Hubballi | ತಾರಿಹಾಳ ಬೆಂಕಿ ಅವಘಡ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಹುಬ್ಬಳ್ಳಿ : ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಸ್ಪಾರ್ಕಲ್ ಪ್ಯಾಕ್ಟರಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡ ಮತ್ತಿಬ್ಬರು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಈ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಗದಗ ಮೂಲದ ವಿಜಯಲಕ್ಷ್ಮಿ ನಿನ್ನೆ ಸಾವಿಗೀಡಾಗಿದ್ದರು.
ಇಂದು ಬೆಳಗಿನ ಜಾವ ಮತ್ತೋರ್ವ ಮಹಿಳೆ ಹಾಗೂ ಪುರುಷನೋರ್ವ ಮೃತಪಟ್ಟಿದ್ದಾರೆ.

ತಾರಿಹಾಳ ಕೈಗಾರಿಕಾ ಪ್ರದೇಶದ ಮೊದಲ ಅಡ್ಡರಸ್ತೆಯಲ್ಲಿರುವ ಸ್ಪಾರ್ಕರ್ ತಯಾರಿಕಾ ಘಟಕದಲ್ಲಿ ನಿನ್ನೆ ಅಗ್ನಿ ಅವಘಡ ಉಂಟಾಗಿತ್ತು.
ದುರ್ಘಟನೆಯಲ್ಲಿ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಈ ಕಾರ್ಖಾನೆ ಕೇವಲ 15 ದಿನದ ಹಿಂದಷ್ಟೆ ಆರಂಭವಾಗಿತ್ತು.
ಘಟನೆಯ ಬಳಿಕ ಮಾಲೀಕ ತಬ್ಸುಮ್ ಶೇಕ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.








