ಕರ್ನಾಟಕದ ಫೇಮಸ್ ತಿಂಡಿ ಬಿಸಿ ಬೇಳೆಬಾತ್ (Bisi BeleBath) ಯಾರಿಗೆ ಇಷ್ಟವಾಗಲ್ಲ ಹೇಳಿ. ನೋಡುತ್ತಿದ್ದಂತೆಯೇ ತಿನ್ನಬೇಕು ಎನಿಸುವಂತ ಸೂಪರ್ ರೈಸ್ ಐಟಂ ಇದು ಇದರ ಘಮ, ರುಚಿ ಎಷ್ಟೇ ತಿಂದರೂ ಮತ್ತಷ್ಟು ತಿನ್ನಬೇಕು ಎನಿಸುವಂತೆ ಮಾಡುತ್ತದೆ ನೋಡಿ.ಹಾಗದ್ರೆ ಈ ಫೇಮಸ್ ರೆಸಿಪಿಯ ಪುಡಿ ಹೇಗೆ ಮಾಡೋದು ಇಲ್ಲಿದೆ ನೋಡಿ
ಬಿಸಿಬೇಳೆಬಾತ್ ಪುಡಿ ತಯಾರಿಸುವ ವಿಧಾನ
ಅವಶ್ಯಕ ಪದಾರ್ಥಗಳು:
ಕಡಲೆಕಾಳು- 1 ಟೀಚಮಚ
ಉದ್ದಿನಬೇಳೆ- 1 ಟೀಚಮಚ
ಧನಿಯ- 1/2 ಚಮಚ
ಜೀರಿಗೆ- 1 ಚಮಚ
ಮೆಣಸು- 5
ಒಣ ಮೆಣಸಿನಕಾಯಿ- 2
ಗಸಗಸೆ- 1 ಟೀಚಮಚ
ಒಣಕೊಬ್ಬರಿ- 1 ಟೀಚಮಚ
ಅಕ್ಕಿ- 1/2 ಟೀ ಚಮಚ
ಅರಿಶಿಣ- 1/4 ಟೀ ಚಮಚ
ಸಾಸಿವೆ- 1/2 ಟೀಚಮಚ
ದಾಲ್ಚಿನ್ನಿ- 1
ಏಲಕ್ಕಿ- 1
ಲವಂಗ-1
ಮೆಂತ್ಯೆ- ಸ್ವಲ್ಪ
ಕರಿಬೇವು- ಸ್ವಲ್ಪ
ಇಂಗು- 1/4 ಟೀಚಮಚ
ಮಾಡುವ ವಿಧಾನ:
ಮೇಲೆ ತಿಳಿಸಿರುವ ಎಲ್ಲಾ ಸಮಾಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಂಡು ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಟ್ಟುಕೊಳ್ಳಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ಬಿಸಿಬೇಳೆಬಾತ್ ತಯಾರಿಸುವಾಗ ಬೇಳೆ ಮತ್ತು ಅಕ್ಕಿಯನ್ನು ಬೇಯಿಸಿಕೊಂಡು, ಈ ಪುಡಿಯನ್ನು ಉಪಯೋಗಿಸಿ ಬಿಸಿ ಬಿಸಿ ಬೀಸಿಬೇಳೆಬಾತ್ ಮಾಡಲು ಒಮ್ಮೆ ಟ್ರೈ ಮಾಡಿ ನೋಡಿ ಹೇಗಿದೆ ಕಾಮೆಂಟ್ ಮಾಡಿ.








