ಗೋಧೂಳಿ ಸಮಯದಲ್ಲಿ ವರಮಹಾಲಕ್ಷ್ಮಿಯನ್ನು ಪೂಜಿಸುವುದು ಹೇಗೆ..? ಇದು ಲಕ್ಷ್ಮಿ ಪೂಜೆಯ 32 ಹಂತಗಳು
How to worship Varamahalakshmi during twilight..? These are the 32 stages of Lakshmi Puja
ಸದ್ಯದಲ್ಲಿಯೇ ದೇಶದಾದ್ಯಂತ ವರ ಮಹಾಲಕ್ಷ್ಮೀ ವ್ರತ ಪೂಜೆ. ವರಮಹಾಲಕ್ಷ್ಮಿ ಪೂಜೆಯಲ್ಲಿ ನಾನಾ ಹಂತಗಳಿವೆ. 16 ವರಮಹಾಲಕ್ಷ್ಮಿ ಪೂಜಾ ಹಂತಗಳನ್ನು ಒಳಗೊಂಡಿರುವ ಪೂಜೆಯನ್ನು ಶೋಡಶೋಪಚಾರವೆಂದು 32 ಹಂತಗಳನ್ನೊಳಗೊಂಡಿರುವ ವರಮಹಾಲಕ್ಷ್ಮಿ ಪೂಜೆಯನ್ನು ದ್ವಾತ್ರಿಂಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದ್ವಾತ್ರಿಂಶೋಪಚಾರ ಪೂಜೆಯನ್ನು ಬಟ್ಟಿಶೋಪಚಾರ ಪೂಜೆಯೆಂದೂ ಕೂಡ ಕರೆಯಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆಯ ಹಂತಗಳಾವುವು ತಿಳಿದುಕೊಳ್ಳಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಧ್ಯಾನ
ವರಮಹಾಲಕ್ಷ್ಮಿ ಪೂಜೆಯನ್ನು ಲಕ್ಷ್ಮಿಯ ಧ್ಯಾನದೊಂದಿಗೆ ಪ್ರಾರಂಭಿಸಬೇಕು. ನಿಮ್ಮ ಮುಂದೆ ಈಗಾಗಲೇ ಸ್ಥಾಪಿಸಲಾದ ಶ್ರೀ ವರಮಹಾಲಕ್ಷ್ಮಿ ಪ್ರತಿಮೆಯ ಮುಂದೆ ಕುಳಿತು ಧ್ಯಾನವನ್ನು ಮಾಡಬೇಕು. ವರಮಹಾಲಕ್ಷ್ಮಿಯನ್ನು ಈ ಮಂತ್ರದೊಂದಿಗೆ ಧ್ಯಾನಿಸಿ:
ಮಂತ್ರ: ಕ್ಷೀರಸಾಗರ ಸಂಭೂತಂ ಕ್ಷೀರವರ್ಣಸಮಪ್ರಭಂ |
ಕ್ಷೀರವರ್ಣಾಸಮಂ ವಸ್ತ್ರಂ ದಧಾನಾಂ ಹರಿವಲ್ಲಭಂ ||
ಆವಾಹನ
ಶ್ರೀ ವರಮಹಾಲಕ್ಷ್ಮಿ ಧ್ಯಾನವನ್ನು ಮಾಡಿದ ನಂತರ ಆವಾಹನ ಮುದ್ರೆಯ ಮೂಲಕ ಲಕ್ಷ್ಮೀ ಮೂರ್ತಿಯ ಮುಂದೆ ಆವಾಹನ ಮಂತ್ರವನ್ನು ಅನುಸರಿಸಬೇಕು. ಆವಾಹನ ಮುದ್ರೆಯಲ್ಲಿ ಎರಡು ಅಂಗೈಗಳನ್ನು ಮುಂದಕ್ಕೆ ಚಾಚಿ ಎರಡೂ ಹೆಬ್ಬೆರಳುಗಳನ್ನು ಒಳಕ್ಕೆ ಮಡಚಿರಬೇಕು.
ಮಂತ್ರ: ಬ್ರಾಹ್ಮೀ ಹಂಸ ಸಮಾರೂಢ ಧಾರಿಣ್ಯಕ್ಷಕಮಂಡಲು |
ವಿಷ್ಣು ತೇಜೋಧಿಕ ದೇವಿ ಸ ಮಾಮ್ ಪಾತು ವರಪ್ರದ ||
ಆಸನ
ಶ್ರೀ ವರಮಹಾಲಕ್ಷ್ಮಿಯನ್ನು ಆವಾಹನ ಮಾಡಿದ ನಂತರ ಅಂಜಲಿಯಲ್ಲಿ ಅಂದರೆ ಎರಡೂ ಅಂಗೈಯನ್ನು ಜೋಡಿಸಿ 5 ಹೂವುಗಳನ್ನು ತೆಗೆದುಕೊಂಡು ಈ ಮಂತ್ರವನ್ನು ಜಪಿಸುತ್ತಾ ದೇವಿಗೆ ಆಸನ ಮಾಡಲು ಮೂರ್ತಿಯ ಮುಂದೆ ಇಡಬೇಕು.
ಮಂತ್ರ: ಮಹೇಶ್ವರಿ ಮಹಾದೇವಿ ಆಸನಂ ತೇ ದದಾಮ್ಯಹಂ |
ಮಹೈಶ್ವರ್ಯಸಮಾಯುಕ್ತಂ ಬ್ರಾಹ್ಮಣಿ ಬ್ರಾಹ್ಮಣಃ ಪ್ರಿಯೇ ||
ಪಾದ್ಯ
ಶ್ರೀ ವರಮಹಾಲಕ್ಷ್ಮಿಗೆ ಆಸನವನ್ನು ಅರ್ಪಿಸಿದ ನಂತರ ಆಕೆಯ ಪಾದಗಳನ್ನು ನೀರಿನಿಂದ ತೊಳೆಯಬೇಕು. ಪಾದಗಳನ್ನು ತೊಳೆಯುವಾಗ ಈ ಮಂತ್ರಗಳನ್ನು ತಪ್ಪದೇ ಜಪಿಸಿ.
ಮಂತ್ರ: ಕುಮಾರ ಶಕ್ತಿ ಸಂಪನ್ನೆ ಕೌಮರಿ ಶಿಖಿವಾಹನೇ |
ಪಾದ್ಯಂ ದದಾಮ್ಯಹಂ ದೇವಿ ವರದೇ ವರಲಕ್ಷಣೇ ||
ಅರ್ಘ್ಯ
ಲಕ್ಷ್ಮಿಯ ಪಾದಗಳನ್ನು ತೊಳೆದ ನಂತರ ಮಂತ್ರವನ್ನು ಜಪಿಸುತ್ತಾ ಶ್ರೀ ವರಮಹಾಲಕ್ಷ್ಮಿಯ ಮುಖ್ಯ ಅಭಿಷೇಕಕ್ಕೆ ನೀರನ್ನು ಅರ್ಪಿಸಿ.
ಮಂತ್ರ: ತೀರ್ಥೋದಕೈರ್ಮಹಾದಿವ್ಯೈ ಪಾಪಸಂಹಾರಕಾರಕೈಃ |
ಅರ್ಘ್ಯಂ ಗೃಹಣ ಭೋ ಲಕ್ಷ್ಮಿ ದೇವಾನಾಮುಪಕಾರಿಣೀ ||
ಆಚಮನ
ವರಮಹಾಲಕ್ಷ್ಮಿಗೆ ಅರ್ಘ್ಯವನ್ನು ನೀಡಿದ ನಂತರ ಮಂತ್ರವನ್ನು ಅನುಸರಿಸುತ್ತಾ ಆಚಮನಕ್ಕಾಗಿ ವರಮಹಾಲಕ್ಷ್ಮಿಗೆ ನೀರನ್ನು ಅರ್ಪಿಸಿ.
ಮಂತ್ರ: ವೈಷ್ಣವೀ ವಿಷ್ಣುಸಂಯುಕ್ತೇ ಅಸಂಖ್ಯಾಯುಧಧಾರಿಣೀ |
ಆಚಮ್ಯತಾಂ ದೇವಪೂಜ್ಯೆ ವರದೇ ಅಸುರಮರ್ದಿನೀ ||
ಪಂಚಾಮೃತ ಸ್ನಾನ
ಆಚಮನ ಪೂರ್ಣಗೊಂಡ ನಂತರ ಲಕ್ಷ್ಮೀ ದೇವಿಗೆ ಪಂಚಾಮೃತ ಸ್ನಾನವನ್ನು ಮಾಡಿಸಬೇಕು. ಪಂಚಾಮೃತ ಸ್ನಾನದ ಮಂತ್ರ ಹೀಗಿದೆ.
ಮಂತ್ರ: ಪದ್ಮೇ ಪಂಚಾಮೃತೈಃ ಶುದ್ಧೈಃ ಸ್ನಪಯಿಷ್ಯೇ ಹರಿಪ್ರಿಯೇ |
ವರದೇ ಶಕ್ತಿ ಸಂಭೂತೇ ವರದೇವಿ ವರಪ್ರಿಯೇ ||
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಸ್ನಾನ
ವರಲಕ್ಷ್ಮಿಗೆ ಪಂಚಾಮೃತ ಸ್ನಾನವನ್ನು ಮಾಡಿಸಿದ ನಂತರ ನೀರಿನಿಂದ ಆಕೆಗೆ ಸ್ನಾನವನ್ನು ಮಾಡಿಸಬೇಕು. ಲಕ್ಷ್ಮಿಯನ್ನು ನೀರಿನಿಂದ ಸ್ನಾನ ಮಾಡಿಸುವಾಗ ಈ ಮಂತ್ರವನ್ನು ಪಠಿಸಿ.
ಮಂತ್ರ: ಗಂಗಾಜಲಂ ಸಮಾನೀತಂ ಸುಗಂಧೀ ದ್ರವ್ಯ ಸಮಾಯುತಂ |
ಸ್ನಾನಾರ್ಥಂ ತೇ ಮಯ ದತ್ತಂ ಗೃಹಣ ಪರಮೇಶ್ವರಿ ||
ವಸ್ತ್ರ
ಸ್ನಾನದ ನಂತರ ದೇವಿಗೆ ಹೊಸ ವಸ್ತ್ರವನ್ನು ಧರಿಸಬೇಕು. ಆಕೆಗೆ ವಸ್ತ್ರವನ್ನು ಧರಿಸುವಾಗ ಪಠಿಸಬೇಕಾದ ಮಂತ್ರ ಹೀಗಿದೆ.
ಮಂತ್ರ: ರಜತಾದ್ರಿಸಮಂ ದಿವ್ಯಂ ಕ್ಷೀರಸಾಗರ ಸನ್ನಿಭಂ |
ಚಂದ್ರಪ್ರಭಾಸಂ ದೇವಿ ವಸ್ತ್ರಂ ತೇ ಪ್ರದದಾಮ್ಯಹಂ ||
ಕಂಠಸೂತ್ರ
ದೇವಿಯ ಕೊರಳಿಗೆ ಹಾರವನ್ನು ಧರಿಸುವಾಗ ಈ ಮಂತ್ರವನ್ನು ಪಠಿಸಿ, ನಂತರ ಹಾರವನ್ನು ಹಾಕಿರಿ.
ಮಂತ್ರ: ಮಾಂಗಲ್ಯಮಣಿಸಂಯುಕ್ತಂ ಮುಕ್ತಫಲಸಮನ್ವಿತಂ |
ದತ್ತಂ ಮಂಗಲಸೂತ್ರಂ ತೇ ಗೃಹಣ ಸುರವಲ್ಲಭೇ ||
ಆಭರಣ
ದೇವಿಗೆ ಆಭರಣವನ್ನು ಹಾಕುವಾಗ ಈ ಮಂತ್ರವನ್ನು ಪಠಿಸಬೇಕು.
ಮಂತ್ರ: ಸುವರ್ಣಭೂಷಿತಂ ದಿವ್ಯಂ ನಾನಾರತ್ನಸುಶೋಭಿತಂ |
ತ್ರೈಲೋಕ್ಯ ಭೂಷಿತೇ ದೇವಿ ಗೃಹಣಾಭರಣಂ ಶುಭಂ ||
ಗಂಧ ಸಮರ್ಪಣ
ಲಕ್ಷ್ಮೀ ದೇವಿಗೆ ಗಂಧವನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.
ಮಂತ್ರ: ರಕ್ತಗಂಧಂ ಸುಗಂಧಧ್ಯಮಷ್ಟಗಂಧಸಮನ್ವಿತಂ |
ದಾಸ್ಯಾಮಿ ದೇವಿ ವರದೇ ಲಕ್ಷ್ಮಿರ್ದೇವಿ ಪ್ರಸಿದ ಮೇ |
ಸೌಭಾಗ್ಯ ದ್ರವ್ಯ
ಲಕ್ಷ್ಮೀ ದೇವಿಗೆ ಅರಶಿಣ, ಕುಂಕುಮ, ಸಿಂಧೂರ, ಕಾಡಿಗೆ ಸೇರಿದಂತೆ ಇನ್ನಿತರ ಸೌಭಾಗ್ಯ ವಸ್ತುಗಳನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.
ಮಂತ್ರ: ಹರಿದ್ರಾಂ ಕುಂಕುಮಾಂ ಚೈವ ಸಿಂಧೂರಂ ಕಜ್ಜಲಾನ್ವಿತಂ |
ಸೌಭಾಗ್ಯದ್ರವ್ಯಸಮ್ಯುಕ್ತಂ ಗೃಹಣ ಪರಮೇಶ್ವರಿ ||
ಪುಷ್ಪ ಸಮರ್ಪಣೆ
ದೇವಿಗೆ ಅಲಂಕಾರವನ್ನು ಮಾಡಿದ ನಂತರ ಈ ಮಂತ್ರದೊಂದಿಗೆ ಹೂವುಗಳನ್ನು ಅರ್ಪಿಸಬೇಕು.
ಮಂತ್ರ: ನಾನಾವಿಧಾನಿ ಪುಷ್ಪಾಣಿ ನಾನಾ ವರ್ಣಯುತಾನಿ ಚ |
ಪುಷ್ಪಾಣಿ ತೇ ಪ್ರಯಚ್ಚಾಮಿ ಭಕ್ತಯಾ ದೇವಿ ವರಪ್ರದೇ ||
ಅಂಗ ಪೂಜನಾ
ಈಗ ವರಲಕ್ಷ್ಮಿಯನ್ನು ಪೂಜಿಸಬೇಕು. ಗಂಧ, ಅಕ್ಷತೆ ಮತ್ತು ಪುಷ್ಪವನ್ನು ಎಡಗೈಯಲ್ಲಿ ತೆಗೆದುಕೊಂಡು ಮಂತ್ರವನ್ನು ಹೇಳುತ್ತ ಬಲಗೈಯಿಂದ ಶ್ರೀ ವರಲಕ್ಷ್ಮಿ ಮೂರ್ತಿಗೆ ಅರ್ಪಿಸಬೇಕು.
ಮಂತ್ರ: ಓಂ ವರಲಕ್ಷ್ಮ್ಯೈ ನಮಃ ಪಾದೌ ಪೂಜಯಾಮಿ |
ಓಂ ಕಮಲವಾಸಿನ್ಯೈ ನಮಃ ಗುಲ್ಫೌ ಪೂಜಯಾಮಿ |
ಓಂ ಪದ್ಮಲಯಾಯೈ ನಮಃ ಜಂಘೇ ಪೂಜಯಾಮಿ |
ಓಂ ಶ್ರೀಯ್ಯೈ ನಮಃ ಜಾನುನಿ ಪೂಜಯಾಮಿ |
ಓಂ ಇಂದಿರಾಯ್ಯೈ ನಮಃ ಉರು ಪೂಜಯಾಮಿ |
ಓಂ ಹರಿಪ್ರಿಯ್ಯೈ ನಮಃ ನಾಭಿ ಪೂಜಯಾಮಿ |
ಓಂ ಲೋಕದಾತ್ರ್ಯೈ ನಮಃ ಸ್ತಾನೌ ಪೂಜಯಾಮಿ |
ಓಂ ವಿದಾತ್ರ್ಯೈ ನಮಃ ಕಠಂ ಪೂಜಯಾಮಿ |
ಓಂ ದಾತ್ರ್ಯೈ ನಮಃ ನಾಸಾಂ ಪೂಜಯಾಮಿ |
ಓಂ ಸರಸ್ವತ್ಯೈ ನಮಃ ಮುಖಂ ಪೂಜಯಾಮಿ |
ಓಂ ಪದ್ಮಾನಿಧಯೇ ನಮಃ ನೇತ್ರೇ ಪೂಜಯಾಮಿ |
ಓಂ ಮಾಂಗಲ್ಯೈ ನಮಃ ಕರ್ಣೌ ಪೂಜಯಾಮಿ |
ಓಂ ಶ್ರೀ ಮಹಾಲಕ್ಷ್ಮ್ಯೈ ನಮಃ ಶಿರಃ ಪೂಜಯಾಮಿ |
ಓಂ ಶ್ರೀ ಮಹಾಕಾಳ್ಯೈ ನಮಃ ಸರ್ವಾಂಗಂ ಪೂಜಯಾಮಿ |
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಧೂಪ
ಲಕ್ಷ್ಮೀ ದೇವಿಗೆ ಧೂಪವನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸಬೇಕು
ಮಂತ್ರ: ಧೂಪಂ ದಾಸ್ಯಾಮಿ ತೇ ದೇವಿ ಗೋ ಘೃತೇನ ಸಮನ್ವಿತಂ |
ಪ್ರತಿಗ್ರಹಣ ಮಹಾದೇವಿ ಭಕ್ತಾನಾಂ ವರದಪ್ರಿಯೇ |
ದೀಪ
ಲಕ್ಷ್ಮೀ ದೇವಿಗೆ ದೀಪವನ್ನು ಬೆಳಗುವಾಗ ಈ ಕೆಳಗಿನ ಮಂತ್ರವನ್ನು ಹೇಳಬೇಕು.
ಮಂತ್ರ: ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ |
ದೀಪಂ ಗ್ರಹಣ ದೇವೇಶಿ ತ್ರೈಲೋಕ್ಯತಿಮಿರಾಪಹಂ ||
ನೈವೇದ್ಯ
ದೀಪದ ನಂತರ ದೇವಿಗೆ ನೈವೇದ್ಯವನ್ನು ಈ ಮಂತ್ರದೊಂದಿಗೆ ಅರ್ಪಿಸಬೇಕು.
ಮಂತ್ರ: ನೈವೇದ್ಯಂ ಪರಂ ದಿವ್ಯಂ ದೃಷ್ಟಿಪ್ರಿತಿಕರಂ ಶುಭಂ |
ಭಕ್ಷ್ಯಭೋಜ್ಯಾದಿಸಂಯುಕ್ತಂ ಪರಮಾನ್ನಾದಿಸಂಯುತಂ ||
ತಾಂಬೂಲ
ಲಕ್ಷ್ಮೀ ದೇವಿಗೆ ಎಲೆ ಅಡಿಕೆಯ ತಾಂಬೂಲವನ್ನು ನೀಡುವಾಗ ಈ ಮಂತ್ರವನ್ನು ಹೇಳಬೇಕು.
ಮಂತ್ರ: ನಾಗವಲ್ಲಿದಲೈರ್ಯುಕ್ತಂ ಚೂರ್ಣಕ್ರಮುಕಸಂಯುಕ್ತಂ |
ವರಲಕ್ಷ್ಮೀ ಗ್ರಹಣ ತ್ವಂ ತಾಂಬೂಲಂ ಪ್ರತಿಗೃಹ್ಯತಾಂ ||
ದಕ್ಷಿಣಾ
ಲಕ್ಷ್ಮೀ ದೇವಿಗೆ ಉಡುಗೊರೆಯನ್ನು ನೀಡುವಾಗ ತಪ್ಪದೇ ಈ ಮಂತ್ರವನ್ನು ಪಠಿಸಬೇಕು.
ಮಂತ್ರ: ಸುವರ್ಣಂ ಸರ್ವಧಾತುನಾಂ ಶ್ರೇಷ್ಠಂ ದೇವಿ ಚ ತತ್ಸದಾ |
ಭಕ್ತಯಾ ದದಾಮಿ ವರದೇ ಸ್ವರ್ಣವೃಷ್ಠಿಂ ಚ ದೇಹಿ ಮೇ ||
ನೀರಾಜನ
ನಂತರ ವರಮಹಾಲಕ್ಷ್ಮಿಗೆ ನೀರಾಜನ ಅಂದರೆ ಆರತಿಯನ್ನು ಬೆಳಗಬೇಕು. ನೀವು ಆರತಿಯನ್ನು ಬೆಳಗುವಾಗ ಈ ಮಂತ್ರವನ್ನು ಪಠಿಸುತ್ತ ಆರತಿಯನ್ನು ಬೆಳಗುವುದು ಉತ್ತಮ.
ಮಂತ್ರ: ನೀರಾಜನಂ ಸುಮಂಗಲ್ಯಂ ಕರ್ಪೂರೇಣಾ ಸಮನ್ವಿತಂ |
ಚಂದ್ರಾರ್ಕವಹ್ನಿಸದೃಶಂ ಗ್ರಹಣ ದೇವಿ ನಮೋಸ್ತು ತೇ ||
ದೋರಕಬಂಧನ
ದೋರಕಗ್ರಹಣದ ನಂತರ ಲಕ್ಷ್ಮೀ ಪೂಜೆಯನ್ನು ಮಾಡುವ ಭಕ್ತರು ದೋರಕ ಅಂದರೆ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ದಾರವನ್ನು ಕಟ್ಟುವಾಗ ಈ ಮಂತ್ರವನ್ನು ಜಪಿಸಿ.
ಮಂತ್ರ: ಕರಿಷ್ಯಾಮಿ ವ್ರತಂ ದೇವಿ ತ್ವದ್‌ಭಕ್ತಸ್ತ್ವತ್ಪರಾಯಣ |
ಶ್ರೀಯಂ ದೇಹಿ ಯಶೋ ದೇಹಿ ಸೌಭಾಗ್ಯಂ ದೇಹಿ ಮೇ ಶುಭೇ ||
ಪುನರ್ ಅರ್ಘ್ಯ
ಲಕ್ಷ್ಮೀ ದೇವಿಗೆ ದೋರಕಬಂಧನವನ್ನು ಮಾಡಿದ ನಂತರ, ಮತ್ತೊಮ್ಮೆ ದೇವಿಗೆ ಅರ್ಘ್ಯವನ್ನು ಅರ್ಪಿಸಬೇಕು. ದೇವಿಗೆ ಮತ್ತೊಮ್ಮೆ ಅರ್ಘ್ಯವನ್ನು ಅರ್ಪಿಸುವಾಗ ನಿಮ್ಮ ಮಂತ್ರ ಬೇರೆಯದ್ದಾಗಿರಬೇಕು. ಪುನರ್ ಅರ್ಘ್ಯವನ್ನು ನೀಡುವಾಗ ಜಪಿಸಬೇಕಾದ ಮಂತ್ರವಿದು.
ಮಂತ್ರ: ಕ್ಷೀರಾರ್ಣವಸುತೇ ಲಕ್ಷ್ಮಿಶ್ಚಂದ್ರಸ್ಯ ಚ ಸಹೋದರಿ |
ಗ್ರಹಣಾರ್ಘ್ಯಂ ಮಹಾಲಕ್ಷ್ಮಿರ್ದೇವಿ ತುಭ್ಯಂ ನಮೋಸ್ತು ತೇ ||
ಬಿಲ್ವಪತ್ರ
ವರಮಹಾಲಕ್ಷ್ಮಿ ಗೆ ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಿ.
ಮಂತ್ರ: ಶ್ರೀವೃಕ್ಷಸ್ಯ ದಳಂ ದೇಹಿ ಮಹಾದೇವಪ್ರಿಯಂ ಸದಾ |
ಬಿಲ್ವಪತ್ರಂ ಪ್ರಯಚ್ಛಾಮಿ ಪವಿತ್ರಂ ತೇ ಸುನಿರ್ಮಲಂ ||
ಪ್ರದಕ್ಷಿಣಾ
ಈಗ ನೀವು ದೇವಿಗೆ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರದಕ್ಷಿಣೆಯನ್ನು ಯಾವಾಗಲೂ ನಿಮ್ಮ ಎಡದಿಂದ ಬಲಕ್ಕೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ಪಠಿಸಬೇಕಾದ ಮಂತ್ರವಿದು.
ಮಂತ್ರ: ಇಹ ಜನ್ಮನಿ ಯತ್ಪಾಪಂ ಮಮ ಜನ್ಮಾಂತರೇಷು ಚ |
ನಿವಾರಯ ಮಹಾದೇವಿ ಲಕ್ಷ್ಮೀ ನಾರಾಯಣ ಪ್ರಿಯೇ ||
ನಮಸ್ಕಾರ ಲಕ್ಷ್ಮೀ ದೇವಿಗೆ ನಮಸ್ಕರಿಸುವ ಜಪಿಸಬೇಕಾದ ಮಂತ್ರವಿದು.
ಮಂತ್ರ: ಕಾಮೋದರಿ ನಮಸ್ತೇಸ್ತು ನಮಸ್ತ್ರೈಲೋಕ್ಯನಾಯಿಕೇ |
ಹರಿಕಾಂತೇ ನಮಸ್ತೇಸ್ತು ತ್ರಾಹಿ ಮಾಮ್ ದುಃಖಸಾಗರಾತ್ ||
ವ್ರತ ಸಮರ್ಪಣ
ಈ ಎಲ್ಲಾ ನಿಯಮಗಳು ಮುಗಿದ ನಂತರ ದೇವಿ ಲಕ್ಷ್ಮೀ ವ್ರತವನ್ನು ಸಮರ್ಪಿಸಬೇಕು. ವ್ರತ ಸಮರ್ಪಣೆಗೆ ನೀವು ಈ ಮಂತ್ರವನ್ನು ಹೇಳಿ.
ಮಂತ್ರ: ಕ್ಷೀರಾರ್ಣವಸಮುದ್ಭೂತೇ ಕಮಲೇ ಕಮಲಾಲಯೇ |
ಪ್ರಯಚ್ಛ ಸರ್ವಕಾಮಾಂಶ್ಚ ವಿಷ್ಣು ವಿಷ್ಣು ವಕ್ಷಃ ಸ್ಥಲಾಲಯ ||
ಕ್ಷಮಾಪಣಾ
ನೀವು ಪೂಜೆಯಲ್ಲಿ ತಿಳಿದು ಅಥವಾ ತಿಳಿಯದೆಯೋ ಮಾಡಿದ ತಪ್ಪಗಳಿಗೆ ಲಕ್ಷ್ಮಿಯಲ್ಲಿ ಕ್ಷಮೆಯನ್ನು ಕೇಳಲು ಈ ಮಂತ್ರವನ್ನು ಪಠಿಸಿ. ಇದರಿಂದ ಲಕ್ಷ್ಮಿ ನಿಮ್ಮ ತಪ್ಪುಗಳನ್ನು ಕ್ಷಮಿಸುವಳು.
ಮಂತ್ರ: ಛತ್ರಂ ಚಾಮರಮಾಂದೋಲಂ ದತ್ತ್ವಾ ವ್ಯಜನದರ್ಪಣೆ |
ಗೀತಾವಾದಿತ್ರನೃತ್ಯೈಶ್ಚ ರಾಜಸಮ್ಮಾನನೈಸ್ತಥಾ |
ಕ್ಷಮಾಪಯೇ ಸೂಪಚಾರೈಃ ಸಮಭ್ಯರ್ಚ್ಯ ಮಹೇಶ್ವರೀ ||
ಪ್ರಾರ್ಥನಾ
ಈಗ ಲಕ್ಷ್ಮೀ ದೇವಿಗೆ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆ ಮಾಡುವ ಮಂತ್ರ.
ಮಂತ್ರ: ವರಲಕ್ಷ್ಮೀರ್ ಮಹಾದೇವಿ ಸರ್ವಕಾಮ – ಪ್ರದಾಯಿನಿ |
ಯನ್ಮಯಾ ಚ ಕೃತಂ ದೇಹಿ ಪರಿಪೂರ್ಣಾಂ ಕುರುಶ್ವ ತತ್ |
ವಾಯನಮಂತ್ರ
ನಂತರ ಶ್ರೀ ವರಮಹಾಲಕ್ಷ್ಮಿಗೆ ಸಿಹಿಯನ್ನು ಅರ್ಪಿಸುವಾಗ ಈ ಮಂತ್ರವನ್ನು ಪಠಿಸಬೇಕು.
ಮಂತ್ರ: ಏಕವಿಂಶತಿಪಕ್ವಾನ್ನಶರ್ಕರಾಘೃತಸಂಯುತಂ |
ವಾಯನಂ ತೆ ಪ್ರಯಚ್ಛಾಮಿ ಇಂದಿರಾ ಪ್ರಿಯತಾಮಿತಿ |
ಇಂದಿರಾ ಪ್ರತಿಗ್ರಹಣಾತಿ ಇಂದಿರಾ ವೈ ದದಾತಿ ಚ |
ಇಂದಿರಾ ತಾರಕೋಭಾಭ್ಯಾಮಿಂದಿರಾಯೈ ನಮೋಃ ನಮಃ ||
ಪೂಜಾ ಸಮರ್ಪಣ
ಪೂಜೆಯ ಕೊನೆಯದಾಗಿ ತಾಯಿ ಲಕ್ಷ್ಮಿಗೆ ಪೂಜೆಯನ್ನು ಸಮರ್ಪಿಸಬೇಕು. ಪೂಜೆಯನ್ನು ಸಮರ್ಪಿಸಲು ಈ ಮಂತ್ರವನ್ನು ಪಠಿಸಿ.
ಮಂತ್ರ: ಪಂಚ ವಾಯನಕಾನೇವಂ ದದ್ಯಾದ್ ದಕ್ಷಿಣಾಯಾ ಯುತಾನ್ |
ವಿಪ್ರಾಯ ಚಾಥ್ ಚತಯೇ ದೇವ್ಯೈ ತು ಬ್ರಹ್ಮಚಾರಿಣೇ |
ಸುವಾಸಿನ್ಯೈ ತತಸ್ತ್ವೇಕಂ ದಾಪಯೆಚ್ಛ ಯಥಾವಿಧಿ ||
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564