ಬೆಂಗಳೂರು: ಸ್ಯಾಂಡಲ್ ವುಡ್ ನಟರು ಡ್ರಗ್ಸ್ ತೆಗೆದುಕೊಳ್ಳುವುದು ನಿಜ ಎಂದು ಯುವ ನಟ ರಕ್ಷತ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೆಲವರು ಡ್ರಗ್ಸ್ ತೆಗೆದುಕೊಳ್ಳುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಹೀಗಾಗಿ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಇರುವುದು ನಿಜ ಎಂದು ಗಟ್ಟಿಮೇಳ ಧಾರಾವಾಹಿಯ ನಟ ರಕ್ಷತ್ ಒಪ್ಪಿಕೊಂಡಿದ್ದಾರೆ.
ನನಗೂ ಕೆಲವರು ಡ್ರಗ್ಸ್ ತೆಗೆದುಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಆದ್ರೆ, ನಾನು ಅವರ ಬಲವಂತಕ್ಕೆ ಮಣಿಯಲಿಲ್ಲ. ಇಲ್ಲಿ ಯಾರು ಹೆಚ್ಚು, ಕಡಿಮೆ ಎಂದು ಹೇಳಲ್ಲ. ಆದರೆ, ಕೆಲವರು ಡ್ರಗ್ಸ್ ತೆಗೆದುಕೊಂಡು ಶೂಟಿಂಗ್‍ಗೆ ಹೋಗ್ತಾರೆ. ಅವರ ಹೆಸರನ್ನು ಹೇಳಲು ಇಷ್ಟವಿಲ್ಲ ಎಂದಿದ್ದಾರೆ.
ಕೆಲ ನಟರು ಡ್ರಗ್ಸ್ ತೆಗೆದುಕೊಂಡು ಅದರಲ್ಲೇ ಕಳೆದು ಹೋಗಿದ್ದಾರೆ. ಅವರು ಡ್ರಗ್ಸ್ ಮಾಯೆಯಿಂದ ಹೊರ ಬರಬೇಕು ಎಂಬುದು ಮನವಿಯಾಗಿದೆ ಎಂದು ನಟ ರಕ್ಷತ್ ತಿಳಿಸಿದ್ದಾರೆ.
ಬಿಗ್ ಬಾಸ್ 11ರ ಸೀಸನ್ ಗೆ ದಿನಗಣನೆ ಆರಂಭ
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಆರಂಭವಾಗಿದ್ದು, ಸೆ. 29ರಿಂದ ಆರಂಭವಾಗಲಿದೆ. ಅಲ್ಲದೇ, ಈ ಸೀಸನ್ ನ್ನು ಕೂಡ ಕಿಚ್ಚ ಸುದೀಪ್ (Kiccha...