ಅಣ್ಣನ ಕೊಲೆ ಆರೋಪದಲ್ಲಿ ಜೈಲು ಸೇರಿದ ಮಿಸ್ ಕರ್ನಾಟಕ, ಛೋಟಾ ಬಾಂಬೆ ನಟಿ
ಹುಬ್ಬಳ್ಳಿ : ಮಿಸ್ ಕರ್ನಾಟಕ , ಮಾಜಿ ಗಗನಸಖಿ ಹಾಗೂ ಛೋಟಾ ಬಾಂಬೆ ಸಿನಿಮಾದ ನಟಿ ಶನಾಯಾ ಕಾಟವೆಯನ್ನ ಇದೀಗ ತನ್ನ ಸ್ವಂತ ಅಣ್ಣನ ಕೊಲೆ ಆರೋಪದಲ್ಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತನ್ನ ಪ್ರೀತಿಗೆ ಅಡ್ಡ ಬಂದ ಸಹೋದರನ ಕೊಲೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ನಟಿಯನ್ನ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ನಟಿ ಶನಯಾ ಕಾಟವೇ ತನ್ನ ಸೆಲೆಬ್ರಿಟಿ ಮ್ಯಾನೇಜರ್ ನಿಯಾಜ್ ಅಹ್ಮದ್ ಎಂಬಾತನನ್ನ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಸಹೋದರ ರಾಕೇಶನನ್ನ ನಟಿಯ ಪ್ರಿಯತಮ ಹಾಗೂ ಸಹಚರರು ಕೊಲೆ ಮಾಡಿದ್ದರು.
ಎಪ್ರಿಲ್ 9ರಂದು ನಟಿಯ ಸಹೋದರ ರಾಕೇಶನನ್ನ ಕೊಲೆ ಮಾಡಲಾಗಿತ್ತು. ಕೊಲೆ ಬಳಿಕ ಮೂರು ದಿನ ಶವವನ್ನ ಕಾರಿನಲ್ಲೆ ಮುಚ್ಚಿಡಲಾಗಿತ್ತು. ಆದ್ರೆ ಶವದ ವಾಸನೆ ಬರುತ್ತಿದ್ದಂತೆ ರುಂಡ, ಮುಂಡ, ಎರಡು ಕೈ ಎರಡು ಕಾಲುಗಳನ್ನ ಕತ್ತರಿಸಿ ದೇಹವನ್ನ ಫೀಸ್ ಫೀಸ್ ಮಾಡಿ ಬೇರೆ ಬೇರೆ ಕಡೆ ಎಸೆಯಲಾಗಿತ್ತು.
ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಇತ್ತೀಚಿಗೆ ನಿಯಾಜ್ ಅಹ್ಮದ್ ಕಟಿಗಾರ, ತೌಸೀಫ ಅಹ್ಮದ್ ಚೆನ್ನಾಪುರ, ಅಲ್ತಾಫ ತಾಜುದ್ದೀನ ಮುಲ್ಲಾ ಹಾಗೂ ಅಮನ ಅಲಿಯಾಸ್ ಮಹ್ಮದ ಉಮರ ಗಿರಣಿವಾಲೆ ಎಂಬವರನ್ನ ಬಂಧನ ಮಾಡಿದ್ರು.
ಇದೇ ಪ್ರಕರಣದಲ್ಲಿ ನಟಿ ಶನಾಯ ಕಾಟವೆ ಸಹಿತ ಮಲೀಕ್, ಫಿರೋಜ್ ಹಾಗೂ ಶೈಪುದ್ದೀನ ಎಂಬಾತನನ್ನ ಬಂಧನ ಮಾಡಿದ್ದಾರೆ. ಈ ಮೂಲಕ ಸಹೋದರನ ಕೊಲೆ ಪ್ರಕರಣದಲ್ಲಿ ನಟಿ ಸೇರಿದಂತೆ ಎಂಟು ಜನರನ್ನ ಬಂಧನ ಮಾಡಲಾಗಿದೆ.
ನಿಧಿ ಚರಿತ್ರೆ ಪ್ರಶ್ನಿಸಿದ ಸಂಬರಗಿ – ಕೊಚ್ಚೆ ಮೇಲೆ ಕಲ್ಲು ಹಾಕಬೇಡ ಎಂದು ನಿಧಿಗೆ ಸಮಾಧಾನ ಮಾಡಿದ ಮಂಜು..!
ಬಾಲಿವುಡ್ ನ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ
ದೆಹಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ 25 ಮಂದಿ ಸಾವು
BIGGBOSS 8 : ಈ ವಾರವೂ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ದರ್ಶನವಾಗಲ್ಲ..!








