ್ ಭಯವಾಗಿದೆ.. ಕೈಗಳು ನಡುಗಿತ್ತು.. ಬೆವರುತ್ತಲೇ … ಯಾ…ಯಾ… ಯಾರು ಎಂದವರಿಗೆ ಆಕಡೆಯಿಂದ ಅಕ್ಕ ನಾನು ಪುಟ್ಟ ಎಂಬ ಧ್ವನಿ ಕೇಳಿದೆ.. ಸ್ವಲ್ಪ ಸಮಾಧಾನ ವಾಗ್ತಾ ಹೋಗಿ ಬಾಗಿಲು ತೆಗೆದವರಿಗೆ ಪುಟ್ಟನ‌ ಗಾಬರಿಯ ಮುಖ ನೋಡಿ ಆತಂಕವಾಗಿದೆ..

ಅಜ್ಜಿ ಕೇಳಿದ್ದಾರೆ ಪುಟ್ಟ ಏನಾಯ್ತು ಯಾಕ್ ಇಷ್ಟ್ ಬೆವರ್ತಿದ್ಯಾ ಗಾಬರಿಯಾಗಿದ್ಯಾ ಏನಾಯ್ತು..? ನೀನು ಎಲ್ಲಾದ್ರೂ ನಮ್ ಯಜಮಾನ್ರನ್ನ ನೋಡ್ದಾ ಅಂದವರಿಗೆ ಆಕಡೆಯಿಂದ ಬಂದಿದ್ದು ಆಘಾತಕಾರಿ ಉತ್ತರ..‌ ಅಕ್ಕೋ ಅಣ್ಣನ ಮೇಲೆ ಯಾವುದೊ ಕಾರ್ ಹತ್ತಿಸಿಬಿಟ್ಟಿದೆ ಕಣಕ್ಕ ಏನಾಗಿದೆ.. ಅಣ್ಣ ನರಳಾಡುತ್ತಿದ್ದಾನೆ..

ಅಷ್ಟೆ ಇದನ್ನ ಕೇಳ್ತಿದ್ದಂತೆಗೆ ಅಜ್ಜಿಗೆ ಜೀವವೇ ಹೋದಂತೆ ಆಗಿದೆ.. ಒಂದೇ ಸಮನೇ ಜೋರು ಜೋರುಗಿ‌ ಗೋಳಾಡುತ್ತಾ ಕಿರುಚಾಡುತ್ತಾ ಗರ್ಭಿಣಿ ಅನ್ನೋದನ್ನ‌ ಮರೆತು ಪುಟ್ಟನ‌ ಜೊತೆಗೆ ಆ ಜಾಗಕ್ಕೆ ಓಡಿ ಓಡಿ ಹೋಗಿದ್ದಾರೆ.. ಇದನ್ನ ಯಾರೋ ಕಿಟಕಿಯಲ್ಲಿ ಗಮನಿಸಿ‌‌‌ ಹೇಗೋ ಅಲ್ಲೆ ಅಕ್ಕ ಪಕ್ಕದಲ್ಲೇ ಇದ್ದ ಒಂದೆರೆಡು ಮನೆಗಳಿಗೆ ವಿಶಯ ಮುಟ್ಟಿಸಿದ್ದಾರೆ.. ಸ್ವಲ್ಪ‌ ಮಂದಿ ಎಚ್ಚರಗೊಂಡು ಅರೇ ಲಕ್ಷ್ಮಿ ಯಾಕೆ ಒಬ್ಬೊಬ್ನಳೇ ಹೀಗೆ ಗೋಳಾಡಿಕೊಂಡು ಓಡೋಗ್ತಿದ್ದಾಳೆ.. ಅದ್ರಲ್ಲೂ ಈ‌ಸ್ಥಿತಿಯಲ್ಲೇ ಏನೋ ಆಗಿದೆ‌ ಅಂತ ಒಂದ್ ೧೦ ಜನರ ಗುಂಪು ನಮ್ ಅಜ್ಜಿ‌ ಅಲ್ಲಿಂದ ಹೋದ ೧೦ ನಿಮಿಷದ ನಂತರ ಅದೆ ರಸ್ತೆಯಲ್ಲೇ ಓಡಿದ್ದಾರೆ..

ಅಜ್ಜಿ ಕಿರುಚುತ್ತಾ ಅಳುತ್ತಳೇ ಒಢಿ ಓಡಿ ಹೋಗ್ತಿದ್ದಾರೆ.. ಹಿಂದೆ ಪುಟ್ಟ ಬರುತ್ತಜದ್ದಾನೆ ಅಂತಲೇ ಅಂದುಕೊಂಡಿ ಅವರು ಓಡಿ ಓಡಿ ಪುಟ್ಟ ಹೇಳಿದ್ದ ಜಾಗಕ್ಕೆ ಹೋಗಿದ್ದಾರೆ.. ಆದ್ರೆ ಅಲ್ಲಿ ಪುಟ್ಟ ಹೇಏಳಿದ ರೀತಿ ಎನೂ ಆಗೇ ಇರಲಿಲ್ಲ.. ಅಜ್ಜಿಗೆ ಗಾಬರಿಯಾಗಿ ಅಳುತ್ತಲೇ ಪುಟ್ಟ ಎಲ್ಲಿ ಯಾರೀ ಇಲ್ಲ ಅಂತ ಹಿಂದೆ‌ ತಿರುಗಿ‌ ನೋಡಿದ್ರೆ ದೂರ ದೂರದ ವರೆಗೂ ಒಂದು ನರಪಿಳ್ಳೆ ಇಲ್ಲ.. ಸುತ್ತಲೂ ಕತ್ತಲೂ ಅಜ್ಜಿ ಕೈಲಿ‌ ದೀಪದ ಲ್ಯಾಟಿನ್ ನ ಬೆಳಕು ಬಿಟ್ರೆ ಬೇರೆ ಏನೂ ಇರಲಿಲ್ಲ.. ಭಯದಲ್ಲಿ ನಡುಗುತ್ತಾ ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದ್ರೆ ಅವರು ನಿಂತಿದ್ದು ಸ್ಮಶಾಣದ ಹೆಬ್ಬಾಗಿಲ ಬಳಿ.. ಅಜ್ಜಿಗೆ ನಡುಕ‌ಶುರುವಾಗಿದೆ.. ಮಾತು ಬಾರದೇ ಗಂಟಲು ಒಣಗಿದೆ.. ಸುತ್ತಲೂ ಯಾರೂ ಇಲ್ಲ.. ಸ್ಮಷಾಣ ಮೌನ..

ಹಿಂದೆ ಮುಂದೆ ಹೆಜ್ಜೆ ಇಡೋಕೆ ಭಯ.. ಪುಟ್ಟ ಎಲ್ಲೋದ ಅನ್ನೋ ಗೊಂದಲ ,, ಗಂಡ ಎಲ್ಲಿ ಏನಾಯ್ತು ಅನ್ನೋ ದಿಗಿಲ.. ಇದೆಲ್ಲದ್ರ ನಡುವೆ ಎಲ್ಲೋ‌ ಸ್ವಲ್ಪ ದೂರದಿಂದ ಒಬ್ಬ ಹೆಂಗಸು ಅಜ್ಜಿ‌ ಕಡೆಗೆ ಓಡಿ ಬರುತ್ತಿರೋದನ್ನ ಅಜ್ಜಿ ಗಮನಿಸಿದ್ರು
. ಆ ಹೆಂಗಸು ಕಣ್ಣಗಳಲ್ಲಿ‌ ಆಕ್ರೋಶ ಹೊತ್ತು‌ ಅಜ್ಜಿ‌ ಕಡೆಗೆ ಕಿರುಚುತ್ತಾ ಓಡಿ ಬರುತ್ಯಿದ್ರು.. ಅಜ್ಜಿ ಇದನ್ನ‌ ನೋಡಿ ಸಿಕ್ಜಾಪಟ್ಟೆ ಹೆದರಿ ಅಲ್ಲಿಂದ ದಾರಿ‌ ಎಲ್ಲಿಲ್ಲಿ ಕಾಣುತ್ತೋ ಅಲ್ಲೆಲ್ಲಾ‌ ಓಡಿದ್ದಾರೆ.. ಅಜ್ಜಿ ಹಿಂದೆ ಆ ಹೆಂಗಸು ಕೂಡ ಭಯಾನಕವಾಗಿ ಓಡೋಡಿ ಬಂದಿದ್ದಾರೆ.. ಹೀಗೆ‌ ಹೋಗ್ತಾ ಹೋಗ್ತಾ ಅಜ್ಜಿ ಅದ್ಹೇಗೋ ತಮ್ಮ‌ ಊರ ಹೆಬ್ಬಾಗಿಲಿಗೆ ಓಡೋಡಿ ಬಂದಿದ್ಧಾರೆ.. ಇತ್ತ ಆ ಹೆಂಗಸು ಅಜ್ಜಿ ಹಿಂದೆಯೇ ಇನ್ನೂ ಓಡೋಡಿ‌‌ ಬರುತ್ತಿದ್ದಳು.. ಊರ ಬಾಗಿಲಲ್ಲಿ ಕಾಳಿ ಮಂದಿರವಿತ್ತು ಅಜ್ಜಿ ಊರು ದಾಟಬೇಕು ಅಷ್ಟ್ರಲ್ಲೇ ಯಾರೋ ಅಜ್ಜಿಯನ್ನ ಹಿಡಿದು‌ ಹಿಂದೆ ಎಳೆದಿದ್ದಾರೆ.. ಅಜ್ಜಿ ಜೋರಾಗಿ ಕಾಳಿ ಕಾಳಿ ಕಾಪಾಡಮ್ಮ ಅಂತ ಗೋಳಾಡಿದ್ದಾರೆ.. ಆ ಹಿಂಗಸು ಹೇ ನಿಲ್ಲಿಸು ಅವಳ ಹೆಸರು ಹೇಳೋದ್ನ‌ ನಿಲ್ಲಿಸು ಅಂತ ಕಿರುಚುವ ಶಬ್ಧ ಕೇಳಿದೆ.. ಅತ್ತ ನೋಡಿದ್ರೆ ಯಾರೋ ಲಾರಿ ಓಡಿಸಿಕೊಂಡು ಬಂದಿದ್ಧಾರೆ.. ಅದು ಮತ್ಯಾರು ಅಲ್ಲ ತಾತ.. ತಾತನಿಗೆ ಏನೂ ಆಗಿರಲಿಲ್.. ಅದೇ ಸಮಯಕ್ಕೆ ಆ‌ಹೆಂಗಸು ಅಜ್ಜಿಯನ್ನ‌ ಲಾರಿ ಮುಂದೆ ತಳ್ಳಿಬಿಟ್ಟಂತೆ ಆಗಿದೆ.. ಆದ್ರೆ ಲಾರಿಯನ್ನ ತಾತನಿಂದ ನಿಯತ್ರಣಕ್ಕೆ‌‌ ತರಲು ಸಾದ್ಯವಾಗಿರಲಿಲ್.‌ ಅದೇ ಸಮಯಕ್ಕೆ ಅಜ್ಜಿಯನ್ನ ಹುಡುಕಿ ಹೊರಟಿದ್ದು ಗುಂಪು ಊರ ಹೆಬ್ಬಾಗಿಲು ತಲುಪಿತ್ತು ಅಜ್ಜಿ ಲಾರಿಗೆ ಸಿಕ್ರೂ ಅಂದುಕೊಳ್ಳೋ ಅಷ್ಟ್ರಲ್ಲೇ ಯಾರೋ ಅಜ್ಜಿಯನ್ನ‌ ತಕ್ಷಣ ರಸ್ತೆಯಿಂದ ಮತ್ತೊಂದು ಬದಿಗೆ ಹಾರಿಸಿದಂತಾಗಿದೆ..

ಅಜ್ಜಿ‌ ಕಣ್ಮುಚ್ವಿ ಬಿಡೋದ್ರೊಳಗೆ ರಸ್ತೆಯ‌ಆ ಬದಿಯಲ್ಲಿದ್ರು.. ತಾತ ಲಾರಿ ನಿಲ್ಲಿಸಿ‌ ಅಜ್ಜಿ‌ ಬಳಿ ಓಡೋಡಿ ಹೋಗಿ ಅವರನ್ನ ಸಮಾಧನ ಮಾಡಿ ದೇವಸ್ಥಾನದ ಮುಂದೆ ತಂದು ಕೂರಿಸಿ ಸುಧಾರಿಸಿಕೊಳಗಳಲು ಬಿಟ್ಟಿದ್ದಾರೆ..

ಸ್ವಲ್ಪ ಸಮಯದ ನಂತರ ಎಲ್ಲರೂ‌ ಅಜ್ಜಿನ ಬಳಿ ಏನಾಯ್ತಿ ಎಂದು ಕೇಳಿದಾಗ ಅಜ್ಜಿ‌ ಹೇಳಿದ್ದನ್ನ ಕೇಳಿ ತಾತ ಹಾಗೂ ಉಳಿದವರೆಲ್ಲಾ ಭಯಭೀತರಾಗಿದ್ದಾರೆ.. ನಿನ್‌ ಕಾಪಢಿದ್ದು ಆ ತಾಯೇ ಎಂದು ಹೇಳಿದ್ರು.. ಆಗ ಮತ್ತೊಂದು ವಿಚಿತ್ರ ಅನ್ನಿಸ್ತು.. ಅಜ್ಜಿ ಪುಟ್ಟ ಬಂದ ಅಂತ ಹೇಳಿದಾಗ ಶಾಕ್ ಆಗಿತ್ತು.. ಯಾಕಂದ್ರೆ ಅಜ್ಜಿ‌.. ಒಬ್ಬೊಬ್ಬಳೇ ಹುಚ್ಚಿಯಂತೆ ಅಳುತ್ತಾ ಓಡಿ ಹೋಗಿದ್ದು ಅವರ ಹಿಂದೆ ಯಾರೂ ಇರಲಿಲ್ಲವಂತೆ.. ಅದನ್ನ ಕಣ್ಣಾರೆ ನೋಡಿದ್ದ ತಿಪ್ಪೇಶ ಅಜ್ಜಿ‌ ಹಾಗೂ ಎಲ್ರಿಗೂ ತಿಳಿಸಿದ್ದ ಮತೊಂದು ಪುಟ್ಟ ಹಿಂದಿನ ದಿನವೇ ಆಕ್ಸಿಡೆಂಟ್ ನಲ್ಲಿ ಸತ್ತಿದ್ದ ಆತ ಬೇರೆ ಊರಿನವನಾಗಿದ್ದ ..‌ ಅದಕ್ಕೆ‌‌ ಅಷ್ಟಾಗಿ ಅವನ‌ ಸಾವಿನ ಸುದ್ದಿ‌ ಗೊತ್ತಾಗಿರಲಿಲ್ಲ.. ಅಜ್ಜಿ‌ ಬಸರಿಯಾಗಿದ್ದಕ್ಕೆ ಅವರಿಂದ ಮುಚ್ಚಿಟ್ಟಿದ್ರು.. ಇದ್ರಿಂದ ಅಜ್ಜಿ‌ ಮತ್ತಷ್ಟು ಭಯಭೀತರಾದ್ರು.. ಆ‌ ಹೆಂಗಸು ಯಾರು‌ ಅಂದ್ರೆ ಆ ಹೆಂಗಸು ಅದೇ ಊರಿನಲ್ಲಿ ಒಂದು‌ ತಿಂಗಳ ಹಿಂದೆ ನೇಣು ಬಿಗಿದು ಕೊಂಡಿದ್ದ ಬಸರಿ ಹೆಂಗಸು..

ಇದೆಲ್ಲಾ ಕೇಳಿ ಅಲ್ಲಿನ ಜನ ಭಯಭೀತರಾಗಿ ಕಡೆಗೆ ಅಜ್ಜಿಗೆ ಸಮಾಧಾನ‌ ಮಾಡಿ ಮನೆಗೆ ತಾತನ ಜೊತೆಗೆ ಕಳುಹಿಸಿಕೊಟ್ಟೊದ್ದರು..

ಆದ್ರೆ ಅಂದು‌ ಅಜ್ಜಿ ಬದುಕುಲಿಯುವ ಲಕ್ಷಣವೇ ಇರಲಿಲ್ಲ.. ಆದರೆ ಆ ಮಹಾಮಾತೆ ಕಾಳಿಯೇ ಅಜ್ಜಿಯನ್ನ ಕಾಪಾಡಿದ್ಲಾ.?.
ಆ ಪುಟ್ಟ ಅಜ್ಜಿ‌ ಬಳಿ ಬಂದಿದ್ದು ನಿಜಾನಾ ಅಜ್ಜಿಯ ಭ್ರಮೆನಾ

ಆ ಹೆಂಗಸು ಬಂದಿದ್ದು‌ ನಿಜಾನಾ ಇಲ್ಲಾ ಭ್ರಮೆನಾ… ಇದೆಲ್ಲಾ ಖುದ್ದು ಅಜ್ಜಿಗೂ ಗೊತ್ತಿಲ್ಲ.. ಆದ್ರೂ‌ ಅಜ್ಜಿ ಕಥೆ ಕೇಳಿ ನಾವಂತೂ ಸಿಕ್ಕಾಪಟ್ಟೆ ಹೆದರಿದ್ವಿ….

Tags: #saakshatvhorror storiessuthor specialtrue experiences
ShareTweetSendShare
Join us on:

Related Posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

by Honnappa Lakkammanavar
June 8, 2023
0

ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ...

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

by Honnappa Lakkammanavar
April 26, 2023
0

ಹೆಚ್ಚು ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ವಾಟ್ಸ್‌ ಆಪ್‌ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್‌ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್‌...

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

by Honnappa Lakkammanavar
April 17, 2023
0

ವಾಟ್ಸಾಪ್‌ ಬಳಕೆದಾರರ ಸುರಕ್ಷತೆಯ ಹಿನ್ನೆಲೆಯಲ್ಲಿ ವಾಟ್ಸಾಪ್ ಕಂಪನಿಯು 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸೋಮಾಲಿಯಾದಲ್ಲಿ ಭೀಕರ ಬಾಂಬ್ ಸ್ಫೋಟ

ಸೋಮಾಲಿಯಾದಲ್ಲಿ ಭೀಕರ ಬಾಂಬ್ ಸ್ಫೋಟ

June 10, 2023
6200+ ಸ್ಕ್ರೀನ್ಗಳಲ್ಲಿ ಬರಲಿದೆ ಆದಿಪುರುಷ್

6200+ ಸ್ಕ್ರೀನ್ಗಳಲ್ಲಿ ಬರಲಿದೆ ಆದಿಪುರುಷ್

June 10, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram