ICC ODI Rankings: ಒಂದು ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆದ ಭಾರತ
ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಧೂಳಿಪಟ ಮಾಡಿದ ಟೀಂ ಇಂಡಿಯಾ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದೆ.
ಇಂಗ್ಲೆಂಡ್ ವಿರುದ್ದದ ಗೆಲುವಿನೊಂದಿಗೆ ಭಾರತ ತಂಡ ಐಸಿಸಿ ಏಕದಿನ ರ್ಯಾಂಕಿಂ್ ನಲ್ಲಿ ಮೂರನೇ ಸ್ಥಾನಕ್ಕೇರಿದೆ.
ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಅಂತರದ ಗೆಲುವಿನೊಂದಿಗೆ ರೋಹಿತ್ ಶರ್ಮಾ ಪಡೆ ಮೂರು ರೇಟಿಂಗ್ ಪಾಂಯಿಂಟ್ಸ್ ಪಡೆದುಕೊಂಡು ಟಾಪ್ 3 ಗೆ ಎಂಟ್ರಿ ಕೊಟ್ಟಿದೆ.

ಪಾಕಿಸ್ತಾನ್ ತಂಡವನ್ನು ನಾಲ್ಕನೇ ಸ್ಥಾನಕ್ಕೆ ನೆಟ್ಟಿದೆ.
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ 126 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೇ ಇಂಗ್ಲೆಂಡ್ 122 ಪಾಂಯಿಂಟ್ಸ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾ 108 ಅಂಕ, ಪಾಕಿಸ್ತಾನ್ ತಂಡ 106 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡ, ಸೌತ್ ಆಫ್ರಿಕಾ ತಂಡ 99 ಪಾಯಿಂಟ್ಸ್ ಪಡೆದುಕೊಂಡಿದೆ.
ಇನ್ನು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಈಗ ಒಂದು ಪಂದ್ಯವನ್ನು ಗೆದ್ದು ಮುನ್ನಡೆಯಲ್ಲಿದೆ.