IDBI Bank Specialist Cadre Officers Recruitment 2025 : ಐಡಿಬಿಐ ಬ್ಯಾಂಕಿನಲ್ಲಿ ಅಗತ್ಯವಿರುವ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಸ್ಪೆಷಲಿಸ್ಟ್ ಕೇಡರ್ ಆಫೀಸರ್ (ಡೆಪ್ಯೂಟಿ ಜನರಲ್ ಮ್ಯಾನೇಜರ್, ಅಸಿಸ್ಟಂಟ್ ಜನರಲ್ ಮ್ಯಾನೇಜರ್, ಮ್ಯಾನೇಜರ್)
ಕರ್ತವ್ಯ ಸ್ಥಳ : ಭಾರತದೆಲ್ಲೆಡೆ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : 119
ಹುದ್ದೆ ಹುದ್ದೆಗಳ ಸಂಖ್ಯೆ
ಡೆಪ್ಯೂಟಿ ಜನರಲ್ ಮ್ಯಾನೇಜರ್ 8
ಅಸಿಸ್ಟಂಟ್ ಜನರಲ್ ಮ್ಯಾನೇಜರ್ 42
ಮ್ಯಾನೇಜರ್ 69
ಶೈಕ್ಷಣಿಕ ಅರ್ಹತೆ :
• ಡೆಪ್ಯೂಟಿ ಜನರಲ್ ಮ್ಯಾನೇಜರ್ – ಸಿಎ/ ಐಸಿಡಬ್ಲ್ಯೂಎ/ ಬಿ.ಎಸ್ಸಿ/ ಬಿಇ/ ಬಿ.ಟೆಕ್/ ಎಂಬಿಎ/ ಎಂ.ಎಸ್ಸಿ/ ಸ್ನಾತಕೋತ್ತರ ಪದವಿ/ ಪದವಿ.
• ಅಸಿಸ್ಟಂಟ್ ಜನರಲ್ ಮ್ಯಾನೇಜರ್ – ಬಿ.ಟೆಕ್/ ಬಿಇ/ ಎಂ.ಎಸ್ಸಿ/ ಎಂ.ಸಿ.ಎ/ ಎಂ.ಟೆಕ್/ ಎಂಇ/ ಸಿಎ/ ಐಸಿಡಬ್ಲ್ಯೂಎ/ ಎಂ.ಬಿ.ಎ/ ಎಲ್.ಎಲ್.ಬಿ/ ಬಿ.ಎಸ್ಸಿ/ ಸ್ನಾತಕೋತ್ತರ ಪದವಿ/ ಪದವಿ.
• ಮ್ಯಾನೇಜರ್ – ಸಿಎ/ ಐಸಿಡಬ್ಲ್ಯೂಎ/ ಎಂ.ಬಿ.ಎ/ ಬಿಸಿಎ/ ಬಿ.ಎಸ್ಸಿ/ ಬಿ.ಟೆಕ್/ ಬಿಇ/ ಪದವಿ.
ವಯೋಮಾನ :
• ಡೆಪ್ಯೂಟಿ ಜನರಲ್ ಮ್ಯಾನೇಜರ್ – ಕನಿಷ್ಠ 35 ವರ್ಷ, ಗರಿಷ್ಠ 45 ವರ್ಷ
• ಅಸಿಸ್ಟಂಟ್ ಜನರಲ್ ಮ್ಯಾನೇಜರ್ – ಕನಿಷ್ಠ 28 ವರ್ಷ, ಗರಿಷ್ಠ 40 ವರ್ಷ
• ಮ್ಯಾನೇಜರ್ – ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 5 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
ಹುದ್ದೆ ವೇತನ
ಡೆಪ್ಯೂಟಿ ಜನರಲ್ ಮ್ಯಾನೇಜರ್ 1,97,000
ಅಸಿಸ್ಟಂಟ್ ಜನರಲ್ ಮ್ಯಾನೇಜರ್ 1,64,000
ಮ್ಯಾನೇಜರ್ 1,24,000
ಆಯ್ಕೆ ವಿಧಾನ : ಪ್ರಿಲಿಮಿನರಿ ಸ್ಕ್ರೀನಿಂಗ್, ಗ್ರೂಪ್ ಡಿಸ್ಕಷನ್ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅನುಭವ : ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ನಿಗದಿತ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕ :
• ಪ.ಜಾತಿ/ ಪ.ಪಂ. ಅಭ್ಯರ್ಥಿಗಳು – ರೂ. 250
• ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ಅಭ್ಯರ್ಥಿಗಳು – ರೂ. 1,050
ಶುಲ್ಕ ಪಾವತಿಸುವ ವಿಧಾನ : ನಿಗದಿಪಡಿಸಿದ ಶುಲ್ಕವನ್ನು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಏಪ್ರಿಲ್ 07, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 20, 2025