Corn Lollipops | ಸ್ವೀಟ್ ಕಾರ್ನ್ ಲಾಲಿಪಾಪ್ಸ್ ಮಾಡೋದು ಹೇಗೆ..?
ಬೇಕಾಗುವ ಪದಾರ್ಥಗಳು
ಚಿಲ್ಲಿ ಫ್ಲೇಕ್ಸ್
ಕಾಳುಮೆಣಸಿನ ಪುಡಿ
ಜೀರಿಗೆ
ದನಿಯಾ- ಅರ್ಧ ಟೀಚಮಚ ದರದಲ್ಲಿ
ಹಸಿ ಮೆಣಸಿಕಾಯಿ – 2
ಸ್ವೀಟ್ ಕಾರ್ನ್ – ಒಂದೂವರೆ ಕಪ್
ಉಪ್ಪು – ಸಾಕಷ್ಟು
ಕಾರ್ನ್ ಫ್ಲೇಕ್ಸ್
ಆಲೂಗಡ್ಡೆ ತುರಿ – ಅರ್ಧ ಕಪ್
ಕಾರ್ನ್ ಪೌಡರ್ – 2 ಟೀಸ್ಪೂನ್
ಮೈದ ಹಿಟ್ಟು – 1 ಟೀಸ್ಪೂನ್
ನೀರು – ಸ್ವಲ್ಪ
ಎಣ್ಣೆ – ಡೀಪ್ ಫ್ರೈಗೆ ಸಾಕಾಗುವಷ್ಟು
ತಯಾರಿಸುವ ವಿಧಾನ
ಮೊದಲು ಸ್ಟವ್ ಆನ್ ಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಜೀರಿಗೆ, ಧನಿಯಾ, ಹಸಿರು ಮೆಣಸಿನಕಾಯಿ ಮತ್ತು ಸ್ವೀಟ್ ಕಾರ್ನ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಚಿಲ್ಲಿ ಫ್ಲೇಕ್, ಪೆಪ್ಪರ್ ಪೌಡರ್ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಬೇಕು. ಅದನ್ನ ಒಂದು ಪ್ಲೇಟ್ ಗೆ ಹಾಕಿಕೊಂಡು ಆಲುಗಡ್ಡೆ ತುರಿ, ಅರ್ಧ ಕಪ್ ಕಾರ್ನ್ ಫ್ಲೇಕ್ಸ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಉಂಡೆಗಳಂತೆ ಮಾಡಿಕೊಳ್ಳಬೇಕು. ನಂತರ ಒಂದು ಸಣ್ಣ ಬಟ್ಟಲಿನಲ್ಲಿ ಮೈದಾ, ಕಾರ್ನ್ ಪೌಡರ್ ಸೇರಿಸಿ ಸ್ವಲ್ಪ ನೀರಿನೊಂದಿಗೆ ಮಿಶ್ರಣ ಮಾಡಿ. ನಂರತ ಉಂಡೆಗಳನ್ನು ಮಿಶ್ರಣದಲ್ಲಿ ಅದ್ದಿ, ಉಳಿದ ಕಾರ್ನ್ ಫ್ಲೇಕ್ಸ್ ಸೇರಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಇಲ್ಲಿಗೆ ಬಿಸಿ ಬಿಸಿ ಸ್ವೀಟ್ ಕಾರ್ನ್ ಲಾಲಿಪಾಪ್ಸ್ ರೆಡಿ how-make-corn-lollipops