ಭೋಪಾಲ್ : ಸ್ನೇಹಿತ ಜೊತೆ ಸೆಕ್ಸ್ ಮಾಡುವಂತೆ ಕಿರುಕುಳ ನೀಡುತ್ತಿದ್ದ ಪತಿಯ ಕಿರುಕುಳ ಸಹಿಲಾಗದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ವಾಲಿಯರ್ ನಗರದಲ್ಲಿ ಈ ಘಟನೆ ನಡೆದಿದೆ. ಗೋಸ್ಪುರಾ ಪ್ರದೇಶದಲ್ಲಿ ನಿವಾಸಿ ಸೀತಾಗೆ ಒಂದು ವರ್ಷದ ಹಿಂದೆ ರಾಜೀವ್ (ಹೆಸರನ್ನು ಬದಲಾಯಿಸಲಾಗಿದೆ) ಎಂಬಾತನ ಜೊತೆ ಮದುವೆಯಾಗಿತ್ತು. ಆರೋಪಿ ರಾಜೀವ್ ವಿವಾಹವಾದ ಸ್ವಲ್ಪ ದಿನದವರೆಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.
ಆದ್ರೆ ದಿನಕಳೆದಂತೆ ರಾಜೀವ್ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ಆತ ಪತ್ನಿಯ ನಗ್ನ ಫೋಟೋವನ್ನು ತನ್ನ ಫೋನಿನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದನು. ನಂತರ ಆ ಫೋಟೋಗಳನ್ನು ಆರೋಪಿ ರಾಜೀವ್ ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದನು. ಕೆಲವು ದಿನಗಳ ನಂತರ ಆರೋಪಿ ತನ್ನ ಸ್ನೇಹಿತರೊಂದಿಗೆ ಸೆಕ್ಸ್ ಮಾಡುವಂತೆ ಸೀತಾಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.
ಕೊನೆಗೆ ಪತಿಯ ಕಿರುಕುಳವನ್ನು ಸಹಿಸಲಾಗದೆ ಸೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.








