ಐಸಿಸಿ ಟಿ20 ರ್ಯಾಂಕಿಂಗ್ | ಕೊಹ್ಲಿ ಸ್ಥಾನಕ್ಕೆ ಕೆ.ಎಲ್.ರಾಹುಲ್..
ದುಬೈ : ಐಸಿಸಿ ಪುರುಷರ ಟಿ 20 ರ್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಐದನೇ ಸ್ಥಾನದಿಂದ ಏಂಟನೇ ಸ್ಥಾನಕ್ಕೆ ಕುಸಿದಿದ್ದಾರೆ.
ಎಂಟನೇ ಸ್ಥಾನದಲ್ಲಿದ್ದ ಕೆ.ಎಲ್.ರಾಹುಲ್ ಐದನೇ ಸ್ಥಾನಕ್ಕೇರಿದಿದ್ದಾರೆ.
698 ರೇಟಿಂಗ್ ಪಾಯಿಂಟ್ ನೊಂದಿಗೆ ಐದನೇ ಸ್ಥಾನದಿಂದ ವಿರಾಟ್ 8ನೇ ಸ್ಥಾನಕ್ಕೆ ಕುಸಿದರೆ, ರಾಹುಲ್ 727 ಪಾಯಿಂಟ್ ಗಳಿಂದ 5ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಉಳಿದಂತೆ ಪಾಕಿಸ್ಥಾನದ ನಾಯಕ ಬಾಬರ್ ಅಜಮ್ 839 ಪಾಯಿಂಟ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಡೇವಿಡ್ ಮಲಾನ್ (800), ಮೂರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾಕ್ರ್ರಾಮ್ ಇದ್ದಾರೆ.
ವಿಶ್ವಕಪ್ ಗೂ ಮುನ್ನ ಎಂಟನೇ ಸ್ಥಾನದಲ್ಲಿದ್ದ ಮಾಕ್ರ್ರಾಮ್, ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಲಂಕಾ ಆಲ್ ರೌಂಡರ್ ವನಿಂದು ಹಸರಂಗ 797 ರೇಟಿಂಗ್ ಪಾಯಿಂಟ್ ಗಳಿಂದ ಮೊದಲನೇ ಸ್ಥಾನದಲ್ಲಿದ್ದಾರೆ.
ಆಲ್ ರೌಂಡರ್ ವಿಭಾಗದಲ್ಲಿ ಅಫ್ಘಾನಿಸ್ಥಾನದ ಆಲ್ ರೌಂಡರ್ ಮೊಹಮ್ಮದ್ ನಬಿ ಮೊದಲನೇ ಸ್ಥಾನದಲ್ಲಿದ್ದಾರೆ.