ICC ODI Rankings : ಟೀಂ ಇಂಡಿಯಾವನ್ನು ಹಿಂದಿಕ್ಕಿದ ಪಾಕಿಸ್ತಾನ್
ಐಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಏಕದಿನ ರ್ಯಾಕಿಂಗ್ ನಲ್ಲಿ ಪಾಕಿಸ್ತಾನ್ ತಂಡ ಟೀಂ ಇಂಡಿಯಾವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.
ಇದರೊಂದಿಗೆ ಭಾರತ ಕ್ರಿಕೆಟ್ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ.
ಸ್ವದೇಶದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ ತಂಡ ಕ್ಲೀನ್ ಸ್ವೀಪ್ ಸಾಧಿಸಿದೆ.
ಇದರೊಂದಿಗೆ ಪಾಕಿಸ್ತಾನ್ ತಂಡದ ಖಾತೆಯಲ್ಲಿ ನಾಲ್ಕು ಅಂಕಗಳು ಬಿದ್ದಿವೆ.
ಅಲ್ಲದೇ ಪಾಕ್ 106 ಅಂಕಗಳೊಂದಿಗೆ ಐಸಿಸಿ ಏಕದಿನ ರ್ಯಾಕಿಂಗ್ ನಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಟೀಂ ಇಂಡಿಯಾ 105 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಕುಸಿದಿದೆ.
ಇನ್ನು ಈ ಪಟ್ಟಿಯಲ್ಲಿ 125 ಅಂಕಗಳೊಂದಿಗೆ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ.
124 ಅಂಕಗಳೊಂದಿಗೆ ಇಂಗ್ಲೆಂಡ್ ತಂಡ ಎರಡನೇ ಸ್ಥಾನದಲ್ಲಿದೆ.
107 ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನದಲ್ಲಿದೆ.
ಅಂದಹಾಗೆ ಟೀಂ ಇಂಡಿಯಾ ಮುಂದೆ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನಾಡಲಿದೆ.
ಆಗ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಹಿಂದಿಕ್ಕಬಹುದು.