CSK | ಜಡ್ಡು ಔಟ್ ಆದ್ರೆ.. ಚೆನ್ನೈಗೆ 16 ಕೋಟಿ ಉಳಿಯುತ್ತೆ..
ಐಪಿಎಲ್-2022ರ ಸೀಸನ್ ಟೀಂ ಇಂಡಿಯಾ ಆಲ್‌ರೌಂಡರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ರವೀಂದ್ರ ಜಡೇಜಾಗೆ ಕಹಿ ಅನುಭವ ನೀಡಿದೆ. ಕಳೆದ ಋತುವಿನಲ್ಲಿ, ಜಡ್ಡು 16 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದರು.
12 ಇನ್ನಿಂಗ್ಸ್‌ಗಳಲ್ಲಿ 227 ರನ್ ಗಳಿಸಿದ್ದರು. ಆದ್ರೆ ಈ 15ನೇ ಆವೃತ್ತಿಯಲ್ಲಿ ಜಡೇಜಾ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಹೆಚ್ಚು ಪ್ರಭಾವ ಬೀರಲೇ ಇಲ್ಲ.
ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿ ಎಂದು ಭಾವಿಸಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನಾ ರವೀಂದ್ರ ಜಡೇಜಾ ಅವರಿಗೆ 16 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಜೊತೆಗೆ ಟೂರ್ನಿ ಆರಂಭಕ್ಕೂ ಮುನ್ನ ಜಡೇಜಾಗೆ ನಾಯಕತ್ವ ನೀಡಿತ್ತು.
ಆದ್ರೆ ಆಲ್ ರೌಂಡರ್ ಆಗಿ ತಮ್ಮದೇಯಾದ ಛಾಪು ಮೂಡಿಸಿದ್ದ ರವೀಂದ್ರ ಜಡೇಜಾ ತಂಡದ ಸಾರಥಿಯಾಗಿ ಯಶ ಕಾಣಲೇ ಇಲ್ಲ. ಕ್ಯಾಪ್ಟನ್ಸಿ ಒತ್ತಡವನ್ನು ಸಹಿಸಿಕೊಳ್ಳಲಾಗದೇ ಸ್ವತಃ ಅವರೇ ನಾಯಕತ್ವದಿಂದ ಕೆಳಗಿಳಿದರು.
ಈ ಆವೃತ್ತಿಯಲ್ಲಿ 116 ರನ್ ಗಳಿಸಿದ ಜಡೇಜಾ, ಕೇವಲ ಐದು ವಿಕೆಟ್ ಮಾತ್ರ ಪಡೆದರು. ಅಲ್ಲದೇ ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಇದರಿಂದಾಗಿ ಸಾಕಷ್ಟು ಟೀಕೆಗಳಿಗೆ ಜಡೇಜಾ ಅವರು ಗುರಿಯಾದರು.
ಈ ಹಿನ್ನೆಲೆಯಲ್ಲಿ ಧೋನಿಯೇ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥಿಯಾದರು.ಆದ್ರೆ ಜಡೇಜಾ ಮಾತ್ರ ಇಂಚೂರಿಯ ನೆಪವೊಡ್ಡಿ ಟೂರ್ನಿಯಿಂದ ಹೊರ ನಡೆದರು.
ಇದರೊಂದಿಗೆ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಏನೋ ಆಗಿದೆ ಅನ್ನೋದು ಸ್ಪಷ್ಟವಾಯ್ತು. ಆದ್ರೆ ಈ ಸುದ್ದಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಳ್ಳಿಹಾಕಿದೆ.
ಆದ್ರೂ ಈ ವಿಚಾರವಾಗಿ ಆಗಿಂದ್ದಾಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಈ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಮಾತನಾಡಿ, ರವೀಂದ್ರ ಜಡೇಜಾ ವಿಷಯದಲ್ಲಿ ಅದೆಷ್ಟೋ ಪ್ರಶ್ನೆಗಳು ಹಾಗೇ ಉಳಿದುಬಿಟ್ಟಿವೆ. ಕೊನೆಯ ಪಂದ್ಯಗಳಿಗೆ ಆತ ಲಭ್ಯವಿರಲಿಲ್ಲ.
ಅದಕ್ಕೂ ಮೊದಲು ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಚೆನ್ನೈ ಫ್ರಾಂಚೈಸಿ 16 ಕೋಟಿ ಕೊಟ್ಟು ರಿಟೈನ್ಡ್ ಮಾಡಿಕೊಂಡಿದೆ. ಆದ್ರೆ ಇತ್ತೀಚಿನ ಬೆಳವಣಿಗಳು ನೋಡಿದ್ರೆ ಮುಂದಿನ ವರ್ಷಕ್ಕೆ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಇರುವುದಿಲ್ಲ. ಸ್ವತಃ ಧೋನಿಯೇ ಹೇಳಿದಂತೆ.. ಕ್ಯಾಪ್ಟನ್ಸಿ ಜಡೇಜಾ ಆಟದ ಮೇಲೆ ತೀವ್ರವಾದ ಪ್ರಭಾವ ಬೀರಿದ್ದಾಗಿ ಹೇಳಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ. ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಡೇಜಾ ಅವರನ್ನು ಬಿಟ್ಟರೇ ಫ್ರಾಂಚೈಸಿಗೆ 16 ಕೋಟಿ ರುಪಾಯಿ ಉಳಿಯುತ್ತದೆ. ಆದ್ರೆ ಅವರಿಗೆ ಜಡ್ಡು ಅವರಂತಹ ಆಟಗಾರ ಮತ್ತೆ ಸಿಗೋದಿಲ್ಲ ಎಂದಿದ್ದಾರೆ ಆಕಾಶ್ ಚೋಪ್ರಾ. if-csk-release-him-free-16-crore-says-aakash-chopra-jadeja