ICC men’s T20 : ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಸೂರ್ಯಕುಮಾರ್ ಯಾದವ್…
ಭಾರತ ತಂಡದ ಸ್ಪೋಟಕ ಬ್ಯಾಟ್ಸಮನ್ ಸೂರ್ಯಕುಮಾರ್ ಯಾದವ್ ICC Mens T20I ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಸಿಕಂದರ್ ರಜಾ, ಸ್ಯಾಮ್ ಕರ್ರನ್ ಮತ್ತು ಮೊಹಮ್ಮದ್ ರಿಜ್ವಾನ್ ಜೊತೆಗೆ ನಾಮನಿರ್ದೇಶನಗೊಂಡ ಏಕೈಕ ಭಾರತೀಯ ಆಟಗಾರನಾಗಿ ಸೂರ್ಯಕುಮಾರ್ ಸೇರಿಕೊಂಡಿದ್ದಾರೆ.
ಈ ವರ್ಷ ಸೂರ್ಯಕುಮಾರ್ ಯಾದವ್ 31 ಪಂದ್ಯಗಳಿಂದ 46.56ರ ಸರಾಸರಿಯಲ್ಲಿ 1164 ರನ್ ಮತ್ತು 187.43 ಸ್ಟ್ರೈಕ್ ರೆಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವರ್ಷ ಟಿ20 ಕ್ರಿಕಟ್ ನಲ್ಲಿ 1000 ರನ್ ಗಳಿಸಿದ ಏಕೈಕ ಬ್ಯಾಟ್ಸಮನ್ ಸೂರ್ಯ ಕುಮಾರ್ ಯಾದವ್. ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ ಒಟ್ಟು 68 ಸಿಕ್ಸರ್ ಸಿಡಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲೂ ಭರ್ಜರಿ ಬ್ಯಾಟ್ ಬೀಸಿದ್ದ ಸೂರ್ಯ ಭರ್ಜರಿ ಮೂರು ಅರ್ಧಶತಕ ಗಳಿಸಿದ್ದರು.
ICC’s men’s T20 : Suryakumar Yadav nominated for ICC T20I Cricketer of the Year 2022