ICC Player Of The Month: ನಾಮಿನಿಸ್ ಯಾರಂದ್ರೆ..?

1 min read
icc-player-month-award-march-2022 saaksha tv

ICC Player Of The Month: ನಾಮಿನಿಸ್ ಯಾರಂದ್ರೆ..?

ಐಸಿಸಿ 2022 ಮಾರ್ಚ್ ತಿಂಗಳಿಗಾಗಿ ಪ್ಲೇಯರ್ ಆಫ್ ದಿ ಮಂತ್ ಅವಾರ್ಡ್ ನ ನಾಮನಿರ್ದೇಶಿತ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್, ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ನಾಯಕ ಕ್ರೇಗ್ ಬ್ರಾಥ್‌ವೈಟ್ ಸೇರಿದ್ದಾರೆ.

ಕಳೆದ ತಿಂಗಳು ಆಸೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನದ ನಾಯಕ ಬಾಬರ್ ಅಜಮ್, ತಿಂಗಳ ಆಟಗಾರ ಪ್ರಶಸ್ತಿಯ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಎರಡೂವರೆ ದಶಕಗಳ ನಂತರ ಪಾಕಿಸ್ತಾನ್ ನಲ್ಲಿ ತಂಡವನ್ನು ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆಸಿದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ನಾಯಕ ಬ್ರಾಥ್ ವೈಟ್ ಕೂಡ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಆಸೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ 5 ಇನಿಂಗ್ಸ್‌ಗಳಲ್ಲಿ  ಬಾಬರ್ ಒಂದು ಶತಕ ಮತ್ತು 2 ಅರ್ಧ ಶತಕಗಳೊಂದಿಗೆ 78 ರ ಸರಾಸರಿಯಲ್ಲಿ 390 ರನ್ ಗಳಿಸಿದ್ದಾರೆ.

icc-player-month-award-march-2022  saaksha tv

ಅವರು 3 ODIಗಳಲ್ಲಿ 2 ಶತಕಗಳನ್ನು ಮತ್ತು ಒಂದು ಅರ್ಧ ಶತಕವನ್ನು ಗಳಿಸಿದ್ದಾರೆ. ಇದಲ್ಲದೇ ಟಿ 20 ಸರಣಿಯಲ್ಲೂ ಬಾಬರ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದೇ ಸರಣಿಯಲ್ಲಿ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅಂತಿಮ ಟೆಸ್ಟ್ ನಲ್ಲಿ 8 ವಿಕೆಟ್ ಪಡೆದು ತಮ್ಮ ತಂಡದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟೆಸ್ಟ್ ಸರಣಿಯಲ್ಲಿ ಒಟ್ಟು 12 ವಿಕೆಟ್ ಕಬಳಿಸಿದ್ದ ಕಮ್ಮಿನ್ಸ್ ಸರಣಿಯುದ್ದಕ್ಕೂ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು.

ಮತ್ತೊಂದೆಡೆ, ವಿಂಡೀಸ್ ನಾಯಕ ಬ್ರಾಥ್‌ವೈಟ್ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಅವರು ಸರಣಿಯ ಭಾಗವಾಗಿ 3 ಟೆಸ್ಟ್‌ಗಳಲ್ಲಿ ಒಂದು ಶತಕ ಮತ್ತು 2 ಅರ್ಧಶತಕಗಳ ಸಹಾಯದಿಂದ 85.25 ಸರಾಸರಿಯಲ್ಲಿ 341 ರನ್ ಗಳಿಸಿದ್ದಾರೆ.

ಬ್ರಾಥ್ ವೈಟ್ ಅವರ ಅಬ್ಬರದ ಪ್ರದರ್ಶನದಿಂದಾಗಿ ವಿಂಡೀಸ್ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. icc-player-month-award-march-2022 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd