Congress – ಬೊಮ್ಮಾಯಿ ಮಾತನಾಡಲು ಎಷ್ಟು ಕಮಿಷನ್ ಬೇಕು
ಬೆಂಗಳೂರು : ದೆಹಲಿಯಲ್ಲಿ ಹಣ ಕೊಟ್ಟು ಸಚಿವರಾದವರಿದ್ದಾರೆ. ಸಿಎಂ ಹುದ್ದೆಗೆ ₹2,500 ಕೋಟಿ ನೀಡಬೇಕು – ಯತ್ನಾಳ್. ಪೋಸ್ಟಿಂಗ್ ಗೆ 80 ಲಕ್ಷ ಕೊಟ್ಟು ಬರುತ್ತಾರೆ – MTB ನಾಗರಾಜ್. ಸಿಎಂ ಕಚೇರಿ ಕೆಲ ಪತ್ರಕರ್ತರಿಗೆ ‘ಸ್ವೀಟ್ ಬಾಕ್ಸ್ ಲಂಚ’ ನೀಡಿದೆ. ಈ ಎಲ್ಲಾ ಸಂಗತಿಗಳಿಗೆ ಬಸವರಾಜ ಬೊಮ್ಮಾಯಿ ಅವರು ಮಾತನಾಡಲು ಎಷ್ಟು ಕಮಿಷನ್ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಸಚಿವ ಎಂಟಿಬಿ ನಾಗರಾಜ್ ಅವರ ವೈರಲ್ ವಿಡಿಯೋ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ಸಚಿವ MTB ನಾಗರಾಜ್ ಅವರು #40ಪರ್ಸೆಂಟ್ ಸರ್ಕಾರದ ಭ್ರಷ್ಟಾಚಾರವನ್ನು ನೇರಾನೇರವಾಗಿ ಬಯಲಿಗಿಟ್ಟಿದ್ದಾರೆ. ನೇಮಕಾತಿ ಅಕ್ರಮ, ವರ್ಗಾವಣೆ ದಂಧೆಗಳನ್ನು ನಡೆದಿರುವುದು ಸ್ಪಷ್ಟಪಡಿಸಿದ್ದಾರೆ. #PayCM ಎಂದಾಕ್ಷಣ ಉರಿದು ಬೀಳುವ ಬಸವರಾಜ ಬೊಮ್ಮಾಯಿ ಅವರೇ, ಪೋಸ್ಟಿಂಗ್ ಪಡೆಯಲು 70, 80 ಲಕ್ಷ ನೀಡಿದ್ದು ಯಾರಿಗೆ? ಯಾರು ಈ ಡೀಲಿಂಗ್ ಮಾಡುವುದು?
◆ದೆಹಲಿಯಲ್ಲಿ ಹಣ ಕೊಟ್ಟು ಸಚಿವರಾದವರಿದ್ದಾರೆ
◆ಸಿಎಂ ಹುದ್ದೆಗೆ ₹2,500 ಕೋಟಿ ನೀಡಬೇಕು
– ಯತ್ನಾಳ್◆ಪೋಸ್ಟಿಂಗ್‌ಗೆ 80 ಲಕ್ಷ ಕೊಟ್ಟು ಬರುತ್ತಾರೆ
– MTB ನಾಗರಾಜ್
◆ಸಿಎಂ ಕಚೇರಿ ಕೆಲ ಪತ್ರಕರ್ತರಿಗೆ 'ಸ್ವೀಟ್ ಬಾಕ್ಸ್ ಲಂಚ' ನೀಡಿದೆಈ ಎಲ್ಲಾ ಸಂಗತಿಗಳಿಗೆ @BSBommai ಅವರು ಮಾತನಾಡಲು ಎಷ್ಟು ಕಮಿಷನ್ ನೀಡಬೇಕು?#SayCM
— Karnataka Congress (@INCKarnataka) October 29, 2022
ಆಪರೇಷನ್ ಕಮಲದ ಮೂಲಕ ಹೋದ ಸಚಿವ MTB ನಾಗರಾಜ್ ಅವರಿಗೆ ಸೋತರೂ ಸಚಿವ ಸ್ಥಾನ ಕೊಟ್ಟು ಮನ್ನಣೆ ನೀಡಿದೆ ಬಿಜೆಪಿ, ಹಾಗಾಗಿ ಅವರ ಮಾತನ್ನೂ ಗಂಭೀರವಾಗಿ ಪರಿಗಣಿಸಬೇಕು. 80 ಲಕ್ಷ ಪಾವತಿಯ ಬಗ್ಗೆ ಅವರಿಗೆ ಸ್ಪಷ್ಟ ಮಾಹಿತಿ ಇರುವಾಗ ತನಿಖೆಗೆ ನೋಟಿಸ್ ನೀಡದಿರುವುದೇಕೆ? ಸುಮೋಟೋ ಕೇಸ್ ದಾಖಲಿಸಿ ಅವರ ಮಾತಿನ ಮರ್ಮ ಶೋಧಿಸಬೇಕಲ್ಲವೇ ಬಸವರಾಜ ಬೊಮ್ಮಾಯಿ ಅವರೇ ಎಂದು ಪ್ರಶ್ನಿಸಿದೆ.

ಈ ಹಿಂದೆ “ನಾನು ಭ್ರಷ್ಟ ಅಧಿಕಾರಿಯಲ್ಲ, ನಾನು ಲಂಚ ಪಡೆಯುವುದಿಲ್ಲ” ಎಂದು ಅಧಿಕಾರಿಗಳು ಬೋರ್ಡ್ ಹಾಕುವ ಅಭಿಯಾನ ಶುರು ಮಾಡಿತ್ತು ಸರ್ಕಾರ. ಸಿಎಂ ಕಚೇರಿಯಲ್ಲಿ ಯಾವ ಹುದ್ದೆಗೆ ಎಷ್ಟೆಷ್ಟು ದರ ಎಂಬ ಬೋರ್ಡ್ ಹಾಕಿದರೆ ಒಳಿತು. ಹಾಗೆಯೇ “ಲಂಚ ಪಡೆಯಲಾಗುವುದು, ಹಾಗೂ ಲಂಚ ನೀಡಲಾಗುವುದು” ಎಂಬ ಬೋರ್ಡ್ ಹಾಕಿಕೊಳ್ಳಲಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.