`ನಾನು ಕೂಡ ಬ್ರಾಹ್ಮಣ’ : ಚರ್ಚೆಗೆ ಗ್ರಾಸವಾದ ರೈನಾ ಹೇಳಿಕೆ
ಚೆನ್ನೈ : ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಅವರ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೈದಾನದ ಒಳಗೂ ಹೊರಗೂ ಸಭ್ಯ ನಡವಳಿಕೆಯಿಂದ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ರೈನಾ ಅವರಿಂದ ಇಂತಹದೊಂದು ಹೇಳಿಕೆಯು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಸುರೇಶ್ ರೈನಾ ಇತ್ತೀಚೆಗೆ ತಮಿಳುನಾಡು ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಕಾಮೆಂಟರಿ ಪ್ಯಾನೆಲ್ನಲ್ಲಿ ವಿಶೇಷ ಆತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸಿಎಸ್ ಕೆಯನ್ನು ಪ್ರತಿನಿಧಿಸುತ್ತಿರುವ ನೀವು ತಮಿಳು ನಾಡಿನ ಸಂಸ್ಕøತಿಗೆ ಹೇಗೆ ಹೊಂದಿಕೊಂಡಿದ್ದೀರಾ ಎಂಬ ಪ್ರಶ್ನೆಗೆ ಸುರೇಶ್ ರೈನಾ ಉತ್ತರವಾಗಿ ‘ನಾನು ಕೂಡಾ ಬ್ರಾಹ್ಮಣ’ ಎಂದು ಒಂದಿಷ್ಟು ವಿವರಣೆ ನೀಡಿದರು. ಇದೀಗ ರೈನಾರ ಆ ಹೇಳಿಕೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿದೆ.
https://twitter.com/i/status/1417148507970887683
ಸುರೇಶ್ ರೈನಾ ವಿಡಿಯೋದಲ್ಲಿ ನಾನು ಕೂಡಾ ಬ್ರಾಹ್ಮಣ. 2004ರಿಂದ ಚೆನ್ನೈನಲ್ಲಿ ಆಡುತ್ತಿದ್ದೇನೆ. ಇಲ್ಲಿನ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ. ನನ್ನ ಸಹ ಆಟಗಾರರನ್ನು ಪ್ರೀತಿಸುತ್ತೇನೆ. ನಾನು ಚೆನ್ನೈ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಸಿಎಸ್ಕೆ ಭಾಗವಾಗಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ಇಲ್ಲಿ ಮತ್ತಷ್ಟು ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ’ ಎಂದಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದನ್ನು ಶೇರ್ ಮಾಡಿಕೊಂಡು ತಮಿಳುನಾಡು ಸಂಸ್ಕೃತಿಗೂ, ಬ್ರಾಹ್ಮಣ ಆಗಿರುವುದಕ್ಕೂ ಏನಯ್ಯಾ ಸಂಬಂಧ’ ಎಂದು ಪ್ರಶ್ನಿಸುತ್ತಿದ್ದಾರೆ.