ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ತಂಡ ನಿರಸ ಪ್ರದರ್ಶನ ತೋರುತ್ತಿದೆ. ಆಡಿರುವ 6 ಪಂದ್ಯಗಳಲ್ಲಿ ಬರೋಬ್ಬರಿ 5ರಲ್ಲಿ ಸೋಲು ಕಂಡಿದೆ. ಹೀಗಾಗಿ ಅದರ ಪ್ಲೇ ಆಪ್ ಹಾದಿ ತುಂಬಾ ಕಠಿಣವಾಗಿದೆ.
ಹೀಗಾಗಿ ಆರ್ ಸಿಬಿ ತಂಡವು ಎರಡು ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಆದರೂ ಆರ್ ಸಿಬಿ ಪ್ಲೇ ಆಫ್ ಹಾದಿ ಜೀವಂತವಾಗಿದ್ದು, ಅದಕ್ಕಾಗಿ ತಂಡ ಹೆಚ್ಚಾಗಿ ಶ್ರಮಿಸಬೇಕಿದೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡವೂ 14 ಪಂದ್ಯ ಆಡಲಿವೆ. ಹೀಗಾಗಿ ಆರ್ ಸಿಬಿ 8 ಪಂದ್ಯಗಳು ಬಾಕಿ ಇವೆ. ಹೀಗಾಗಿ ಆರ್ ಸಿಬಿ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಗೆಲುವು ಸಾಧಿಸಿದರೆ, ಕನಸು ನನಸಾಗಲಿದೆ.
ಮುಂದಿನ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹೀಗಾದರೆ 16 ಅಂಕ ಸಂಪಾಧಿಸುವ ಮೂಲಕ ಪ್ಲೇ ಆಫ್ ಗೆ ಲಗ್ಗೆಯಿಡಬಹುದು. ಆರ್ ಸಿಬಿ 2022 ರ ಐಪಿಎಲ್ನಲ್ಲಿ 16 ಅಂಕ ಪಡೆದು ಪ್ಲೇ ಆಫ್ಗೇರಿತ್ತು. ಆರ್ ಸಿಬಿ ಉಳಿದ 8 ಪಂದ್ಯಗಳಲ್ಲಿ 2 ರಲ್ಲಿ ಸೋತರೆ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. 7 ಗೆಲುವುಗಳೊಂದಿಗೆ 14 ಅಂಕಗಳನ್ನು ಮಾತ್ರ ಗಳಿಸಬಹುದಾಗಿದೆ. ಇಲ್ಲಿ 14 ಅಂಕಗಳಿದ್ದರೂ ಆರ್ಸಿಬಿ ಪ್ಲೇಆಫ್ ತಲುಪಬಹುದು. ಆದರೆ, ರನ್ ರೇಟ್ ಮುಖ್ಯವಾಗುತ್ತದೆ.